Covid 19 : ವಿಶ್ವದಲ್ಲಿ ವೈರಸ್ ಗೆ ಸತ್ತವರ ಸಂಖ್ಯೆ 1 ಲಕ್ಷ 82 ಸಾವಿರಕ್ಕೂ ಹೆಚ್ಚು..details ಇಲ್ಲಿದೆ

ದಿನದಿಂದ ದಿನಕ್ಕೆ ಕೊರೊನಾ ವೈರಸ್ ತನ್ನ ಪ್ರಭಾವ ಹೆಚ್ಚಿಸುತ್ತಲೆ ಇದೆ. ಇದರಿಂದ ವಿಶ್ವದಲ್ಲಿ ದಿನೇ ದಿನೇ ಪೀಡಿತರ ಸಂಖ್ಯೆ ವೃದ್ಧಿಸುತ್ತಲೇ ಇದೆ. ‘ಕೋವಿಡ್–19’ ನಿಂದ ವಿಶ್ವದಲ್ಲಿ ಒಂದು ಲಕ್ಷ 82 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಈ ಸೋಂಕಿಗೆ 26.22 ಲಕ್ಷಕ್ಕೂ ಹೆಚ್ಚು ಜನರು ಒಳಗಾಗಿದ್ದಾರೆ.


ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕೇಂದ್ರ (ಸಿಎಸ್‌ಎಸ್‌ಇ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ವಿಶ್ವದಾದ್ಯಂತ ಒಟ್ಟು 26,22,637 ಜನರು ಕರೋನಾ ವೈರಸ್‌ಗೆ ತುತ್ತಾಗಿದ್ದರೆ. ಸಾವಿನ ಸಂಖ್ಯೆ 1,82,818 ಕ್ಕೆ ಏರಿದೆ. ಇಲ್ಲಿಯವರೆಗೆ, ವಿಶ್ವಾದ್ಯಂತ 7,08,798 ಜನರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.
ಕೊರೊನಾ ವೈರಸ್ ಸೋಂಕು ಭಾರತದಲ್ಲಿಯೂ ವೇಗವಾಗಿ ಹರಡುತ್ತಿದ್ದು ಮತ್ತು ಆರೋಗ್ಯ ಸಚಿವಾಲಯ ಗುರುವಾರ ಬೆಳಿಗ್ಗೆ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ದೇಶದಲ್ಲಿ ಸೋಂಕಿತರ ಸಂಖ್ಯೆ 21393 ತಲುಪಿದ್ದು, 681 ಜನರು ಈ ವೈರಸ್ ನಿಂದ ಜೀವನ ಕಳೆದುಕೊಂಡಿದ್ದಾರೆ.


ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್  ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಅಮೆರಿಕಾದಲ್ಲಿ ಇಲ್ಲಿಯವರೆಗೆ ಇಲ್ಲಿ 8,40,476 ಜನರು ಸೋಂಕಿಗೆ ಒಳಗಾಗಿದ್ದರೆ, 46,611 ಜನರು ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿ 25,085 ಜನ ಸಾವನ್ನಪ್ಪಿದರೆ, 1,87,327 ಜನರಲ್ಲಿ ವೈರಸ್ ಕಾಣಿಸಿಕೊಂಡಿದೆ.
ಈ ಸೋಂಕಿನಿಂದ ಹೆಚ್ಚು ಬಾಧಿತ ರಾಷ್ಟ್ರಗಳ ಪಟ್ಟಿಯಲ್ಲಿ ಯುಎಸ್ ನಂತರ ಸ್ಪೇನ್ ಎರಡನೇ ಸ್ಥಾನದಲ್ಲಿದೆ. ಇಲ್ಲಿಯವರೆಗೆ 208389 ಜನರು ಬಾಧಿತರಾಗಿದ್ದಾರೆ ಮತ್ತು 21717 ಜನರು ಈ ಕಾರಣದಿಂದಾಗಿ ಸಾವನ್ನಪ್ಪಿದ್ದಾರೆ ಮತ್ತು 85915 ರೋಗಿಗಳನ್ನು ಗುಣಪಡಿಸಲಾಗಿದೆ.
ಈ ಜಾಗತಿಕ ಸಾಂಕ್ರಾಮಿಕ ಕೇಂದ್ರವಾದ ಚೀನಾದಲ್ಲಿ ಈವರೆಗೆ 82,798 ಜನರು ಸೋಂಕಿಗೆ ಒಳಗಾಗಿದ್ದಾರೆ ಮತ್ತು 4,632 ಮಂದಿ ಸಾವನ್ನಪ್ಪಿದ್ದಾರೆ.


ಯುರೋಪಿಯನ್ ರಾಷ್ಟ್ರಗಳಾದ ಫ್ರಾನ್ಸ್ ಮತ್ತು ಜರ್ಮನಿಯಲ್ಲೂ ಕೊರೊನಾ ಅಟ್ಟಹಾಸ ಮೆರೆದಿದೆ. ಫ್ರಾನ್ಸ್‌ನಲ್ಲಿ ಈವರೆಗೆ 1,59,315 ಜನರು ಸೋಂಕಿಗೆ ಒಳಗಾಗಿದ್ದು, ಅದರಲ್ಲಿ 21,340 ಜನರು ಸಾವನ್ನಪ್ಪಿದ್ದಾರೆ. ಜರ್ಮನಿಯಲ್ಲಿ, 1,50,648 ಜನರು ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಮತ್ತು 5.315 ಜನರು ಸಾವನ್ನಪ್ಪಿದ್ದಾರೆ. ಬ್ರೀಟನ್ ನಲ್ಲೂ 1,33,495 ಜನರು ಸೋಂಕು ಹೊಂದಿದ್ದು, 18,100 ಜನರು ಸಾವನ್ನಪ್ಪಿದ್ದಾರೆ.
ಉಳಿದಂತೆ, ಬೆಲ್ಜಿಯಂನಲ್ಲಿ 6,262, ನೆದರ್‌ಲ್ಯಾಂಡ್‌ನಲ್ಲಿ 4,054, ಬ್ರೆಜಿಲ್‌ನಲ್ಲಿ 2,906, ಟರ್ಕಿಯಲ್ಲಿ 2,376, ಸ್ವೀಡನ್‌ನಲ್ಲಿ 1,937, ಕೆನಡಾದಲ್ಲಿ 1,871, ಸ್ವಿಟ್ಜರ್‌ಲ್ಯಾಂಡ್‌ನಲ್ಲಿ 1,478, ಪೋರ್ಚುಗಲ್‌ನಲ್ಲಿ 785, ಮೆಕ್ಸಿಕೊದಲ್ಲಿ 970, ಇಂಡೋನೇಷ್ಯಾದಲ್ಲಿ 635, ಐರ್ಲೆಂಡ್‌ನಲ್ಲಿ 730, ಆಸ್ಟ್ರೀಯಾದಲ್ಲಿ 510, ಈಕ್ವೆಡಾರ್ 520, ರೊಮೇನಿಯಾದಲ್ಲಿ 508, ಫಿಲಿಪೈನ್ಸ್‌ನಲ್ಲಿ 446, ಪೋಲೆಂಡ್‌ನಲ್ಲಿ 404, ಅಲ್ಜೀರಿಯಾದಲ್ಲಿ 392, ಡೆನ್ಮಾರ್ಕ್‌ನಲ್ಲಿ 384 ಮತ್ತು ದಕ್ಷಿಣ ಕೊರಿಯಾದಲ್ಲಿ 240. ಇದಲ್ಲದೆ ಪಾಕಿಸ್ತಾನದಲ್ಲಿ ಕೊರಾನಾ ವೈರಸ್‌ನಿಂದ 212 ಜನರು ಜೀವತೆತ್ತಿದ್ದಾರೆ…

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights