ತವರಿಂದ ಮರಳಿ ಬಾರದ ಪತ್ನಿ; ಬೇಸತ್ತು ಮರವೇರಿ ಕುಳಿತ ಪತಿ: ಕೆಳಗಿಳಿಸಲು ಪಾಲಿಕೆ ಅಧಿಕಾರಗಳ ಹರಸಾಹಸ!

ತವರು ಮನೆಗೆ ಹೋದ ಪತ್ನಿ ಎರಡು ವರ್ಷವಾದರೂ ಮರಳಿ ಬಂದಿಲ್ಲವೆಂದು ಬೇಸರಗೊಂಡ ಪತಿ ಮರವೇರಿ ಕುಳಿತ ಘಟನೆ ರಾಜಸ್ಥಾನದ ಧೋಲ್ಪುರದಲ್ಲಿ ನಡೆದಿದೆ.

ಪಾಡ ಪ್ರದೇಶದ ನಿವಾಸಿ ಲಾಹೋರೆಮ್ ಭದೌರಿಯಾ ಎಂಬಾತ ತನ್ನ ಪತ್ನಿ ತವರು ಮನೆಯಿಂದ ಮರಳಿ ಬಂದಿಲ್ಲವೆಂದು ಮರವೇರಿ ಕುಳಿತಿದ್ದಾನೆ. ಆತನನ್ನು ಕೆಳಗಿಳಿಸಲು ನಗರ ಪಾಲಿಕೆಯ ಅಧಿಕಾರಿಗಳು ಹರಸಾಹಸ ಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.

ಈತನ ಪತ್ನಿ ಸಂಗೀತಾ ಎರಡು ವರ್ಷಗಳ ಹಿಂದೆ ತವರು ಮನೆಗೆ ತೆರಳಿದ್ದಳು. ಆದರೆ, ಆಕೆಯ ತಂದೆ ಆಕೆಯನ್ನು ಹಿಂದಿರುಗಿ ಕಳಿಸುತ್ತಿಲ್ಲ ಎಂದು ಆತ ಪೊಲೀಸರಿಗೆ ದೂರು ನೀಡಿದ್ದ. ಆದರೆ ಇದುವರೆಗೆ ಯಾರೊಬ್ಬರೂ ಆತನ ಸಹಾಯಕ್ಕೆ ಬಂದಿಲ್ಲ ಎಂದು ಆತ ಆರೋಪಿಸಿದ್ದಾನೆ.

ಹೀಗಾಗಿ ಆತ ಧೋಲ್ಪುರ ನಗರದಲ್ಲಿರುವ ಮರವೊಂದನ್ನು ಹತ್ತಿ ಕುಳಿತಿದ್ದಾನೆ. ಸುಮಾರು 50 ಅಡಿಯಿರುವ ಮರವನ್ನು ಹತ್ತಿ ಕುಳಿತು ತನ್ನ ಕಾಲುಗಳನ್ನು ಕಟ್ಟಿದ್ದಾನೆ. ಇದನ್ನು ಕಂಡ ಸ್ಥಳೀಯರು ಗಾಬರಿಗೊಂಡ, ಆತನನ್ನು ಕೆಳಗಿಳಿಯುವಂತೆ ಕೋರಿದ್ದಾರೆ. ಆದರೂ ಆತ ಮರದಿಂದ ಕೆಳಗಿಳಿದಿಲ್ಲ.

ಇದರಿಂದಾಗಿ ಬೇಸತ್ತ ಸ್ಥಳೀಯರು ನಗರ ಪಾಲಿಕೆಯವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪಾಲಿಕೆ ಅಧಿಕಾರಿಗಳು ಆತನ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆತ ಕೆಳಗಿಳಿಯದಿದ್ದಾಗ, ಮರದ ಕೆಳಗೆ ಹಾಸಿಗೆಗಳನ್ನು ಹಾಸಿ, ಕ್ರೇನ್​ ತರಿಸಿ ಅದರ ಸಹಾಯದಿಂದ ಆತನನ್ನು ಕೆಳಗಿಳಿಸಿದ್ದಾರೆ.

ಇದನ್ನೂ ಓದಿ: ಚುನಾವಣಾ ಪ್ರೋಮೋದಲ್ಲಿ ಶ್ರೀನಿಧಿ ಚಿದಂಬರಂ ಅವರ ವಿಡಿಯೋ ಬಳಿಸಿಕೊಂಡ ಬಿಜೆಪಿ; ಜಾಲತಾಣದಲ್ಲಿ ಟ್ರೋಲ್!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights