ಬೀದಿ ನಾಯಿಗಳಿಗೆ ಆಶ್ರಯ ನೀಡಿದ ಮನೆಯಿಲ್ಲದ ವ್ಯಕ್ತಿ : ಹೃದಯಸ್ಪರ್ಶಿ ಫೋಟೋ ವೈರಲ್!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಪೋಟೋ ನಿಜಕ್ಕೂ ಕಣ್ಣಂಚಲ್ಲಿ ನೀರು ತರಿಸುತ್ತೆ. ಈ ಫೋಟೋವನ್ನೊಮ್ಮೆ ನೋಡಿ. ವ್ಯಕ್ತಿಯೊಬ್ಬ ಉದ್ಯಾನವನದ ಹೊರಗೆ ಫುಟ್‌ಪಾತ್‌ನಲ್ಲಿ ಕುಳಿತಿದ್ದಾನೆ. ಅವನ ಪಕ್ಕದಲ್ಲಿ ಹಾಸಿಗೆ ಇದೆ. ಹಾಸಿಗೆ ಮೇಲೆ ಎರಡು ನಾಯಿಗಳು ಮಲಗಿವೆ. ಹಾಸಿಗೆ ಬಳಿ ಆಹಾರ ಮತ್ತು ನೀರನ್ನು ಪ್ಲಾಸ್ಟಿಕ್ ಬಟ್ಟಲುಗಳಲ್ಲಿ ಇಡಲಾಗಿದೆ. ಈ ವ್ಯಕ್ತಿ ಕಾವಲು ಕಾಯುತ್ತಿದ್ದಂತೆ ನಾಯಿಗಳು ಶಾಂತಿಯುತವಾಗಿ ಮಲಗಿವೆ.

ಹೌದು… ಭಾರತೀಯ ಅರಣ್ಯ ಸೇವೆಗಳ ಸುಶಾಂತ್ ನಂದಾ ಅವರು ಮನೆಯಿಲ್ಲದ ವ್ಯಕ್ತಿಯೊಬ್ಬರು ಎರಡು ಬೀದಿ ನಾಯಿಗಳನ್ನು ಶೀತ ವಾತಾವರಣದಿಂದ ರಕ್ಷಿಸುತ್ತಿದ್ದಾರೆ. ಅವರ ಕಾರ್ಯ ನಿಮ್ಮನ್ನು ಭಾವುಕರನ್ನಾಗಿ ಮಾಡುತ್ತದೆ ಎಂದು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ.

“ಕಡಿಮೆ ಇರುವ ಜನರು ಹೆಚ್ಚಿನದನ್ನು ನೀಡುತ್ತಾರೆ” ಎಂದು ಸುಶಾಂತ್ ನಂದಾ ಪೋಸ್ಟ್ನ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಅವರ ಪೋಸ್ಟ್ ಅನ್ನು ಇಲ್ಲಿ ನೋಡಿ:

https://twitter.com/chocopaniy/status/1377031195620335617?ref_src=twsrc%5Etfw%7Ctwcamp%5Etweetembed%7Ctwterm%5E1377031195620335617%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fhomeless-man-gives-shelter-to-street-dogs-in-viral-picture-internet-hearts-it-1785380-2021-03-31

https://twitter.com/susantananda3/status/1376899694559830018?ref_src=twsrc%5Etfw%7Ctwcamp%5Etweetembed%7Ctwterm%5E1376899694559830018%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fhomeless-man-gives-shelter-to-street-dogs-in-viral-picture-internet-hearts-it-1785380-2021-03-31

ಸುಶಾಂತ್ ನಂದಾ ಅವರ ಪೋಸ್ಟ್ ಸುಮಾರು 1,000 ಲೈಕ್‌ಗಳನ್ನು ಸಂಗ್ರಹಿಸಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು “ಅವನಿಗೆ ಅಂತಹ ದೊಡ್ಡ ಹೃದಯವಿದೆ” ಎಂದು ಹೃದಯ ಎಮೋಟಿಕಾನ್‌ಗಳನ್ನು ಪೋಸ್ಟ್ ಮಾಡಿದ್ದಾರೆ.

ಕಾಮೆಂಟ್ಗಳನ್ನು ಇಲ್ಲಿ ನೋಡಿ:

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights