ದಲಿತೆ ಎಂಬ ಕಾರಣಕ್ಕೆ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಅರ್ಚಕ; ಚಾರ್ಜ್‌ಶೀಟ್‌ ಸಲ್ಲಿಸಿದ ದೆಹಲಿ ಪೊಲೀಸರು

ದೆಹಲಿಯ ಒಂಬತ್ತು ವರ್ಷದ ಬಾಲಕಿ ಮೇಲಿನ ಬರ್ಬರ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಜಾರ್ಜ್‌ಶೀಲ್‌ಅನ್ನು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇದರಲ್ಲಿ ಆರೋಪಿಗಳಾದ ಸ್ಮಶಾನದ ಒಬ್ಬ ಅರ್ಚಕ ಹಾಗೂ ಒಬ್ಬ ಫ್ಯಾಕ್ಟರಿ ಕಾರ್ಮಿಕ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಬಾಲಕಿ ದಲಿತೆ ಎಂಬ ಕಾರಣಕ್ಕೆ ಆಕೆಯ ಮೆಲೆ ಅತ್ಯಾಚಾರಗೈದಿದ್ದಾರೆ ಎಂದು ಸಾರ್ವಜನಿಕ ಸಾಕ್ಷಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.

ಸ್ಮಶಾನದ ಅರ್ಚಕ ರಾಧೇ ಶ್ಯಾಮ್ ಮತ್ತು ಕಾರ್ಮಿಕ ಕುಲದೀಪ್ ಸಿಂಗ್ ಪ್ರಕರಣದ ಆರೋಪಿಗಳಾಗಿದ್ದು, ಈ ಇಬ್ಬರೂ ಬಾಲಕಿಯ ಶವವನ್ನು ಒಂದೆಡೆಯಿಂದ ಮತ್ತೊಂದೆಡೆ ಸಾಗಿಸುತ್ತಿದ್ದರು. ಆಗ ನಮಗೆ ಯಾವುದೇ ಅನುಮಾನ ಬರಲಿಲ್ಲ. ಆದರೆ, ಆರೋಪಿಗಳಲ್ಲಿ ಒಬ್ಬ ಬಾಲಕಿಯ ಮೇಲೆ ಅತ್ಯಾಚಾರ ಹತ್ಯೆಯ ಬಗ್ಗೆ ಫೋನ್‌ನಲ್ಲಿ ಹೇಳುತ್ತಿದ್ದಾಗ ನಮಗೆ ತಿಳಿಯಿತು. ಅಲ್ಲಿಗೆ ಹೋದಾಗ ಆಕೆ ದಲಿತೆ ಎಂಬ ಕಾರಣಕ್ಕೆ ಅತ್ಯಾಚಾರ-ಕೊಲೆ ಮಾಡಿದ್ದೇವೆಂದು ಆರೋಪಿಗಳು ಹೇಳಿದ್ದಾಗಿ ಎಂದು ಸಾಕ್ಷಿದಾರರೊಬ್ಬರು ಆಗಸ್ಟ್‌ 27ರಂದು ನ್ಯಾಯಾಲಯದಲ್ಲಿ ಹೇಳಿದ್ದಾರೆ.

ಎರಡನೇ ಸಾಕ್ಷಿ ಕೂಡ ತಾನು ಸ್ಮಶಾನಕ್ಕೆ ಹೋದಾಗ ಆರೋಪಿಗಳು ತಾವು ಆಕೆಯ ಮೇಲೆ ಅತ್ಯಾಚಾರಗೈದು ನಂತರ ತಪ್ಪಿ ಅಂತ್ಯಕ್ರಿಯೆ ನಡೆಸಿದ್ದಾಗಿ ಹೇಳಿದ್ದಾರೆ ಎಂದು ಹೇಳಿರುವುದಾಗಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣ ಬೆಳಕಿಗೆ ಬಂದಾಗ ಆರೋಪಿಗಳು, ಬಾಲಕಿ ಅಲ್ಲಿನ ಕೂಲರ್‌ನಿಂದ ನೀರು ತರಲು ಹೋದಾಗ ವಿದ್ಯುತ್ ಶಾಕ್‍ಗೊಳಗಾಗಿ ಸಾವನ್ನಪ್ಪಿದಳು ಎಂದು ವಾದಿಸಿದ್ದರು.

ಬಾಲಕಿ ಮೇಲೆ ಅತ್ಯಾಚಾರ ಎಸಗುವ ವೇಳೆ ಆಕೆ ಉಸಿರುಗಟ್ಟಿ ಸಾವನ್ನಪ್ಪಿದಳು ಎಂದು ಆರೋಪಿ ಶ್ಯಾಮ್ ಹೇಳಿರುವುದಾಗಿ ಪೊಲೀಸರು ಉಲ್ಲೇಖಿಸಿದ್ದಾರೆ.

ಅಪರಾಧದ ಸಮಯದಲ್ಲಿ ಬಳಸಿದ್ದ ಬೆಡ್‍ಶೀಟ್, ಅಶ್ಲೀಲ ವೀಡಿಯೋಗಳನ್ನು ನೋಡಲು ಶ್ಯಾಮ್ ಬಳಸುತ್ತಿದ್ದ ಮೊಬೈಲ್ ಫೋನ್ ಹಾಗೂ ಬಾಲಕಿಯ ವಸ್ತುಗಳನ್ನು ಆರೋಪಿಗಳು ನಾಶಪಡಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: 15 ವರ್ಷದ ಬಾಲಕಿ ಮೇಲೆ ಅಪ್ರಾಪ್ತ ವಯಸ್ಕರು ಸೇರಿ 29 ಜನರಿಂದ ಸಾಮೂಹಿಕ ಅತ್ಯಾಚಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights