ಕನ್ನಡದ ಕಣ್ಮಣಿ, ಹಿರಿಯ ಸಾಹಿತಿ ಜರಗನಹಳ್ಳಿ ಶಿವಶಂಕರ್ ವಿಧಿವಶ : ಗಣ್ಯರಿಂದ ಸಂತಾಪ!

ಕನ್ನಡದ ಕಣ್ಮಣಿ ಹೃದಯವಂತ ಸಾಹಿತಿ ಜರಗನಹಳ್ಳಿ ಶಿವಶಂಕರ್ (72) ಅವರು ಕೊರೊನಾ ಸೋಂಕಿನಿಂದಾಗಿ ಇಂದು ಬೆಳಿಗ್ಗೆ ನಿಧನರಾದರು.ಜರಗನಹಳ್ಳಿ ಶಿವಶಂಕರ್ ಅವರ ನಿಧನ ದಿಗ್ಭ್ರಮೆಯನ್ನು ಉಂಟುಮಾಡಿದೆ ಎಂದು ನಾಡಿನ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮಾನವತಾವಾದಿಯಂತಿದ್ದ ಜರಗನಹಳ್ಳಿಯವರ ಒಡನಾಟ ಇಂದು-ನಿನ್ನೆಯದಲ್ಲ, ಅವರ ಬದುಕು ಬರವಣಿಗೆ ಎಲ್ಲವೂ ಆದರ್ಶನೀಯ ಇಂತಹ ಅಪರೂಪದ ವ್ಯಕ್ತಿ ಇಹಲೋಕ ತ್ಯಜಿಸಿದ್ದು ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ ಎಸ್ ನಾಗಾಭರಣ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಜರಗನಹಳ್ಳಿ ಶಿವಶಂಕರ್ ಅವರು ಸಾಹಿತ್ಯ ಕ್ಷೇತ್ರದ ವಿವಿಧ ಪ್ರಕಾರಗಳಲ್ಲಿ ದುಡಿದವರು, ನಾಡು-ನುಡಿಗೆ ಸೇವೆ ಸಲ್ಲಿಸಿದವರು ಇಂತಹ ಅಪರೂಪದ ವ್ಯಕ್ತಿ ಕೊರೋನದಿಂದಾಗಿ ಬಾರದೂರಿಗೆ ಮರಳಿದ್ದು ಅತ್ಯಂತ ದುಃಖದ ವಿಷಯವಾಗಿದೆ. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ. ಅವರ ಅಭಿಮಾನಿಗಳು ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತಾ ಎಲ್ಲರೂ ಮನೆಯಲ್ಲಿಯೇ ಒಂದು ನಿಮಿಷ ಮೌನವನ್ನ ಆಚರಿಸುವ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸೋಣ ಎಂದು ಹೇಳಿದ್ದಾರೆ.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತುನ ಉಪಾಧ್ಯಕ್ಷರಾಗಿ. ಕನ್ನಡ ಸಾಹಿತ್ಯ ಪರಿಷತ್ತುನ ಗೌರವ ಕಾರ್ಯದರ್ಶಿಯಾಗಿ, ಜರಗನಹಳ್ಳಿ ವೀರಶೈವ ಸಮಾಜದ ಅಧ್ಯಕ್ಷರಾಗಿ, ಹಲವಾರು ಕನ್ನಡಪರ ಸಂಘಟನೆಗಳ ಒಡನಾಡಿಯಾಗಿ. ಸಂಘಟಕರಾಗಿ. ಸಾಮಾಜಿಕವಾಗಿ ಸೇವೆ ಸಲ್ಲಿಸಿದ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಧೀಮಂತ ನಾಯಕ ಇನ್ನು ನೆನಪು ಮಾತ್ರ.

ಕೋವಿಡ್ -19, ಸಾಂಕ್ರಾಮಿಕ ರೋಗವಾಗಿದ್ದು ತೀವ್ರಗತಿಯಲ್ಲಿ ಹರಡುತ್ತಿರುವುದು ಆತಂಕವನ್ನು ಹೆಚ್ಚಿಸಿದೆ. ನಾಡು-ನುಡಿಗೆ ಸೇವೆಸಲ್ಲಿಸಿದ ಹಲವಾರು ಮಹನೀಯರು ಒಬ್ಬರಾಗಿ ಬಾರದೂರಿಗೆ ಪಯಣ ಬಳಸುತ್ತಿದ್ದಾರೆ. ದಯಮಾಡಿ ಎಲ್ಲರೂ ಕಡ್ಡಾಯವಾಗಿ ಮುಖಗವಸು ಧರಿಸಿ, ಶುದ್ಧಹಸ್ತ ರಾಗಿ ದೈಹಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಮಾರಕ ರೋಗವನ್ನು ಆದಷ್ಟು ಬೇಗ ಹೊಡೆದೋಡಿಸಿ ನಾವು ಮತ್ತು ನಮ್ಮವರನ್ನು ಕಾಪಾಡಿಕೊಳ್ಳೋಣ.
“ನೆರಳಾಗಿ ನಿಂತ ಮರ ತೊಲೆಯಾಗಿ ಉಳಿಯಿತು ನೂರಾರು ವರುಷ ನೂರಾರು ವರುಷ ಆಳಿದ ಅರಸ ಹೆಣವಾಗಿ ಉಳಿಯಲಿಲ್ಲ ಮೂರು ದಿವಸ” ಎಂಬ ಅವರದೇ ಕವಿತೆಯ ಸಾಲುಗಳನ್ನು ನೆನಪು ಮಾಡಿಕೊಳ್ಳುತ್ತಾ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ನಾಡಿನ ಖ್ಯಾತ ಕವಿ,ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿ ಜರಗನಹಳ್ಳಿ ಶಿವಶಂಕರ್ ಅವರ ನಿಧನಕ್ಕೆ ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights