ಟೋಕಿಯೊ ಒಲಿಂಪಿಕ್ಸ್‌: ಓಟದಲ್ಲಿ ಮುಗ್ಗರಿಸಿದ ದ್ಯುತಿ ಚಾಂದ್‌; ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲ!

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಭರವಸೆಯ ಓಟಗಾರ್ತಿ ದ್ಯುತಿ ಚಾಂದ್‌ ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲಾಗಿದ್ದಾರೆ.

ಬೆಳಗ್ಗೆ ನಡೆದ ಮಹಿಳೆಯರ  200 ಮೀಟರ್ ಓಟದ ಸ್ಪರ್ಧೆಯ ಹೀಟ್ 4ರಲ್ಲಿ ಸ್ಪರ್ಧಿಸಿದ್ದ ಅವರು 38ನೇ ಸ್ಥಾನವನ್ನು ಪಡೆದಿದ್ದು, ಸೆಮಿಫೈನಲ್‌ ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ.

200 ಮೀಟರ್‌ ದೂರವನ್ನು 23.85 ಸೆಕೆಂಡುಗಳಲ್ಲಿ ದ್ಯುತಿ ತಲುಪಿದರು. ಆದರೆ, ಸೆಮಿ ಫೈನಲ್‌ಗೆ ಅರ್ಹತೆಯನ್ನು ಪಡೆಯಲಾಗಿಲ್ಲ.

ಹಿಂದಿನ ಒಲಿಂಪಿಕ್ಸ್‌ನಲ್ಲಿ 200 ಮೀ. ಓಟವನ್ನು 23 ಸೆಕೆಂಡುಗಳಲ್ಲಿ ಕ್ರಮಿಸಿದ್ದರು.

ಎಲ್ಲ ಏಳು ಹೀಟ್ಸ್‌ನ ಅಗ್ರ ಮೂವರು ಮತ್ತು ಬಳಿಕದ ಅತಿ ವೇಗದ ಮೂವರು ಅಥ್ಲೀಟ್‌ಗಳು ಸೆಮಿಫೈನಲ್‌ಗೆ ಅರ್ಹತೆಯನ್ನು ಪಡೆದಿದ್ದಾರೆ.

ಮಹಿಳೆಯರ 100 ಮೀಟರ್ ಓಟದಲ್ಲೂ ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ದ್ಯುತಿ ವಿಫಲರಾಗಿದ್ದಾರೆ.

ಇದನ್ನೂ ಓದಿ: ಒಲಿಂಪಿಕ್ಸ್‌; ಭಾರತಕ್ಕೆ ಮತ್ತೊಂದು ಪದಕ; ಕಂಚು ಗೆದ್ದ ಪಿವಿ ಸಿಂಧು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights