‘ಕೈಗಳನ್ನು ಕತ್ತರಿಸುವುದು, ಮರಣದಂಡನೆ ಸೇರಿದಂತೆ ಕಠಿಣ ಶಿಕ್ಷೆಗಳು ಮರುಕಳಿಸುತ್ತವೆ’ – ತಾಲಿಬಾನ್

ಅಫ್ಘಾನಿಸ್ತಾನವನ್ನು ತಾಲಿಬಾನ್ ಹೇಗೆ ಆಳುತ್ತದೆ ಎಂಬುದನ್ನು ನೋಡಲು ಜಗತ್ತು ನಿರೀಕ್ಷೆಯಲ್ಲಿರುವಾಗ ತಾಲಿಬಾನ್ ಬೆಚ್ಚಿ ಬೀಳಿಸುವ ಹೇಳಿಕೆಯನ್ನು ನೀಡಿದೆ.

ತಾಲಿಬಾನ್ ಆಡಳಿತದಲ್ಲಿ ಕೈಗಳನ್ನು ಕತ್ತರಿಸುವುದು, ಮರಣದಂಡನೆ ಸೇರಿದಂತೆ ಕಠಿಣ ಶಿಕ್ಷೆಗಳು ಶೀಘ್ರದಲ್ಲೇ ಮರಳುತ್ತವೆ. ಆದರೆ ಈ ಶಿಕ್ಷೆಗಳು ಸಾರ್ವಜನಿಕ ಪ್ರದರ್ಶನಕ್ಕಿರುವುದಿಲ್ಲ ಎಂದು ಇಸ್ಲಾಮಿಕ್ ಕಾನೂನಿನಲ್ಲಿ ಕಠಿಣ ಶಿಕ್ಷೆಗಳನ್ನು ಜಾರಿಗೊಳಿಸಿದವರಲ್ಲಿ ಒಬ್ಬರಾಗಿದ್ದ ಮುಲ್ಲಾ ನೂರುದ್ದೀನ್ ತುರಾಬಿ ಹೇಳಿದ್ದಾರೆ.

ತುರಾಬಿ ತಾಲಿಬಾನ್‌ನ ಹಿಂದಿನ ಆಳ್ವಿಕೆಯಲ್ಲಿ ನ್ಯಾಯಾಂಗ ಸಚಿವರಾಗಿದ್ದರು. ಜೊತೆಗೆ ಪೋಲೀಸರ ಪ್ರಸರಣ ಸಚಿವಾಲಯದ ಮುಖ್ಯಸ್ಥರಾಗಿದ್ದರು.

ಇವರು “ನಮ್ಮ ಕಾನೂನುಗಳು ಹೇಗಿರಬೇಕು ಎಂದು ಯಾರೂ ನಮಗೆ ಹೇಳಬೇಕಾಗಿಲ್ಲ. ನಾವು ಇಸ್ಲಾಂ ಅನ್ನು ಅನುಸರಿಸುತ್ತೇವೆ ಮತ್ತು ನಾವು ಕುರಾನ್‌ನಲ್ಲಿನ ಕಾನೂನುಗಳನ್ನೇ ಮಾಡುತ್ತೇವೆ” ಎಂದು ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದರು.

“ಭದ್ರತೆಗೆ ಕೈಗಳನ್ನು ಕತ್ತರಿಸುವುದು ಬಹಳ ಅವಶ್ಯಕವಾಗಿದೆ ಮತ್ತು ಅಂತಹ ಶಿಕ್ಷೆಗಳನ್ನು ತಡೆಯುವುದು ಕೂಡ ಶಿಕ್ಷಾರ್ಹ” ಎಂದಿದ್ದಾರೆ. ಈ ಬಗ್ಗೆ ಕ್ಯಾಬಿನೆಟ್ ಸಾರ್ವಜನಿಕವಾಗಿ ಶಿಕ್ಷೆಗಳನ್ನು ಮಾಡಬೇಕೇ? ಅಥವಾ ಕಾನೂನನ್ನು ಅಭಿವೃದ್ಧಿಪಡಿಸಬೇಕೆ ಎಂದು ಅಧ್ಯಯನ ಮಾಡುತ್ತಿದೆ ಎಂದು ಅವರು ಹೇಳಿದರು.

20 ವರ್ಷಗಳ ಹಿಂದೆ ಕಾಬೂಲ್‌ನ ಕ್ರೀಡಾಂಗಣದಲ್ಲಿ ಅಥವಾ ಈದ್ ಗಾಹ್ ಮಸೀದಿಯ ಮೈದಾನದಲ್ಲಿ ತಾಲಿಬಾನ್‌ಗಳು ಶಿಕ್ಷೆಯನ್ನು ನೀಡುತ್ತಿದ್ದಾಗ ಜಗತ್ತು ಭಯಭೀತವಾಗಿ ನೋಡುತ್ತಿತ್ತು. ಸದ್ಯ ಇದೇ ಕಾನೂನು ಜಾರಿಯಾಗುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ ಶಿಕ್ಷೆಯನ್ನು ಸಾರ್ವಜನಿಕವಾಗಿ ನೀಡುವುದಾ? ಅಥವಾ ಗೌಪ್ಯವಾಗಿ ನೀಡುವುದಾ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿರುವ ಬಗ್ಗೆ ತುರಾಬಿ ಹೇಳಿದ್ದಾರೆ.

ತಾಲಿಬಾನ್ ಆಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಸಾವಿರಾರು ಆಫ್ಘನ್ನರು ದೇಶವನ್ನು ತೊರೆದಿದ್ದಾರೆ. ಈಗಲೂ ಅತ್ಯಂತ ಹತಾಶ ಆಫ್ಘನ್ನರು ಕಠಿಣ ತಾಲಿಬಾನ್ ಆಳ್ವಿಕೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ತಪ್ಪಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಈಗ ತಾಲಿಬಾಣಿಗಳ ಕೈಗೆ ಅವರ ಭವಿಷ್ಯ ಸಿಕ್ಕು ಏನಾಗಬಹುದು ಎನ್ನುವ ಆತಂಕದಲ್ಲಿದ್ದಾರೆ.

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights