FACT CHECK | ರಾಜಸ್ಥಾನದಲ್ಲಿ ದಲಿತ ಯುವಕನನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಲಾಗಿದೆಯೇ ? ರಾಜಸ್ಥಾನದ ಪೊಲೀಸರು ಏನ್ ಹೇಳ್ತಾರೆ? ಈ ಸ್ಟೋರಿ ಓದಿ

ಯುವಕನೊಬ್ಬನನ್ನು ಸಾರ್ವಜನಿಕವಾಗಿ ನೇಣಿಗೆ ಹಾಕುತ್ತಿರುವ ವಿಡಿಯೋವನ್ನು ಕಳೆದ ಎರಡು ದಿನಗಳಿಂದ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗೆಯೇ ಇದೇ ಪ್ರತಿಪಾದನೆಯೊಂದಿಗೆ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿಯೂ ಪ್ರಸಾರ ಮಾಡಲಾಗುತ್ತಿದೆ.

ಕಲ್ಕತ್ತಾ, ತಾಲಿಬಾನಿ ಐಸಿಸ್  ಶೈಲಿಯಲ್ಲಿ ಬಹಿರಂಗವಾಗಿ ಹಿಂದೂ ಬಿಜೆಪಿ ಕಾರ್ಯ ಕರ್ತ ನನ್ನು ನೇಣು ಹಾಕಿದ ಘಟನೆ. ಮನೇಲಿ ಕೂತಿರಿ, ಇಲ್ಲಿ ಸಹ ಅದೇ ಚಿತ್ರ ಪುನರಾವರ್ತನೆ ಆಗುತ್ತದೆ. ಜೂನ್ 4 ರ ನಂತರ ನೋಡುತ್ತೀರಿ ಓಟಕ್ಕೆ ಮೈದಾನ ತಯಾರಾಗಿದ್ದನ್ನು ಎಂಬ ಸಂದೇಶದೊಂದಿಗೆ ವಾಟ್ಸಾಪ್‌ನ ಕೆಲವು ಗುಂಪುಗಳಲ್ಲಿ ಹಂಚಿಕೊಳ್ಳಲಾಗಿದೆ.

ವಾಟ್ಸಾಪ್‌ನಲ್ಲಿ ಬಂದ ವಿಡಿಯೋ ಮತ್ತು ಸಂದೇಶ
ವಾಟ್ಸಾಪ್‌ನಲ್ಲಿ ಬಂದ ವಿಡಿಯೋ ಮತ್ತು ಸಂದೇಶ

ಎಚ್ಚರಿಕೆ ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ರಾಜಸ್ಥಾನಕ್ಕೆ ರಾಮರಾಜ್ಯ ಬರಲಾರಂಭಿಸಿದೆ. ಉಗ್ರಗಾಮಿ ಮನುವಾದಿಗಳು ದಲಿತ ಬಾಲಕ ನಾರಾಯಣ ದಾಸ್ ನನ್ನು ನೇಣಿಗೇರಿಸಿ ಲೈವ್ ವಿಡಿಯೋ ಹಂಚಿಕೊಂಡಿದ್ದಾರೆ. ಇಂತಹ ಘಟನೆಗಳು ಇನ್ನು ಮಂದೆ ಯಾವುದೇ ತಲೂಕುಗಳಲ್ಲಿ ನಡೆಯಬಾರದು ಇದನ್ನು ದೇಶಕ್ಕೆ  ಶೇರ್ ಮಾಡಿ ಯಾರೆಲ್ಲಾ ಇದರಲ್ಲಿ ಇನ್ವಾಲ್ ಇದ್ದಾರೆ ಎಲ್ಲರನ್ನೂ ಗಲ್ಲಿಗೇರಿಸುವವರೆಗೂ ಶೇರ್ ಮಾಡಿ ಎಂದು ಇನ್ನು ಕೆಲವು ವಾಟ್ಸಾಪ್ ಗುಂಪುಗಳಲ್ಲಿ ಪ್ರಸಾರವಾಗುತ್ತಿದೆ.

ವಾಟ್ಸಾಪ್‌ನಲ್ಲಿ ಬಂದ ವಿಡಿಯೋ ಮತ್ತು ಸಂದೇಶ
ವಾಟ್ಸಾಪ್‌ನಲ್ಲಿ ಬಂದ ವಿಡಿಯೋ ಮತ್ತು ಸಂದೇಶ

ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಈ ವಿಡಿಯೋವನ್ನು ಏನ್‌ಸುದ್ದಿ.ಕಾಂ  ವಾಟ್ಸಾಪ್‌ಗೆ ಹಂಚಿಕೊಳ್ಳುವ ಮೂಲಕ ಇದರ ಸತ್ಯಾಸತ್ಯತೆಯನ್ನು ತಿಳಿಸುವಂತೆ ವಿನಂತಿಸಿದ್ದಾರೆ. ಹಾಗಿದ್ದರೆ ಈ ಘಟನೆಯ ಹಿನ್ನಲೆ ಏನು? ಎಲ್ಲಿ ನಡೆದಿದೆ? ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಸಂದೇಶದಲ್ಲಿ ಒಂದು ಕಡೆ ರಾಜಸ್ಥಾನದಲ್ಲಿ ನಡೆದ ಘಟನೆ ಎಂದು ಮತ್ತೊಂದು ಸಂದೇಶದಲ್ಲಿ ಕಲ್ಕತ್ತಾದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಒಂದು ಸಂದೇಶದಲ್ಲಿ ಯುವಕ ದಲಿತನನ್ನು ಮನುವಾದಿಗಳು ಸಾರ್ವಜನಿಕವಾಗಿ ಕೊಂದಿದ್ದಾರೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡರೆ, ಮತ್ತೊಂದು ಕಡೆ ತಾಲಿಬಾನಿ ಐಸಿಸ್  ಶೈಲಿಯಲ್ಲಿ ಬಹಿರಂಗವಾಗಿ ಹಿಂದೂ ಬಿಜೆಪಿ ಕಾರ್ಯ ಕರ್ತನನ್ನು ನೇಣಿಗೆ ಹಾಕಿದ ಘಟನೆ ಎಂದು ಹಂಚಿಕೊಳ್ಳುತ್ತಿದ್ದಾರೆ.

ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ DFRAC ಫ್ಯಾಕ್ಟ್‌ಚೆಕ್ ತಂಡ ಗೂಗಲ್ ಸರ್ಚ್ ಮೂಲಕ ಪರಿಶೀಲಿಲನೆ ನಡೆಸಿ ರಾಜಸ್ಥಾನದಲ್ಲಿ ಇಂತಹ ಘಟನೆಯಾಗಿರುವ ಬಗ್ಗೆ ಯಾವುದೇ ವರದಿಗಳಿಲ್ಲ, ಇದೊಂದು ಸುಳ್ಳು ಸುದ್ದಿ ಎಂದು ವರದಿ ಮಾಡಿದೆ.

DFRAC ಫ್ಯಾಕ್ಟ್‌ಚೆಕ್ ತಂಡ ಕೀವರ್ಡ್ ಮೂಲಕ ಗೂಗಲ್ ಸರ್ಚ್ ನಡೆಸಿ ಪರಿಶೀಲಿಸಿದೆ. ವೈರಲ್ ಸಂದೇಶಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಮೇಲ್ವರ್ಗದವರ ದೇವಸ್ಥಾನದಲ್ಲಿನ ಪ್ರತಿಮೆಗೆ ಅವಮಾನ ಮಾಡಿದ ಆರೋಪದ ಮೇಲೆ ದಲಿತ ಬಾಲಕ ನಾರಾಯಣ್ ದಾಸ್‌ನನ್ನು ಸಾರ್ವಜನಿಕವಾಗಿ ನೇಣಿಗೇರಿಸಿದ ಬಗ್ಗೆ ಯಾವುದೇ ಮಾಧ್ಯಮ ಸಂಸ್ಥೆ ಮಾಡಿದ ಯಾವುದೇ ಸುದ್ದಿ ವರದಿಗಳು ಲಭ್ಯವಾಗಿಲ್ಲ ಎಂದು ತಿಳಿಸಿದೆ.

ಇದಲ್ಲದೆ, DFRAC ಫ್ಯಾಕ್ಟ್‌ಚೆಕ್ ತಂಡ @PoliceRajasthan ನ X ಹ್ಯಾಂಡಲ್ ಅನ್ನು ಪರಿಶೀಲಿಸಿದ್ದು. ರಾಜಸ್ಥಾನ ಪೊಲೀಸರು ಈ ಘಟನೆಯನ್ನು ನಕಲಿ ಎಂದು ಘೋಷಿಸಿದ್ದಾರೆ. ಕೆಲವರು ವಿಡಿಯೋ ಪೋಸ್ಟ್ ಮಾಡಿ ಈ ವಿಡಿಯೋ ರಾಜಸ್ಥಾನದ್ದು ಎಂದು ಹೇಳಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಡಿಯೋ ಸಂಪೂರ್ಣ ನಕಲಿಯಾಗಿದ್ದು, ರಾಜಸ್ಥಾನದಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ರಾಜಸ್ಥಾನದ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಇಂತಹ ಆಧಾರವಿಲ್ಲದ ವಿಡಿಯೋಗಳನ್ನು ಪೋಸ್ಟ್ ಮಾಡುವವರ ವಿರುದ್ಧ ತನಿಖೆ ನಡೆಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ರಾಜಸ್ಥಾನ ಪೊಲೀಸರು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಮೇಲ್ವರ್ಗದವರ ದೇವಸ್ಥಾನದಲ್ಲಿ ದೇವರ ಮೂರ್ತಿಗೆ ಅವಮಾನ ಮಾಡಿದ ದಲಿತ ಬಾಲಕನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ ಘಟನೆ ನಡೆದಿಲ್ಲ. ಇದನ್ನು ರಾಜಸ್ಥಾನ ಪೊಲೀಸರೇ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ. ವಾಸ್ತವವಾಗಿ ಈ ಘಟನೆ ಎಲ್ಲಿ ನಡೆದಿದೆ ಎಂಬ ನಿಖರ ಮಾಹಿತಿಯನ್ನು  ಚೆಕ್ ಮಾಡಿ ಅಪ್‌ಡೆಟ್ ಮಾಡಲಾಗುವುದು ಎಂದು ತಿಳಿಸಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಬಿಜೆಪಿ ಅಧಿಕಾರಕ್ಕೆ ಬಂದರೆ ಒಬಿಸಿ ಮೀಸಲಾತಿಯನ್ನು ರದ್ದುಗೊಳಿಸುತ್ತೇವೆ ಎಂದು ಹೇಳಿದ್ರಾ ಅಮಿತ್ ಶಾ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights