ಒಲಿಂಪಿಕ್ಸ್‌ನಲ್ಲಿ 7 ಪದಕ ಗೆದ್ದ ಈಜುಗಾರ್ತಿ; ವಿಶ್ವ ದಾಖಲೆ ನಿರ್ಮಿಸಿದ ಎಮ್ಮಾ ಮೆಕಿಯನ್‌!

ಟೋಕಿಯೋ ಒಲಿಂಪಿಕ್ಸ್‌ನಲ್ಲಿ 07 ಪದಕಗಳನ್ನು ಗೆದ್ದಿರುವ ಆಸ್ಪ್ರೇಲಿಯಾದ ಈಜುಗಾರ್ತಿ ಎಮ್ಮಾ ಮೆಕಿಯನ್‌ ಅವರು ವಿಶ್ವದಾಖಲೆ ನಿರ್ಮಿಸಿದ್ದಾರೆ.

ಇದೂವರೆಗೂ, ಒಲಿಂಪಿಕ್ಸ್‌ನಲ್ಲಿ ಅತೀ ಹೆಚ್ಚು ಪದಕಗಳನ್ನು ಗೆದ್ದಿರುವ ಮಹಿಳಾ ಸ್ಪರ್ಧಿ ಎಂಬ ಖ್ಯಾತಿಗೆ ಎಮ್ಮಾ ಮೆಕಿಯನ್‌ ಪಾತ್ರರಾಗಿದ್ದಾರೆ.

ಈ ಹಿಂದೆ 1952ರಲ್ಲಿ ಸೋವಿಯತ್ ಒಕ್ಕೂಟದ ಜಿಮ್ನಾಸ್ಟ್ ಪಟು ಮರಿಯ ಗೊರೊವೊವಿಸ್ಕ ಏಳು ಪದಕಗಳನ್ನು ಜಯಿಸಿದ್ದರು.

ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಈಜು ಸ್ಪರ್ಧೆಯಲ್ಲಿ ಅತ್ಯಂತ ಹೆಚ್ಚು ಪದಕ ಗೆದ್ದ ಮಹಿಳಾ ಈಜುಗಾರ್ತಿ ಎಂಬ ಹಿರಿಮೆಗೂ ಎಮ್ಮಾ ಪಾತ್ರರಾಗಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಎಮ್ಮಾ ಮೆಕಿಯನ್ 4-100 ಮೀ. ಪ್ರೀಸ್ಟೈಲ್ ರಿಲೇ (ಚಿನ್ನ), 100 ಮೀ. ಫ್ರೀಸ್ಟೈಲ್ (ಚಿನ್ನ) , 50 ಮೀ. ಫ್ರೀಸ್ಟ್ರೈಲ್ (ಚಿನ್ನ), 4-100 ಮೀ. ಮೆಡ್ಲಿ ರಿಲೇ (ಚಿನ್ನ),  100 ಮೀ. ಬಟರ್ ಫ್ಲೈ (ಕಂಚು), 4-200 ಮೀ. ಫ್ರೀ ಸ್ಟೈಲ್ ರಿಲೇ (ಕಂಚು), 4-100 ಮೀ. ಮಿಕ್ಸೆಡ್ ಮೆಡ್ಲಿ ರಿಲೇ (ಕಂಚು)ಯಲ್ಲಿ ಜಯಿಸಿದ್ದಾರೆ.

ಇದನ್ನೂ ಓದಿ: ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ, ರಾಜಕೀಯ ತೊರೆಯುತ್ತೇನೆ’: ಕೇಂದ್ರ ಸಚಿವ ಬಬುಲ್‌ ಸುಪ್ರಿಯೋ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights