FACT CHECK | ದಲಿತರು ಗಂಗಾ ನದಿಯಲ್ಲಿ ಸ್ನಾನ ಮಾಡಿ ಅಪವಿತ್ರಗೊಳಿಸಿದ್ದಾರೆಂದು ಬೆತ್ತಲೆಗೊಳಿಸಿ ಥಳಿಸಲಾಗಿದೆಯೇ?

ಗಂಗಾ ನದಿಯಲ್ಲಿ ಸ್ನಾನ ಮಾಡಿ ಅಪವಿತ್ರಗೊಳಿಸಿದ್ದಾರೆ ಎಂಬ ಕಾರಣಕ್ಕೆ ಉತ್ತರ ಪ್ರದೇಶದ ಮನುವಾದಿ ವ್ಯಕ್ತಿಗಳು ದಲಿತ ಯುವಕರನ್ನು ಬೆತ್ತಲೆಗೊಳಿಸಿ ಥಳಿಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ.

‘ಈ ದೇಶದಲ್ಲಿ ದಲಿತರು ಸಂಪೂರ್ಣ ಸುರಕ್ಷಿತ ಆದರೆ ಮನುವಾದಿಗಳ ಗಂಗೆ ಅಥವಾ ದೇವಸ್ಥಾನಕ್ಕೆ ಹೋದರೆ ಸಾಕು ಅವರಿಗೆ ಈ ರೀತಿ ಬಹುಮಾನ ನೀಡಲಾಗುವುದು’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

 

 

 

 

 

 

 

 

 

 

 

 

 

 

 

 

 

 

 

 

ಆರ್ಕೈವ್ ಮಾಡಿದ ಪೋಸ್ಟ್ ಅನ್ನು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ? ಗಂಗಾ ನದಿಯಲ್ಲಿ ಸ್ನಾನ ಮಾಡಿದ ಕಾರಣಕ್ಕೆ ನದಿ ಅಪವಿತ್ರವಾಗಿದೆ ಎಂದು ದಲಿತರನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಲಾಗಿದೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,  12 ಸೆಪ್ಟೆಂಬರ್ 2024 ರಂದು ಧಮ್ನೋಡ್ ಸಮಾಚಾರ್ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟವಾದ ವೀಡಿಯೊಗೆ ಲಭ್ಯವಾಗಿದೆ. “ಮಹೇಶ್ವರದ ನರ್ಮದಾ ನದಿಯಲ್ಲಿ ಯುವಕರು ನಗ್ನವಾಗಿ ಸ್ನಾನ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಯುವಕರು ಮತ್ತು ಭಕ್ತರು ಅವರನ್ನು ತೀವ್ರವಾಗಿ ಥಳಿಸಿದ್ದಾರೆ” ಎಂದು ವಿಡಿಯೋದ ವಿವರಣೆಯಲ್ಲಿ ತಿಳಿಸಲಾಗಿದೆ.

 

 

 

 

 

 

 

 

 

 

 

 

ಈ ವಿವರಣೆಯಿಂದ ಸುಳಿವು ತೆಗೆದುಕೊಂಡು, ಗೂಗಲ್ ಕೀವರ್ಡ್ ಸರ್ಚ್ ಮಾಡಿದಾಗ, ಹಲವಾರು ಮಾಧ್ಯಮ ವರದಿಗಳು (ಇಲ್ಲಿ) ಲಭ್ಯವಾಗಿದೆ. ವರದಿಗಳ ಪ್ರಕಾರ, ಮಧ್ಯಪ್ರದೇಶದ ಘಾಟ್ ಮಹೇಶ್ವರದ ಅಹಲ್ಯದಲ್ಲಿ ನರ್ಮದಾ ನದಿಯಲ್ಲಿ ಕೆಲವು ಯುವಕರು ನಗ್ನವಾಗಿ ಸ್ನಾನ ಮಾಡುತ್ತಿದ್ದರು. ಹತ್ತಿರದ ಜನರು ಗಮನಿಸಿ ಯುವಕರ ಮತ್ತೊಂದು ಗುಂಪಿಗೆ ಮಾಹಿತಿ ನೀಡಿದರು. ಈ ಗುಂಪು ಘಾಟ್ ಗೆ ಬಂದು, ನಗ್ನ ಯುವಕರನ್ನು ನದಿಯಿಂದ ಹೊರಗೆಳೆದು ಥಳಿಸಿತು. ಕೆಲವು ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದರು, ಆದರೆ ಪೊಲೀಸರು ಬರುವ ಮೊದಲು, ಬೆತ್ತಲೆ ಯುವಕರು ಕ್ಷಮೆಯಾಚಿಸಿ ಓಡಿಹೋದರು ಎಂದಿದೆ.

 

 

 

 

 

 

 

 

 

 

 

 

 

ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮಹೇಶ್ವರ ಪೊಲೀಸ್ ಠಾಣೆಯ ಪೊಲೀಸ್‌ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದು. ಘಾಟ್‌ನಲ್ಲಿ ಬೆತ್ತಲೆಯಾಗಿ ಸ್ನಾನ ಮಾಡುತ್ತಿದ್ದ ಕೆಲವು ಯುವಕರು ಕುಡಿದು ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ್ದರಿಂದ  ಸ್ಥಳೀಯ ಜನರು ಅವರನ್ನು ಥಳಿಸಿ ಓಡಿಸಲು ಕಾರವಾಗಿದೆ. ಆದರೆ, ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಯಾವುದೇ ಲಿಖಿತ ದೂರು ದಾಖಲಾಗಿಲ್ಲ. ಈ ಘಟನೆಯಲ್ಲಿ ಯಾವುದೇ ಜಾತಿ ಅಥವಾ ಧಾರ್ಮಿಕ ಕೋನವನ್ನು ಪೊಲೀಸರು ನಿರಾಕರಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಮಧ್ಯಪ್ರದೇಶದ ಅಹಲ್ಯಾ ಘಾಟ್‌ನಲ್ಲಿ ನಗ್ನವಾಗಿ ಸ್ನಾನ ಮಾಡಿದ್ದಕ್ಕಾಗಿ ಯುವಕರನ್ನು ಥಳಿಸಿದ ಘಟನೆಯನ್ನು ಗಂಗಾದಲ್ಲಿ ಸ್ನಾನ ಮಾಡುವಾಗ ದಲಿತರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಬೆಳಗಾವಿಯ ಚಿಕ್ಕೋಡಿಯಲ್ಲಿ ಬೀದಿ ದೀಪದ ಕಂಬಗಳಿಗೆ ಹಾಕಿದ್ದು ಪಾಕ್ ಧ್ವಜವಲ್ಲ ಮತ್ತೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights