ಆರೋಗ್ಯ ಸಚಿವರ ಅನಾರೋಗ್ಯ ಕೆಲಸ : ಕೋಟೆ ನಾಡಲ್ಲಿ ಶ್ರೀರಾಮುಲು ದರ್ಬಾರ್

ಜನರಿಗೆ ಬುದ್ದಿ ಹೇಳಬೇಕಾದ, ಮತ್ತೊಬ್ಬರಿಗೆ ಮಾದರಿಯಾಗಿರಬೇಕಾದ ಆರೋಗ್ಯ ಸಚಿವರು ಅನಾರೋಗ್ಯ ಕೆಲಸ ಮಾಡಿರುವುದು ಬೆಳಕಿಗೆ ಬಂದಿದೆ.

ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಪರುಷುರಾಮ್ ಪುರದಲ್ಲಿ ವೇದಾವತಿ ನದಿಗೆ ಬಾಗಿನ ಅರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ಎತ್ತಿನಗಾಡಿಯಲ್ಲಿ ಅದ್ದೂರಿ ಮೆರವಣಿಗೆ ಮಾಡಿದ್ದಾರೆ. ಇದರಲ್ಲಿ ನೂರಾರು ಜನ ಭಾಗಿಯಾಗಿದ್ದು, ಸಾಮಾಜಿಕ ಅಂತರ , ಮಾಸ್ಕ್ ಎಲ್ಲವನ್ನೂ ಮರೆತಿದ್ದಾರೆ. ಅದ್ದೂರಿ ಮೆರವಣಿಗೆ ಮೂಲಕ ಬಾಗಿನ ಅರ್ಪಣೆ ಮಾಡಿದ ಆರೋಗ್ಯ ಸಚಿವರ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಸೇಬಿನ ಹಾರವನ್ನು ಹಾಕಿಕೊಂಡು ಎತ್ತಿನ ಗಾಡಿಯಲ್ಲಿ ಸಚಿವರನ್ನು ಅದ್ದೂರಿ ಮೆರವಣಿಗೆ ಮಾಡಲಾಗಿದೆ. ಇದೇ ಕೆಲಸವನ್ನು ಜನ ಸಾಮಾನ್ಯರು ಮಾಡಿದ್ರೆ ನಾಯಕರು ಸುಮ್ಮನೆ ಬಿಡ್ತಾಯಿದ್ರಾ..?  ಜಿಲ್ಲಾಡಳಿತ ಸುಮ್ಮಿನೆ ಕೈಕಟ್ಟಿ ಕುಳಿತುಕೊಳ್ಳುತ್ತಿತ್ತಾ..? ಎನ್ನುವ ಪ್ರಶ್ನೆ ಹಾಕುತ್ತಿದ್ದಾರೆ.

ಆರೋಗ್ಯ ಇಲಾಖೆಯ ನಿಯಾಮಾವಳಿಗಳನ್ನೇ ಗಾಳಿಗೆ ತೂರಿದ ಆರೋಗ್ಯ ಸಚಿವ ಶ್ರೀರಾಮುಲು ಅಭಿಮಾನಿಗಳಿಂದ ಸೇಬಿನ ಹಾರ ಹಾಕಿಸಿಕೊಂಡು ಮೆರವಣಿಗೆ ಮಾಡಿಸಿಕೊಂಡಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ#EnSuddi

Posted by EnSuddi on Tuesday, June 2, 2020

ಸಾರ್ವಜನಿಕರಿಗೆ  ಹೇಳುವುದೇ ಒಂದು ತಾವು ಮಾಡುವುದೇ ಮತ್ತೊಂದು. ಹೀಗಾದರೆ ಸಾರ್ವಜನಿಕರಿಗೆ ಬುದ್ಧಿ ಹೇಳುವ ನೈತಿಕತೆ ಸಚಿವರಿಗೆ ಇದಿಯಾ..? ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಮೆರವಣಿಗೆ ಹೆಚ್ಚು ಜನರನ್ನು ಸೇರಿಸಿಕೊಂಡು ಯಾವುದೇ ಕಾರ್ಯಕ್ರಮಗಳನ್ನ ಮಾಡುವ ಹಾಗಿಲ್ಲ. ಇಡೀ ದೇಶ ಸಾಮಾಜಿಕ ಕೊರೊನಾ ಹೋಗಲಾಡಿಸಲು ಮುಂದಾದರೆ ಆರೋಗ್ಯ ಸಚಿವರು ಕೋಟೆ ನಾಡಲ್ಲಿ ಶ್ರೀರಾಮುಲು ದರ್ಬಾರ್ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಮುಖಂಡ, ಗೋ ಮಧುಸೂದನ್, ‘ನಾಯಕರಿಂದ ತಪ್ಪಾಗಿದೆ. ನಾಯಕರು ಈ ಸಮಯದಲ್ಲಿ ಹುಚ್ಚಾಟಗಳಿಗೆ ಬೆಂಬಲಕೊಡಬಾರದು. ನಾನೂ ಕೂಡ  ಇದನ್ನ ಒಪ್ಪುವುದಿಲ್ಲಾ. ಕ್ರಮ ಕೈಗೊಳ್ಳಬೇಕಾ? ಬೇಡಾ..? ಎನ್ನುವುದು ಜಿಲ್ಲಾಡಳಿತಕ್ಕೆ ಬಿಟ್ಟ ಸಂಗತಿ ಎಂದಿದ್ದಾರೆ.”

ಕೊರೊನಾ ಮಾರ್ಗ ಸೂಚಿಗಳು ಆರೋಗ್ಯ ಸಚಿವರಿಗೆ ಅನ್ವಯವಾಗುವುದಿಲ್ವಾ..? ಬೇಜವಬ್ದಾರಿತನವನ್ನು ಯಾರೂ ಪ್ರಶ್ನಿಸುವುದಿಲ್ವಾ..? ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights