ಮೋದಿ ಫೋಟೋ ಶೂಟ್‌ಗಾಗಿ ಸಭಾಂಗಣವನ್ನು ಆಸ್ಪತ್ರಯನ್ನಾಗಿ ಮಾಡಲಾಗಿತ್ತ?

ಚೀನಾ ವಿರುದ್ಧದ ಸಂಘರ್ಷದಲ್ಲಿ ಗಾಯಗೊಂಡಿದ್ದ ಸೈನಿಕರನ್ನು ಲಡಾಖ್ ಆಸ್ಪತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ಮಾಡಿದ ಫೋಟೊಗಳ ಕುರಿತು ಎದ್ದಿರುವ ವಿವಾದಕ್ಕೆ ಭಾರತೀಯ ಸೇನೆ ಸ್ಪಷ್ಟನೆ ನೀಡಿದೆ.

ಕೇವಲ ಪ್ರಧಾನಿಯವರ ಫೋಟೋಶೂಟ್‌ಗಾಗಿ ಆ ಆಸ್ಪತ್ರೆಯನ್ನು ರಚಿಸಲಾಗಿದೆ. ಅದರಲ್ಲಿ ಪ್ರೊಜೆಕ್ಟರ್, ಮೈಕ್ ಎಲ್ಲಾ ಇದ್ದು ರೋಗಿಗಳಿಗೆ ಅಗತ್ಯವಾಗಿರುವ ಮೆಡಿಸನ್ ಟೇಬಲ್, ಬೆಡ್ ಶೀಟ್ ಇಲ್ಲ. ಇದೇ ಹಾಲ್ ನಲ್ಲಿ ಈ ಹಿಂದೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರು ಭೇಟಿ ಕೊಟ್ಟಾಗ ಔತಣಕೂಟ ಏರ್ಪಡಿಲಾಗಿತ್ತು. ಈ ಮೋದಿ ಹೋದಾಗ ಆಸ್ಪತ್ರೆಯನ್ನಾಗಿ ಬದಲಾಯಿಸಲಾಗಿದೆ ಎಂಬ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದ್ದವು.

ಈ ಆರೋಪವು ದುರುದ್ದೇಶಪೂರಿತ ಮತ್ತು ಆಧಾರರಹಿತವಾಗಿದೆ ಎಂದು ಭಾರತೀಯ ಸೇನೆಯು ಹೇಳಿದೆ. ವೈದ್ಯಕೀಯ ವಾರ್ಡ್ ಆಡಿಯೊ-ವಿಡಿಯೋ ತರಬೇತಿ ಕೊಠಡಿಯಾಗಿದ್ದು, ಇದನ್ನು ಪ್ರಧಾನಿ ಮೋದಿಯ ಭೇಟಿಗೆ ಬಹಳ ಹಿಂದೆಯೇ ಕೋವಿಡ್-19 ಪ್ರೋಟೋಕಾಲ್‌ನ ಭಾಗವಾಗಿ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ ಎಂದು ಅದು ಹೇಳಿದೆ.

“ನಮ್ಮ ಕೆಚ್ಚೆದೆಯ ಸಶಸ್ತ್ರ ಪಡೆಗಳಿಗೆ ಸಮರ್ಪಕ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಆರೋಪಿಸುತ್ತಿರುವುದು ದುರದೃಷ್ಟಕರ. ಸಶಸ್ತ್ರ ಪಡೆಗಳು ತಮ್ಮ ಸಿಬ್ಬಂದಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆಯನ್ನು ನೀಡುತ್ತವೆ” ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.

ಚೀನಾದ ಸೈನ್ಯದೊಂದಿಗಿನ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ್ದಾರೆ. ಘಟನೆ ನಡೆದ ಎರಡು ವಾರಗಳ ನಂತರ ಪ್ರಧಾನಿ ಮೋದಿ ಅವರು ಶುಕ್ರವಾರ ಲಡಾಖ್‌ಗೆ ಅಘೋಷಿತ ಭೇಟಿ ನೀಡಿದ್ದು, ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೈನಿಕರನ್ನು ಭೇಟಿಯಾದರು.

https://twitter.com/pythoroshan/status/1279223557797511168?ref_src=twsrc%5Etfw%7Ctwcamp%5Etweetembed%7Ctwterm%5E1279223557797511168%7Ctwgr%5E&ref_url=http%3A%2F%2Fnaanugauri.com%2Fthe-audio-video-hall-has-been-turned-into-a-hospital-the-clarification-by-army%2F

ಪ್ರಧಾನಿಯವರು ನಿಮುಗೆ ಭೇಟಿ ನೀಡಿದ್ದಾರೆ. ಆದು ಪ್ರವಾಸಿ ತಾಣವಾಗಿದೆ. ಆದರೆ ಘರ್ಷಣೆ ನಡೆದ ಸ್ಥಳದಿಂದ 200 ಕಿ.ಮೀ ದೂರದಲ್ಲಿದೆ. ಅವರು ಗಡಿಯ ಹತ್ತಿರಕ್ಕೆ ಹೋಗಿ ಸೈನಿಕರನ್ನು ಭೇಟಿ ಮಾಡಬೇಕಿತ್ತು ಎಂಬ ಆರೋಪಗಳು ಸಹ ಕೇಳಿಬಂದಿವೆ.

ಇದು ಆಸ್ಪತ್ರೆಯೇ? ಇದು ಕಾನ್ಫರೆನ್ಸ್ ಹಾಲ್‌ನಂತಿದೆ. ವೈಟ್‌ಬೋರ್ಡ್, ಪ್ರೊಜೆಕ್ಟರ್ ಎಲ್ಲಾ ಇವೆ! ಗಾಯಗೊಂಡ ಸೈನಿಕರಿಗೆ ಪಾಠ ಮಾಡುತ್ತಾರೆಯೆ? ಯಾವುದೇ ಆಸ್ಪತ್ರೆಯ ಬೆಡ್‌ಗಳ ಪಕ್ಕ ಔಷಧಿ ಇಡುವ ಚಿಕ್ಕ ಟೇಬಲ್ ಇರುತ್ತದೆ. ಇಲ್ಲಿ ಎಲ್ಲಿದೆ? ಬೆಡ್‌ಶೀಟ್ ಇಲ್ಲ, ಯಾರೂ ಮಲಗಿರದಂತೆ ಒಂದು ಸುಕ್ಕು ಕೂಡಾ ಇಲ್ಲದಂತೆ ನೀಟಾಗಿದೆ. “ಗಾಯ ಗೊಂಡ” ಸೈನಿಕರು ಮಲಗಿರದೆ ಒಂದೇ ಪೋಸಿನಲ್ಲಿ ಯೋಗ ಮಾಡುವ ಗೊಂಬೆಗಳಂತೆ ಕುಳಿತಿದ್ದಾರೆ. ಇದು ಮೋದಿಯವರ ಮಾರ್ಕೆಂಟಿಗ್ ತಂತ್ರವೇ ಎಂದು ಹಲವಾರು ಜನ ಪ್ರಶ್ನಿಸಿದ್ದರು.

ಈ ಆರೋಪಗಳನ್ನು ಅಲ್ಲಗೆಳೆದಿರುವ ಸೇನೆಯು ಕೋವಿಡ್ ಬಿಕ್ಕಟ್ಟಿನ ಆಸ್ಪತ್ರೆಯ ವಿಸ್ತರಣೆ ಭಾಗವಾಗಿ ಈ 100 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ ಮತ್ತು ಇದು ಜನರಲ್ ಆಸ್ಪತ್ರೆ ಸಂಕೀರ್ಣದ ಭಾಗವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. COVID-19 ಪ್ರೋಟೋಕಾಲ್ ಪ್ರಕಾರ ಆಸ್ಪತ್ರೆಯ ಕೆಲವು ವಾರ್ಡ್‌ಗಳನ್ನು ಪ್ರತ್ಯೇಕ ಸೌಲಭ್ಯಗಳಾಗಿ ಪರಿವರ್ತಿಸುವ ಅವಶ್ಯಕತೆಯಿದೆ ಎಂದು ಅದು ಹೇಳಿದೆ.

“ಆದ್ದರಿಂದ, ಸಾಮಾನ್ಯವಾಗಿ ಆಡಿಯೊ ವಿಡಿಯೋ ತರಬೇತಿ ಹಾಲ್ ಆಗಿ ಬಳಸಲಾಗುತ್ತಿದ್ದ ಈ ಸಭಾಂಗಣವನ್ನು ವಾರ್ಡ್ ಆಗಿ ಪರಿವರ್ತಿಸಲಾಯಿತು, ಏಕೆಂದರೆ ಆಸ್ಪತ್ರೆಯನ್ನು COVID-19 ಚಿಕಿತ್ಸಾ ಆಸ್ಪತ್ರೆ ಎಂದು ಗೊತ್ತುಪಡಿಸಲಾಗಿದೆ” ಎಂದು ಸೇನೆ ಹೇಳಿದೆ.

“ಕೋವಿಡ್ ಆಸ್ಪತ್ರೆಯಿಂದ ಸಂಪರ್ಕತಡೆಯನ್ನು ಖಚಿತಪಡಿಸಿಕೊಳ್ಳಲು ಗಾಲ್ವಾನ್‌ನಿಂದ ಆಗಮಿಸಿದಾಗಿನಿಂದ ಗಾಯಗೊಂಡ ಸೈನಿಕರನ್ನು ಇಲ್ಲಿ ಇರಿಸಲಾಗಿದೆ. ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನಾರವಾನೆ ಮತ್ತು ಸೇನಾ ಕಮಾಂಡರ್ ಕೂಡ ಗಾಯಗೊಂಡ ಸೈನಿಕರನ್ನು ಇದೇ ಸ್ಥಳದಲ್ಲಿ ಭೇಟಿ ಮಾಡಿದ್ದಾರೆ” ಎಂದು ಸೇನೆಯು ಹೇಳಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights