‘ಯುವರತ್ನ’ ಸಿನಿಮಾ ಗ್ರ್ಯಾಂಡ್ ಎಂಟ್ರಿ : ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲೂ ಉತ್ತಮ ಪ್ರತಿಕ್ರಿಯೆ!

ಪವರ್ ಸ್ಟಾರ್ ಅಂದ್ರೆ ಅದೇನೋ ಪವರ್. ಅದೇನೋ ಜೋಶ್. ದೊಡ್ಡ ಪರದ ಮೇಲೆ ಅಪ್ಪುವನ್ನು ನೋಡುವುದುದೇ ಖದರ್. ಎಸ್ … ಇಂಥಹ ಅನುಭವ ಅಪ್ಪು ಅಭಿಮಾನಿಗಳಿಗೆ ಇಂದು ಆಗಿದೆ. ನಟ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದು, ಭಾರೀ ಜನ ಮೆಚ್ಚುಗೆ ಪಡೆದಿದೆ. ಫಸ್ಟ್ ಡೇ ಫಸ್ಟ್ ಶೋ ನೋಡಿದ ಅಭಿಮಾನಿಗಳು ಪುನೀತ್ ಗೆ ಜೈಕಾರ ಹಾಕಿದ್ದಾರೆ. ಪಟಾಕಿ ಸಿಡಿಸಿ, ಸ್ವೀಟ್ ಹಂಚಿ ನೃತ್ಯ ಮಾಡುವ ಮೂಲಕ ಸಿನಿಮಾವನ್ನು ಸ್ವಾಗತಿಸಿದ್ದಾರೆ.

ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ‘ಯುವರತ್ನ’ ಬಿಡುಗಡೆಯಾಗಿದೆ. ಚಿತ್ರಮಂದಿರಗಳಲ್ಲಿ ಜನ ಮುಗಿಬಿದ್ದು ಸಿನಿಮಾ ನೋಡಲು ಸೇರಿದ್ದಾರೆ. ಸಂತೋಷ ಆನಂದ್ ರಾಮ್ ನಿರ್ದೇಶನದ ‘ಯುವರತ್ನ’ ಸಿನಿಮಾ ಕರ್ನಾಟಕದ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ತೆಲುಗಿಗೂ’ಯುವರತ್ನ’ಸಿನಿಮಾ ಡಬ್ ಆಗಿದ್ದು, ಆಂಧ್ರ ಪ್ರದೇಶ ಮತ್ತು ತೆಲಂಗಾಣದ 200ಕ್ಕೂ ಥಿಯೇಟರ್ಗಳಲ್ಲಿ ಚಿತ್ರ ತೆರೆಗೆ ಬಂದಿದೆ.

‘ಯುವರತ್ನ’ ಪ್ರದರ್ಶನ ಇಂದು ಮುಂಜಾನೆ 6 ಗಂಟೆಯಿಂದಲೇ ಆರಂಭಗೊಂಡಿದೆ. ತೆರೆಮೇಲೆ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಆರ್ಭಟವನ್ನು ಕಣ್ತುಂಬಿಕೊಂಡ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ಕರ್ನಾಟಕದ ಮೂಲೆ ಮೂಲೆಯಲ್ಲೂ ‘ಯುವರತ್ನ’ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಿಲಿಕಾನ್ ಸಿಡಿಯಲ್ಲಿ ‘ಯುವರತ್ನ’ ಜಾತ್ರೆ ನಡೆದಿದೆ. ‘ಯುವರತ್ನ’ ಚಿತ್ರದ ಚಿತ್ರದ ಫಸ್ಟ್ ಡೇ ಫಸ್ಟ್ ಶೋ ಕಣ್ತುಂಬಿಕೊಳ್ಳಲು ಅಭಿಮಾನಿಗಳ ದಂಡೇ ಅಲ್ಲಿ ನೆರೆದಿತ್ತು. ಪಟಾಕಿ ಸಿಡಿಸಿ, ಪುನೀತ್ ರಾಜ್‌ಕುಮಾರ್ ಕಟೌಟ್‌ಗಳಿಗೆ ಬೃಹತ್ ಹೂವಿನ ಹಾರ ಹಾಕಿ, ಅಭಿಷೇಕ ಮಾಡಿದ ಅಭಿಮಾನಿಗಳು ಚಿತ್ರವನ್ನು ಅದ್ಧೂರಿಯಾಗಿ ಬರಮಾಡಿಕೊಂಡರು.

‘ರಾಜಕುಮಾರ’ ಚಿತ್ರದ ಯಶಸ್ಸಿನ ಬಳಿಕ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಹಾಗೂ ಪುನೀತ್ ರಾಜ್‌ಕುಮಾರ್ ಒಂದಾಗಿರುವುದು ‘ಯುವರತ್ನ’ ಸಿನಿಮಾದ ಮೂಲಕ. ಹೀಗಾಗಿ ‘ಯುವರತ್ನ’ ಮೇಲೆ ಪ್ರೇಕ್ಷಕರಿಗೆ ನಿರೀಕ್ಷೆ ಹೆಚ್ಚಿದೆ. ‘ಯುವರತ್ನ’ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆಗೆ ಸಯ್ಯೇಷಾ, ಪ್ರಕಾಶ್ ರಾಜ್, ಡಾಲಿ ಧನಂಜಯ, ಸೋನು ಗೌಡ, ದಿಗಂತ್, ರಾಧಿಕಾ ಶರತ್ ಕುಮಾರ್, ಸಾಯಿಕುಮಾರ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ಚಿತ್ರಕ್ಕೆ ತಮನ್ ಸಂಗೀತ ನೀಡಿದ್ದಾರೆ. ವಿಜಯ್ ಕಿರಗಂದೂರು ಬಂಡವಾಳ ಹಾಕಿದ್ದಾರೆ.

Spread the love

Leave a Reply

Your email address will not be published. Required fields are marked *