ಮುಗಿಯದ ಕೋವಿಡ್‌ ಕಾಟ: ಮತ್ತೊಂದು ಪ್ರಭೇದದ ಕೊರೊನಾ ವೈರಸ್‌ ಪತ್ತೆ!

2020ರ ಇಡೀ ವರ್ಷವನ್ನು ಕಾಡಿದ ಕೊರೊನಾ ವೈರಸ್‌ ಹಲವಾರು ತಿಂಗಳುಗಳ ಕಾಲ ಜನರನ್ನು ಮನೆಯಲ್ಲಿಯೇ ಕೂಡಿಟ್ಟಿತ್ತು. ಇದೀಗ ಅದರ ಪ್ರಭಾವ ಕಡಿಮೆಯಾಗುತ್ತಿದೆ. ಜನ ಜೀವನ ಸುಧಾರಿಸಿ, ಸಧಾರಣ ಸ್ಥಿತಿಗೆ ಮರಳುತ್ತಿದೆ ಎಂದು ಭಾವಿಸಲಾಗುತ್ತಿದೆ. ಆದರೆ, ಇದೀಗ ಮೊತ್ತೆ ಎರಡು ರೀತಿಯ ರೂಪಾಂತರಿ ಕೊರೊನಾ ವೈರಸ್‌ ಕಾಣಿಸಿಕೊಂಡಿದ್ದು, ಮತ್ತೆ ಆತಂಕ ಸೃಷ್ಟಿಸಿದೆ. ಕಳೆದ ವಾರ ಕೊರೊನಾ ರೂಪಾಂತರಿ ವೈರಸ್ ಬ್ರಿಟನ್‌ನಲ್ಲಿ ಕಾಣಿಸಿಕೊಂಡಿತ್ತು. ಆದರೆ ಇದೀಗ ಕೊರೊನಾ ವೈರಸ್‌ನ ಮತ್ತೊಂದು ರೂಪಾಂತರಿ ಪ್ರಭೇದದ ವೈರಸ್ ನೈಜೀರಿಯಾದಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.

ನೈಜೀರಿಯಾದಲ್ಲಿ ಪತ್ತೆಯಾದ ಹೊಸ ಪ್ರಭೇದದ ಕೊರೊನಾ ವೈರಸ್ ಬಗ್ಗೆ ಅಫ್ರಿಕಾದ ರೋಗ ನಿಯಂತ್ರಣ ಸಂಸ್ಥೆಯ ಮುಖ್ಯಸ್ಥರು ಎಚ್ಚರಿಸಿದ್ದು, ಇದರ ಬಗ್ಗೆ ಹೆಚ್ಚಿನ ಪರೀಕ್ಷೆಯ ಅಗತ್ಯವಿದೆ ಎಂದು ಹೇಳಿದ್ದಾರೆ. ಈಗಾಗಲೇ ರೂಪಾಂತರಿ ಕೊರೊನಾ ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ವೇಗವಾಗಿ ಹರಡುತ್ತಿದ್ದು, ಹೊಸ ರೂಪಾಂತರಿ ವೈರಸ್ ಪತ್ತೆಯಾಗಿದ್ದು ವೈದ್ಯಕೀಯ ಲೋಕ ಮತ್ತೊಂದು ಸುತ್ತಿನ ಹೋರಾಟಕ್ಕೆ ತಯಾರಾಗಿದೆ.

ಎರಡು ಅಥವಾ ಮೂರು ಜನೆಟಿಕ್ ಸೀಕ್ವೆನ್ಸ್‌ಗಳ ಆಧಾರದಲ್ಲಿ ಹೊಸ ಪ್ರಭೇದವೊಂದರ ಉಗಮವಾಗಿರಬಹುದು ಎಂದು ಈಗಾಗಲೆ ನಿರ್ಧಾರಕ್ಕೆ ಬರಲಾಗಿದೆ. ಸೋಂಕು ಪ್ರಕರಣದ ಹೆಚ್ಚು ಮಾದರಿಗಳ ವಿಶ್ಲೇಷಣೆಯನ್ನು ನೈಜೀರಿಯ ರೋಗ ನಿಯಂತ್ರಣ ಕೇಂದ್ರ ಮತ್ತು ನೈಜೀರಿಯದಲ್ಲಿರುವ ಆಫ್ರಿಕನ್ ಸೆಂಟರ್ ಫಾರ್ ಜಿನೋಮಿಕ್ಸ್ ಆಫ್ ಇನ್‌ಫೆಕ್ಶಿಯಸ್ ಡಿಸೀಸಸ್ ಸಂಸ್ಥೆಗಳು ನಡೆಸಲಿವೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.


ಇದನ್ನೂ ಓದಿ: ಅನ್ಯ ಪಕ್ಷದವರನ್ನು ಭೇಟೆ ಆಡುತ್ತಿರುವ BJP: ಕಮಲ್‌ ಹಾಸನ್‌ ಪಕ್ಷದ ಕಾರ್ಯದರ್ಶಿ BJPಗೆ ಸೇರ್ಪಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights