ಒಲಿಂಪಿಕ್ಸ್‌; ಭಾರತಕ್ಕೆ ಮತ್ತೊಂದು ಪದಕ; ಕಂಚು ಗೆದ್ದ ಪಿವಿ ಸಿಂಧು!

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್‌ ಸೆಮಿಫೈನಲ್‌ನಲ್ಲಿ ಸೋಲುಂಡಿದ್ದ ಭಾರತದ ನೆಚ್ಚಿನ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಕಂಚಿನ ಪದಕವನ್ನು ಗೆದ್ದಿದ್ದಾರೆ.

ಇಂದು ನಡೆದ ಕಂಚಿನ ಪದಕಕ್ಕಾಗಿನ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಪಿವಿ ಸಿಂಧು ಕಂಚಿನ ಪದಕಕ್ಕೆ ಕೊರಳೊಡಿದ್ದಾರೆ. ಅಲ್ಲಿಗೆ ಎರಡು ಪದಕಗಳಿಗೆ ಭಾರತ ಭಾಜನವಾಗಿದೆ.

ಇಂದಿನ ಪಂದ್ಯದಲ್ಲಿ ಪಿವಿ ಸಿಂಧು ಚೀನಾದ ಹಿ ಬಿಂಗ್‌ಜಾವ್‌‌ ಅವರ ವಿರುದ್ದ ಸೆಣಸಿದರು. 21-13 ಅಂತರದಿಂದ ಮೊದಲ ಸೆಟ್ ಗೆದ್ದ ಸಿಂಧು ಎರಡನೇ ಸೆಟ್ ಅನ್ನು 21-15 ಗೆದ್ದು ನೇರ ಸೆಟ್‌ಗಳಿಂದ ವಿಜಯಿಯಾದರು.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ಇಡೀ ಆಟದಲ್ಲಿ ಪಾರಮ್ಯ ಮೆರೆದರು. ಈ ಗೆಲುವಿನ ಮೂಲಕ ಶನಿವಾರದ ಸೆಮಿಫೈನಲ್ ಸೋಲನ್ನು ಮರೆಸಿದರು.

ಶನಿವಾರದ ಪಂದ್ಯದಲ್ಲಿ ತೈವಾನ್‌ನ ಥಾಯಿ ತ್ಸು ಯಿಂಗ್‌‌ ಅವರ ವಿರುದ್ದ 18-21, 12-21 ಅಂತರದಲ್ಲಿ ಸೋಲನ್ನು ಅನುಭವಿಸಿದ್ದರು.

ಇದನ್ನೂ ಓದಿ; ಒಲಿಂಪಿಕ್ಸ್‌ನಲ್ಲಿ 7 ಪದಕ ಗೆದ್ದ ಈಜುಗಾರ್ತಿ; ವಿಶ್ವ ದಾಖಲೆ ನಿರ್ಮಿಸಿದ ಎಮ್ಮಾ ಮೆಕಿಯನ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights