ಕಮರಿಗೆ ಬಿದ್ದ ಬಸ್ : 8 ಜನ ಸಾವು – 11 ಮಂದಿಗೆ ಗಾಯ…!

ಖಾಸಗಿ ಬಸ್ ವೊಂದು ಆಳವಾದ ಕಮರಿಗೆ ಬಿದ್ದು ಎಂಟು ಜನರು ಸಾವನ್ನಪ್ಪಿದ್ದು 11 ಮಂದಿ ಗಾಯಗೊಂಡ ಘಟನೆ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ನಡೆದಿದೆ.

ಬೆಳಿಗ್ಗೆ ಟೀಸಾ ಉಪವಿಭಾಗದಲ್ಲಿ ಅಪಘಾತ ಸಂಭವಿಸಿದೆ ಎಂದು ಚಂಬಾ ಪೊಲೀಸ್ ವರಿಷ್ಠಾಧಿಕಾರಿ ಎಸ್ ಅರುಲ್ ಕುಮಾರ್ ತಿಳಿಸಿದ್ದಾರೆ.

ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರು, ಅಪಘಾತದ ನಿಖರ ಕಾರಣವನ್ನು ಕಂಡುಹಿಡಿಯಲು ತನಿಖೆಗೆ ಆದೇಶಿಸಿದ್ದಾರೆ.

ಅಪಘಾತದಲ್ಲಿ ಸಾವನ್ನಪ್ಪಿದ ಬಗ್ಗೆ ದುಃಖ ವ್ಯಕ್ತಪಡಿಸಿದ ಮುಖ್ಯಮಂತ್ರಿ, ಬೆಳಿಗ್ಗೆ 10.15 ಕ್ಕೆ ಟೀಸಾದ ಕಾಲೋನಿ ಮೊರ್ಹ್ ಬಳಿ ಸುಮಾರು 200 ಮೀಟರ್ ಆಳದ ಕಮರಿಗೆ ಬಸ್ ಬಿದ್ದು ಎಂಟು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸದನಕ್ಕೆ ಮಾಹಿತಿ ನೀಡಿದರು.

ಗಾಯಾಳುಗಳನ್ನು ವೈದ್ಯಕೀಯ ಕಾಲೇಜು ಚಂಬಾಗೆ ಕರೆದೊಯ್ಯಲಾಗಿದೆ. ಇದರಲ್ಲಿ ನಾಲ್ವರು ಗಂಭೀರವಾಗಿದೆ ಎಂದು ಹೇಳಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights