FACT CHECK | 2019ಕ್ಕೆ ಹೋಲಿಸಿದರೆ 2024ರ ಲೋಕಸಭಾ ಚುನಾವಣೆಯಲ್ಲಿ BJP ಪಡೆದ ಮತ ಪ್ರಮಾಣದಲ್ಲಿ ಏರಿಕೆಯಾಗಿದೆಯೇ?

2014ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) 31ರಷ್ಟು ಮತ ಗಳಿಸಿತ್ತು. ನಂತರ 2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ 37% ರಷ್ಟು ಮತ ಪ್ರಮಾಣ ದಾಖಲಾಗಿತ್ತು. ಈಗ ನಡೆದ 2024ರ  ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಮತ ಪ್ರಮಾಣ ಶೇ. 39ಕ್ಕೆ ಏರಿಕೆ ಕಂಡಿದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

BJP won 240 seats with 36.56% vote share in 2024 elections and not 39% as claimed.

ಪೋಸ್ಟ್‌ನ ಆರ್ಕೈವ್‌ ಮಾಡಿದ ಲಿಂಕ್ಅನ್ನು ನೀವು ಇಲ್ಲಿ,  ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ 2024 ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು 39ರಷ್ಟು ಮತ ಗಳಿಸಿದೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾದ ಪೋಸ್ಟ್‌ಅನ್ನು ಪರಿಶೀಲಿಸಲು ಚುನಾವಣಾ ಆಯೋಗ ಪ್ರಕಟಿಸಿರುವ ಪಕ್ಷವಾರು ಮತ ಪ್ರಮಾಣದ ಪಟ್ಟಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವುದು ಲಭ್ಯವಾಗಿದೆ.

ಚುನಾವಣಾ ಆಯೋಗದ ಅಂಕಿ -ಅಂಶಗಳ ಪ್ರಕಾರ ಬಿಜೆಪಿ 23,59,73,935 ಮತಗಳನ್ನು ಪಡೆಯುವ ಮೂಲಕ 240 ಸ್ಥಾನಗಳನ್ನು ಗೆದ್ದು ಶೇ. 36.56 ಮತಗಳನ್ನು ಗಳಿಸಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಶೇ. 39ರಷ್ಟು ಮತಗಳು ಬಿದ್ದಿವೆ ಎನ್ನುವ ತಪ್ಪು ಮಾಹಿತಿ ಇರುವ ಪೋಸ್ಟ್‌ ಅನ್ನು ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ನಲ್ಲಿ ಉಲ್ಲೇಖಿಸಲಾದ ಇತರ ಸಂಖ್ಯೆಗಳನ್ನು ಪರಿಶೀಲನೆ ನಡೆಸಲಾಗಿದೆ.

BJP won 240 seats with 36.56% vote share in 2024 elections and not 39% as claimed.

2014 ರಲ್ಲಿ ಬಿಜೆಪಿ 17,16,60,230 ಮತಗಳನ್ನು ಪಡೆಯುವ ಮೂಲಕ 282 ಸ್ಥಾನಗಳನ್ನು ಗೆದ್ದು ಶೇ. 31.34 ರಷ್ಟು ಮತಗಳನ್ನು ಗಳಿಸಿತ್ತು. ಚುನಾವಣಾ ಆಯೋಗದ ವೆಬ್‌ಸೈಟ್‌ನಿಂದ ಪಡೆದ 2014ರ ಚುನಾವಣೆಯ ಅಂಕಿ-ಅಂಶಗಳು ಹೀಗಿವೆ.

BJP won 240 seats with 36.56% vote share in 2024 elections and not 39% as claimed.

ಮತ್ತು 2019 ರಲ್ಲಿ ಬಿಜೆಪಿ ಶೇ. 37.7ರಷ್ಟು ಮತಗಳನ್ನು ಅಂದರೆ 22,90,76,879 ಮತಗಳನ್ನು ಪಡೆಯುವ ಮೂಲಕ 303 ಸ್ಥಾನಗಳನ್ನು ಗೆದ್ದುಕೊಂಡಿದೆ. ಆದ್ದರಿಂದ, ಬಿಜೆಪಿಯ ಗರಿಷ್ಠ ಮತ ಗಳಿಕೆ ಪ್ರಮಾಣ 2019 ರದ್ದಾಗಿದ್ದು, ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಾದ 2019ರ ಚುನಾವಣೆಯ ಅಂಕಿ-ಅಂಶಗಳು ಕೆಳಗಿನಂತಿವೆ.

BJP won 240 seats with 36.56% vote share in 2024 elections and not 39% as claimed.

 

ಒಟ್ಟಾರೆಯಾಗಿ ಹೇಳುವುದಾದರೆ, 2024ರ ಲೋಕಸಭೆ ಚುನಾವಣೆಯಲ್ಲಿ BJP 2019ಕ್ಕಿಂತ ಹೆಚ್ಚಿನ ಮತಗಳನ್ನು ಗಳಿಸಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ನೀಡಿದ್ದ ಭರವಸೆಗಳ ಬಗ್ಗೆ ಕ್ಷಮೆಯಾಚಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights