ಚುನಾವಣಾ ಪ್ರೋಮೋದಲ್ಲಿ ಶ್ರೀನಿಧಿ ಚಿದಂಬರಂ ಅವರ ವಿಡಿಯೋ ಬಳಿಸಿಕೊಂಡ ಬಿಜೆಪಿ; ಜಾಲತಾಣದಲ್ಲಿ ಟ್ರೋಲ್!

ದ್ರಾವಿಡ ನಾಡು ತಮಿಳುನಾಡಿನಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಭಾರೀ ಕಸರತ್ತು ನಡೆಸುತ್ತಿರುವ ಬಿಜೆಪಿ, ಮುಂದಿನ ಚುನಾವಣೆಗೆ ತಯಾರಿ ನಡೆಸುತ್ತಿದೆ. ಈ ನಡುವೆ ಚುನಾವಣೆಗಾಗಿ ಬಿಜೆಪಿ ಪ್ರೋಮೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಕಾಂಗ್ರೆಸ್‌ ಮುಖಂಡ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರ ಸೊಸೆ ಶ್ರೀನಿಧಿ ಅವರ ವಿಡಿಯೋ ತುಣುಕನ್ನು ಬಳಸಿಕೊಂಡು ನೆಟ್ಟಿಗರ ನಗೆಪಾಟಿಲಿಕೆಗೆ ಗುರಿಯಾಗಿದೆ.

ತಮಿಳುನಾಡು ಬಿಜೆಪಿಯು ಟ್ವಿಟರ್‌ ಹಾಗೂ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹೊಸ ಪ್ರೋಮೋವನ್ನು ಮಾರ್ಚ್‌ 28ರಂದು ಪೋಸ್ಟ್‌ ಮಡಿದೆ. ಇದರಲ್ಲಿ ಶ್ರೀನಿಧಿ ಕಾರ್ತಿ ಚಿದಂಬರಂ ಅವರ ನೃತ್ಯದ ತುಣುಕನ್ನೂ ಬಳಸಿಕೊಂಡಿದೆ.

ಈ ಕುರಿತು ಶಿಲ್ಪಾ ನಾಯಕರ್‌ ಎಂಬುವವರು ಟ್ವೀಟ್‌ ಮಾಡಿದ್ದು, ಈ ಪ್ರೋಮೋದಲ್ಲಿರುವ ವಿಡಿಯೋ ತುಣುಕು ಶ್ರೀನಿಧಿ ಕಾರ್ತಿ ಚಿದಂಬರಂ ಅವರದ್ದು. ಅವರು 10 ವರ್ಷಗಳ ಮುಂಚೆ ಮಾಜಿ ಸಿಎಂ ಕರುಣಾನಿಧಿ ರಚಿಸಿದ್ದ ‘ಸೆಮ್ಮೊಳಿ’ ಹಾಡಿಗೆ ನೃತ್ಯ ಮಾಡಿದ್ದರು. ಈ ನೃತ್ಯದ ತುಣುಕನ್ನು ಬಿಜೆಪಿ ಬಳಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

ಶಿಲ್ಪಾ ನಾಯಕರ್‌ ಅವರ ಟ್ವೀಟ್‌ ಅನ್ನು ರೀ-ಟ್ವೀಟ್‌ ಮಾಡಿರುವ ಶ್ರೀನಿಧಿ, “ತಮಿಳುನಾಡು ಬಿಜೆಪಿ ಅವರ ಪ್ರಚಾರಕ್ಕೆ ನನ್ನ ಇಮೇಜ್‌ ಬಳಸಿಕೊಂಡಿರುವುದು ಹಾಸ್ಯಾಸ್ಪದವಾಗಿದೆ. ತಮಿಳುನಾಡಿನಲ್ಲಿ ಕಮಲ ಅರಳುವುದಿಲ್ಲ. ತಮಿಳುನಾಡು ಬಿಜೆಪಿಯ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಬೇಕು. ಇದು ಸುಳ್ಳು ಹೇಳುವವರಿಗೆ ಒಂದು ಪಾಠವಾಗಲಿ” ಎಂದಿದ್ದಾರೆ.

“ಶ್ರೀನಿಧಿ ಅವರ ಅನುಮತಿಯಿಲ್ಲದೇ ಅವರ ಫೊಟೊ ಬಳಸಿದ್ದು ತಪ್ಪು. ನಿಮ್ಮ ಅಭಿಯಾನವು ಸುಳ್ಳಿನಿಂದ ಕೂಡಿದೆ ಎನ್ನುವುದನ್ನು ನೀವು ಈ ಮೂಲಕ ಸಾಬೀತುಪಡಿಸಿದ್ದೀರಿ” ಎಂದು ಬಿಜೆಪಿ ವಿರುದ್ಧ ತಮಿಳುನಾಡು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ಇದನ್ನೂ ಓದಿ: CPI(M) ಹಿರಿಯ ಮುಖಂಡ ಮತ್ತು ಕೇರಳ ಕೈಗಾರಿಕಾ ಸಚಿವ ಜಯರಾಜನ್ ಚುನಾವಣಾ ರಾಜಕೀಯಕ್ಕೆ ಗುಡ್‌ ಬೈ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights