ತಮ್ಮ ಪೋಸ್ಟ್‌ ಎಡಿಟ್ ಮಾಡಿದ ಬಬುಲ್‌; ಯಾವ ಪಕ್ಷಕ್ಕೆ ಸೇರಲಿದ್ದಾರೆ?

ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ, ರಾಜಕೀಯ ತೊರೆಯುತ್ತೇನೆ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದ ಕೇಂದ್ರ ಸಚಿವ, ಪಶ್ಚಿಮ ಬಂಗಾಳ ಬಿಜೆಪಿ ಮುಖಂಡ ಬಬುಲ್‌ ಸುಪ್ರಿಯೋ ಅವರು, ಇದೀಗ ಅವರ ಪೋಸ್ಟ್‌ಅನ್ನು ಮತ್ತೆ ತಿದ್ದಿದ್ದಾರೆ.

ನಾನು ರಾಜಕೀಯ ತೊರೆಯುತ್ತೇನೆ. ‘ಟಿಎಂಸಿ, ಸಿಪಿಐ(ಎಂ) ಅಥವಾ ಕಾಂಗ್ರೆಸ್‌ ಸೇರುವುದಿಲ್ಲ’ ಎಂದು ಬರೆದು ಪೋಸ್ಟ್‌ ಹಾಕಿದ್ದ ಅವರು, ತಮ್ಮ ಪೋಸ್ಟ್‌ನಲ್ಲಿ ಎಡಿಟ್‌ ಮಾಡಿದ್ದು, ಈ ಸಾಲನ್ನು ತೆಗೆದು ಹಾಕಿದ್ದಾರೆ.

ಅವರು ತಮ್ಮ ಪೋಸ್ಟ್‌ಅನ್ನು ತಿದ್ದಿರುವುದು, ಇದೀಗ ಅವರು ಮತ್ತಾವ ಪಕ್ಷಕ್ಕೆ ಸೇರುತ್ತಾರೆ ಎಂಬ ಕುತೂಹಲವನ್ನು ಹುಟ್ಟುಹಾಕಿದೆ.

‘ನನ್ನ ತಂದೆ, ಪತ್ನಿ, ಮಗಳು ಮತ್ತು ಕೆಲವು ಆಪ್ತ ಸ್ನೇಹಿತರ ಮಾತುಗಳನ್ನು ಆಲಿಸಿದೆ. ಎಲ್ಲವನ್ನೂ ಆಲಿಸಿದ ನಂತರ, ಬೇರೆ ಯಾವುದೇ ಪಕ್ಷಕ್ಕೆ ಸೇರುವ ನಿರ್ಧಾರವನ್ನು ನಾನು ತೆಗೆದುಕೊಂಡಿಲ್ಲ. ನಾನು ಕಾಂಗ್ರೆಸ್, ಟಿಎಂಸಿ ಅಥವಾ ಸಿಪಿಎಂ ಪಕ್ಷಗಳನ್ನು ಸೇರುತ್ತಿಲ್ಲ ಎಂದು ಹೇಳಿದ್ದರು.

ಈಗ ಮೂಲ ಪೋಸ್ಟ್‌ನಲ್ಲಿ ‘ಕಾಂಗ್ರೆಸ್, ಟಿಎಂಸಿ ಅಥವಾ ಸಿಪಿಎಂ ಪಕ್ಷಗಳನ್ನು ಸೇರುತ್ತಿಲ್ಲ’ ಎಂಬ ಅಂಶವನ್ನು ಅವರೀಗ ಡಿಲಿಟ್‌ ಮಾಡಿದ್ದಾರೆ.

ಮೋದಿ ನೇತೃತ್ವದ ಕೇಂದ್ರ ಸಂಪುಟದಲ್ಲಿ 2014 ರಿಂದ ರಾಜ್ಯ ಖಾತೆ ಸಚಿವರಾಗಿ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡಿದ್ದ ಬಬೂಲ್‌ರನ್ನು ಇತ್ತೀಚೆಗೆ ಸಂಪುಟದಿಂದ ಹೊರದಬ್ಬಲಾಗಿತ್ತು. ಕೇಂದ್ರ ಸಂಪುಟದಿಂದ ತಮ್ಮನ್ನು ಕೈಬಿಟ್ಟಿದ್ದು ಹಾಗೂ ಪಕ್ಷದ ರಾಜ್ಯ ಘಟಕದ ನಾಯಕರ ಜೊತೆಗಿನ ಭಿನ್ನಮತದಿಂದ ಅವರು ರಾಜಕೀಯ ನಿವೃತ್ತಿಯ ನಿರ್ಧಾರ ಕೈಗೊಂಡಿದ್ದಾರೆ ಎಂದು ವಿಶ್ಲೇಷಿಸಲಾಗಿತ್ತು.

ಇದನ್ನೂ ಓದಿ: ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ, ರಾಜಕೀಯ ತೊರೆಯುತ್ತೇನೆ’: ಕೇಂದ್ರ ಸಚಿವ ಬಬುಲ್‌ ಸುಪ್ರಿಯೋ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights