ರಾಯಚೂರು ಜಿಲ್ಲೆಯಲ್ಲಿ ಇಂದಿಗೂ ತೊಲಗಿಲ್ಲ ಅಸ್ಪೃಷ್ಯತೆ ಮತ್ತು ಜಾತಿಯ ಶೋಷಣೆ

ಸ್ವಾತಂತ್ರ್ಯ ನಂತರದಲ್ಲಿ ದೇಶದಲ್ಲಿ ಅಸ್ಪೃಷ್ಯತೆಯೇ ಇಲ್ಲವೆಂದು ಮೈಕ್‌ ಹಿಡಿದು ಬೋಂಗು ಬಿಡುವ ರಾಜಕಾರಣಿಗಳು ಮತ್ತು ಭಾಷಣಕಾರರಿಗೆ ಪ್ರತ್ಯಕ್ಷ ಉತ್ತರದಂತೆ ರಾಯಚೂರು ಜಿಲ್ಲೆಯಲ್ಲಿನ ಅನಿಷ್ಟ ಆಚರಣೆ ಬೆಳಕಿಗೆ ಬಂದಿದೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಗಟಗಲ್‌ ಗ್ರಾಮದಲ್ಲಿ ದಲಿತ ಸಮುದಾಯದವರು ಸಾವನಪ್ಪಿನದರೆ ಇಡೀ ಊರಿಗೆ ಅಪವಿತ್ರವೆಂದೂ, ಸಾವಿನ ಮನೆಗೆ ಬರುವವರು ಅಂಗಡಿಗಳಲ್ಲಿ ವ್ಯಾಪಾರ ಮಾಡಿದರೆ ಅಂಗಡಿಗಳಿಗೆ ಅಪಚಾರವಾಗುತ್ತದೆಂದು ಮೇಲ್ಜಾತಿಯವರ ಅಂಗಡಿಗಳು ಮತ್ತು ಹೋಟೆಲ್‌ಗಳನ್ನು ಮುಚ್ಚಲಾಗುತ್ತಿದೆ. ಸಾವಿನ ಮನೆಗೆ ಬರುವ ಇತರ ಊರುಗಳ ಜನರು ಅಂತ್ಯಸಂಸ್ಕಾರ ಮುಗಿಸಿ ಹಿಂದಿರುಗಿ ಹೋಗುವವರೆಗೂ ಯಾವುದೇ ಅಂಗಡಿಗಳನ್ನು ತೆರೆಯುವುದಿಲ್ಲ. ಸಂಸ್ಕಾರಕ್ಕೆ ಬಂದವರು ಕುಡಿಯಲು ನೀರು ಕೇಳಿದರೂ ಕೊಡದೆ ಅಸಹಕಾರ ತೋರುತ್ತಿರುವ ಅಮಾನವೀಕ ಆಚರಣೆ ಇಂದಿಗೂ ಈ ಹಳ್ಳಿಯಲ್ಲಿ ಜೀವಂತವಾಗಿ ತಾಂಡವವಾಡುತ್ತಿದೆ.

 

ಹಳ್ಳಿಯ ದಲಿತ ಸಮುದಾಯದ ಹಿರಿಯರೊಬ್ಬರು ಸಾವಿನಪ್ಪಿದ್ದ ಸಂದರ್ಭದಲ್ಲಿ ಈ ಅನಿಷ್ಟ ಆಚರಣೆ  ಸಾಮಾಜಿಕ ಜಾಲತಾಣದಲ್ಲಿ ಬೆಳಕಿಗೆ ಬಂದಿದೆ. ಅಂಗಡಿ ಹಾಗೂ ಹೋಟೆಲ್‌ಗಳನ್ನು ಬಂದ್‌ ಮಾಡಿಕೊರುವ ಬಗ್ಗೆ ವಿಷಯ ತಿಳಿದು ದಲಿತ ಸಂಘಟನೆಗಳ ಮುಖಂಡರು ಗಬ್ಬೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪೋಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಪೋಲಿಸರು ಹಳ್ಳಿಗೆ ಬರುವುದರ ಬಗ್ಗೆ ವಿಷಯ ತಿಳಿದು ಎಚ್ಚೆತ್ತುಕೊಂಡಿರುವ ಗ್ರಾಮ ಪಂಚಾಯತಿ ಗ್ರಾಮದಲ್ಲಿ ಬಂದ್‌ ಮಾಡಲಾರುವ ಅಂಗಡಿಗಳನ್ನು ತೆರೆಯಬೇಕು. ಇಲ್ಲದಿದ್ದರೆ ಪರವಾನಗಿ ರದ್ದುಗೊಳಿಸಿ, ಮುಂದೆ ವ್ಯಾಪಾರ ಮಾಡಲು ಅವಕಾಶ ನೀಡುವುದಿಲ್ಲ ಎಂದು ನೋಟೀಸ್‌ ನೀಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights