FACT CHECK | ರಾಹುಲ್ ಗಾಂಧಿ ಸಮ್ಮುಖದಲ್ಲೆ ಕೆ.ಸಿ ವೇಣುಗೋಪಲ್‌ ಮದ್ಯ ಸೇವನೆ ಮಾಡಿದ್ದು ನಿಜವೇ?

ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಸತತ ಎರಡನೇ ಬಾರಿಗೆ ಭಾರಿ ಅಂತರದಿಂದ ಗೆಲುವು ಸಾಧಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಉತ್ತರ ಕೇರಳ ಜಿಲ್ಲೆಯಲ್ಲಿ ಇತ್ತೀಚೆಗೆ ರೋಡ್ ಶೋ ನಡೆಸಿದರು.

ರೋಡ್‌ ಶೋ ವೇಳೆ ರಾಹುಲ್ ಗಾಂಧಿ ಕೇರಳದ ವೈಟ್‌ ಹೌಸ್‌ ಎಂಬ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದಾರೆ. ಅಲ್ಲಿ ಖಾದ್ಯಗಳನ್ನು ತಯಾರಿಸುವ ವಿಧಾನ ಮತ್ತು ಅಲ್ಲಿನ ಕೆಲಸದವರನ್ನು ಮಾತನಾಡಿಸಿದ್ದಾರೆ. ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಮತ್ತು ಕೆ.ಸಿ ವೇಣುಗೋಪಲ್‌ ರೆಸ್ಟೋರೆಂಟ್‌ನಲ್ಲಿ ಆಹಾರ ಸವಿದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು ಕೆ.ಸಿ ವೇಣುಗೋಪಲ್‌ ರೆಸ್ಟೋರೆಂಟ್‌ನಲ್ಲಿ ಮದ್ಯವನ್ನು ಸೇವಿಸಲು ರಾಹುಲ್ ಗಾಂಧಿ ಅನುವು ಮಾಡಿಕೊಟ್ಟಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಇನ್ನೂ ಕೆಲವರು “ರೆಸ್ಟೋರೆಂಟ್‌ನಲ್ಲಿ ಮದ್ಯ ಸೇವನೆಗೆ ಅವಕಾಶವೇ ಇಲ್ಲ. ಆದರೂ ಕೆ.ಸಿ ವೇಣುಗೋಪಾಲ್‌ ಅವರು ಧೈರ್ಯದಿಂದ ಮಧ್ಯವನ್ನು ಸೇವಿಸಿದ್ದಾರೆ ಎಂದರೆ ಇದರ ಹಿಂದೆ ರಾಹುಲ್‌ ಗಾಂಧಿ ಅವರ ಪ್ರಭಾವ ಇರಬಹುದು” ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

 

ಫ್ಯಾಕ್ಟ್‌ಚೆಕ್‌ :

ಕೆ.ಸಿ.ಮೇಣಗೋಪಾಲ್ ರಾಹುಲ್ ಗಾಂಧಿ ಸಮ್ಮುಖದಲ್ಲಿ ಮದ್ಯಸೇವನೆ ಮಾಡಿದ್ದಾರೆ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸಲು ವೈಟ್‌ಹೌಸ್‌ ರಸ್ಟೋರೆಂಟ್‌ನ ವೆಬ್‌ತಾಣವನ್ನು ಸರ್ಚ್ ಮಾಡಿದಾಗ, ರೆಸ್ಟೋರೆಂಟ್‌ನಲ್ಲಿನ ವಿವಿಧ ಖಾಧ್ಯಗಳ ಮೆನುಕಾರ್ಡ್‌ ಲಭ್ಯವಾಗಿದೆ. ಆದರೆ ಈ ಮೆನು ಚಾರ್ಟ್‌ನಲ್ಲಿ ಎಲ್ಲಿಯೂ ಮದ್ಯದ ಪಾನಿಯಗಳು ಕಂಡು ಬಂದಿಲ್ಲ. ಆದರೆ ತಂಪು ಪಾನಿಯ, ಚಹಾ ಮತ್ತು ಕಾಫಿ ಲಭ್ಯವಿರುವುದಾಗಿ ತಿಳಿದುಬಂದಿದೆ. ಬ್ಲ್ಯಾಕ್‌ ಟೀ ಎಂಬ ಪಾನೀಯ ಕೂಡ ಕಂಡು ಬಂದಿದೆ. ಹೀಗಾಗಿ ಇಲ್ಲಿ ಕೆ.ಸಿ. ವೇಣುಗೋಪಲ್‌ ಮದ್ಯ ಸೇವಿಸಿಲ್ಲ ಬದಲಾಗಿ ಬ್ಲ್ಯಾಕ್‌ ಟೀ ಅಥವಾ ಲೆಮೆನ್‌ ಟೀ ಸೇವನೆ ಮಾಡಿರುವ ಸಾಧ್ಯತೆ ಹೆಚ್ಚಿದೆ ಎಂಬುದು ತಿಳಿದು ಬಂದಿದೆ.

 

 

 

 

 

 

 

 

 

 

 

ಈ ಬಗ್ಗೆ ಮತ್ತಷ್ಟು ಪರಿಶಶೀಇಸಲು ಸರ್ಚ್  ಮಾಡಿದಾಗ, ಆಲ್ಟ್‌ ನ್ಯೂಸ್‌ ಫ್ಯಾಕ್ಟ್‌ಚೆಕರ್‌ ಮೊಹಬದ್‌ ಜುಬೈರ್‌ ಅವರು ಈ ಕುರಿತು ಮಾಡಿರುವ ಟ್ವೀಟ್‌ ಲಭ್ಯವಾಗಿದೆ. “ವೈಟ್‌ಹೌಸ್‌ ರೆಸ್ಟೋರೆಂಟ್‌ ಮ್ಯಾನೆಜರ್‌ ಕಬೀರ್‌ ಅವರ ಬಳಿ ಈಗಷ್ಟೇ ಮಾತನಾಡಿದೆ. ಕೆ.ಸಿ ವೇಣು ಗೋಪಲ್‌ ಅವರು ಸೇವನೆ ಮಾಡಿರುವುದು ಬ್ಲ್ಯಾಕ್‌ ಟೀ ಇದು ಮದ್ಯವಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ” ಎಂದು ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲಿಗೆ ಕೆ.ಸಿ ವೇಣುಗೋಪಾಲ್‌ ಅವರು ಸೇವನೆ ಮಾಡಿರುವುದು ಬ್ಲ್ಯಾಕ್‌ ಟೀ ಎಂಬುದು ಸ್ಪಷ್ಟವಾಗಿದೆ.

 

ಇನ್ನು ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕೇರಳದ ಯಾವುದಾದರು ಸುದ್ದಿ ಮಾಧ್ಯಮ ವರದಿ ಮಾಡಿವೆಯೆ ಎಂದು ಪರಿಶೀಲನೆ ನಡೆಸಿದಾಗ, ಕೇರಳದ ಮಿಡಿಯಾ ಒನ್‌ ಸುದ್ದಿ ಸಂಸ್ಥೆ ಈ ಕುರಿತು ವರದಿಯೊಂದನ್ನು ಪ್ರಕಟಿಸಿದ್ದು, ಅದರಲ್ಲಿ ಕೂಡ ಕೆ.ಸಿ.ವೇಣುಗೋಪಾಲ್‌ ಸೇವಿಸಿದ್ದು ಬ್ಲ್ಯಾಕ್‌ ಟೀ ಹೊರತು ಮದ್ಯವಲ್ಲ ಎಂದು ಸ್ಪಷ್ಟ ಪಡಿಸಲಾಗಿದೆ.

 

 

 

 

 

 

 

 

 

 

ಇಲ್ಲಿ ಬ್ಲ್ಯಾಕ್‌ ಟೀ ಎಂಬುದು ಕಪ್ಪು ಚಹಾವಾಗಿದ್ದು,  ಮಾಮೂಲಿಯಾಗಿ ಕುಡಿಯುವ ಚಹಾಗೆ ಹಾಲನ್ನು ಬೆರೆಸದೆ ಮಾಡಲಾಗುತ್ತದೆ. ಇನ್ನು ಈ ಬ್ಲ್ಯಾಕ್‌ ಟೀ ಅನ್ನು ಕೇರಳದಲ್ಲಿ ಕಟ್ಟನ್‌ ಚಾಯ್ ಎಂದು ಕರೆಯುತ್ತಾರೆ. ಬ್ಲಾಕ್ ಟೀ ಕೇರಳದಲ್ಲಿ ಜಯಪ್ರಿಯ ಚಹಾವಾಗಿದ್ದು, ಕೇರಳಿಗರು ಯಾವುದಾದರು ಒಂದು ಖಾದ್ಯವೋ  ಅಥವಾ ಉಪಹಾರದ ಜೊತೆಗೆ ಈ ಚಹಾವನ್ನು ಸೇವನೆ ಮಾಡುತ್ತಾರೆ.

 

 

 

 

 

 

 

 

 

 

 

 

ಒಟ್ಟಾರೆಯಾಗಿ ಹೇಳುವುದಾದರೆ, ರಾಹುಲ್‌ ಗಾಂಧಿ ಮತ್ತು ಕೆ.ಸಿ. ವೇಣುಗೋಪಾಲ್ ಇಬ್ಬರು ಕೇರಳದ ವೈಟ್‌ಹೌಸ್‌ ರೆಸ್ಟೋರೆಂಟ್‌ಗೆ ಭೇಟಿ ನೀಡಿ ಆಹಾರ ಸೇವಿಸಿದ್ದಾರೆ. ಈ ಸಂದರ್ಭದಲ್ಲಿ ಕೆ.ಸಿ ವೇಣುಗೋಪಾಲ್ ಬ್ಲಾಕ್ ಕ್ ಟೀ ಕುಡಿದ್ದಾರೆ. ಇದನ್ನೆ ಬಲಪಂಥೀಯ ಸಾಮಾಜಿಕ ಮಾಧ್ಯಮಗಳ  ಪ್ರತಿಪಾದಕರು ಮದ್ಯಪಾನ ನಿಷೇಧವಿರುವ ಜಾಗದಲ್ಲೇ ಮದ್ಯ ಸೇವಿಸಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಂಡಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | 2019ಕ್ಕೆ ಹೋಲಿಸಿದರೆ 2024ರ ಲೋಕಸಭಾ ಚುನಾವಣೆಯಲ್ಲಿ BJP ಪಡೆದ ಮತ ಪ್ರಮಾಣದಲ್ಲಿ ಏರಿಕೆಯಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights