ಆಸೆಗೆ ಬಿದ್ದು ತಿಂದ್ರೆ ಆಪ್ಪತ್ತು ಕಾಡಿತ್ತು ಜೋಕೆ : ವಿಷ ಉಣಿಸುವ ಉಪ್ಪಿನಕಾಯಿ..!

ಉಪ್ಪಿನಕಾಯಿ ಅಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲಾ ಹೇಳಿ. ಊಟ ಮುಗಿದ ಬಳಿಕವೂ ಅದನ್ನ ಬೆರಳಿನಿಂದ ನಾಲಿಗೆಗೆ ಹಚ್ಚಿಕ್ಕೊಂಡು ಬಾಯಿ ಚಪ್ಪರಿಸೋರು ಇದ್ದಾರೆ. ಒಂದು ಚೂರು ಊಟ ರುಚಿಯಾಗಿಲ್ಲ ಅಂದರೆ ಅದನ್ನ ರುಚಿಯಾಗಿಸೋದೇ ಉಪ್ಪಿನಕಾಯಿ. ಆದರೆ ಕೆಲವರು ಉಪ್ಪಿನ ಕಾಯಿ ತಿನ್ನಲೇ ಬಾರದು. ಯಾಕೆ ಗೊತ್ತಾ..? ಈ ಸ್ಟೋರಿ ಓದಿ.

ಉಪ್ಪಿನ ಕಾಯಿ ಎಂದ ಕೂಡಲೇ ಕೆಲವರಿಗೆ ಬಾಯಲ್ಲಿ ನೀರುರಿಯುತ್ತದೆ. ಅದೆಷ್ಟೋ ಜನ ಉಪ್ಪಿನ ಕಾಯಿ ಇಲ್ಲದೆ ಊಟನೇ ಮಾಡೋದಿಲ್ಲ. ಊಟದಲ್ಲಿ ತನ್ನದೇ ಮಹತ್ವ ಹೊಂದಿದ ಉಪ್ಪಿನಕಾಯಿಗೆ ಮಾರು ಹೋಗದವರಿಲ್ಲ. ಹೀಗಾಗಿ ನಮ್ಮ ಪೂರ್ವಜರು ಮನೆಯಲ್ಲೇ ಆರೋಗ್ಯಕ್ಕೆ ಪೂರಕವಾದ ಉಪ್ಪಿನ ಕಾಯಿಯನ್ನು ತಯಾರು ಮಾಡ್ತಾಯಿದ್ದರು. ಆದ್ರೀಗ ನಾವು ಮನೆಯಲ್ಲಿ ಉಪ್ಪಿನ ಕಾಯಿ ತಯಾರಿಸುವುದಕ್ಕಿಂತ ಹೊರಗಡೆ ಕೊಂಡು ತರುವದೇ ಹೆಚ್ಚು. ಅದಕ್ಕಾಗೇ ಕೆಲವು ಸಂಸ್ಥೆಗಳು ಹುಟ್ಟಿಕೊಂಡಿವೆ. ಇತ್ತೀಚೆಗೆ ಉಪ್ಪಿನಕಾಯಿ ಹೆಚ್ಚುಕಾಲ ಬರಲು ರಾಸಾಯನಿಕಗಳನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದ ಮನುಷ್ಯನಲ್ಲಿ ನಾನಾ ಕಾಯಿಲೆ ಬರುವ ಸಾಧ್ಯತೆ ಇದೆ. ಹಾಗಾದ್ರೆ ಉಪ್ಪಿನಕಾಯಿ ಯಾರೆಲ್ಲಾ ತಿನ್ನಬಾರದು..? ಮತ್ತು ಯಾಕೆ..? ಅನ್ನೋದರ ಬಗ್ಗೆ ತಿಳಿಯೋಣ.

ಹೊಟ್ಟೆ ಉಬ್ಬರವಾಗುವ ಸಾಧ್ಯತೆ ಹೆಚ್ಚು – ಊಟಕ್ಕೆ ಉಪ್ಪಿನ ಕಾಯಿ ಇರಲೇಬೇಕು. ಉಪ್ಪು ತಿಂದವನು ನೀರು ಕುಡಿಯಲೇಬೇಕು. ಇದು ಎರಡುಕ್ಕೂ ಸಂಬಂಧವಿದೆ. ಉಪ್ಪಿನಕಾಯಿಯಲ್ಲಿ ಹುಳಿ ಪ್ರಮಾಣಕ್ಕೆ ತಕ್ಕಂತೆ ಉಪ್ಪಿನ ಪ್ರಮಾಣ ಅಧಿಕವಾಗಿರುತ್ತದೆ. ಹೀಗಾಗಿ ಉಪ್ಪಿನಕಾಯಿ ತಿಂದ ಬಳಿಕ ಅತೀ ಹೆಚ್ಚು ನೀರು ಕುಡಿಯುವುದು ಮುಖ್ಯ. ಇಲ್ಲವಾದಲ್ಲಿ ಹುಳಿತೇಗು, ಹೊಟ್ಟೆ ಉರಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಉಪ್ಪಿನಕಾಯಿ ಮೂಲಕ ಸೋಡಿಯಂ ಲವಣ ದೇಹ ಸೇರುತ್ತೆ – ಉಪ್ಪಿನ ಕಾಯಿ ಕೆಡದಂತೆ ರಾಸಾಯನಿಕ ಪದಾರ್ಥಗಳನ್ನು ಬಳಕೆ ಮಾಡಲಾಗುತ್ತದೆ. ಜೊತೆಗೆ ಉಪ್ಪಿನಕಾಯಿ ಮೂಲಕ ಸೋಡಿಯಂ ಲವಣ ದೇಹ ಸೇರುತ್ತೆ. ಇದರಿಂದ ಇದನ್ನ ಕರಗಿಸಲು ಹೆಚ್ಚಿನ ನೀರು ಕುಡಿಯಬೇಕು.

ಜೀರ್ಣ ಶಕ್ತಿಯನ್ನು ಕುಗ್ಗಿಸುತ್ತದೆ – ಝಠರವನ್ನು ಶಕ್ತರಹಿತವಾಗಿಸುತ್ತವೆ. ಇದರಿಂದ ಜೀರ್ಣಕ್ರಿಯೆ ಕುಟಿಂತಗೊಳ್ಳುತ್ತದೆ. ವಾಂತಿ, ಬೇಧಿಯಾಘುವ ಸಾಧ್ಯತೆ ಇರುತ್ತದೆ.

ಕೃತಕ ರಾಸಾಯನಿಕಗಳು ಬಳಕೆ – ಆರೋಗ್ಯ ಕೆಡುತ್ತದೆ, ಕಡಿಮೆ ಬೆಲೆ ಬಾಳುವ ಎಣ್ಣೆ ಬಳಕೆ ಸಾಧ್ಯತೆ ಇರುತ್ತದೆ. ಇದರಿಂದ ಇಂತಹ ಉಪ್ಪಿನ ಕಾಯಿಯನ್ನು ಕಡಿಮೆ ಬೆಲೆಗೆ ಮಾರುವುದು, ಅದನ್ನು ಖರೀದಿಸಿ ತಿನ್ನುವುದರಿಂದ ಆರೋಗ್ಯದಲ್ಲಿ ನಿಧಾನಗತಿಯ ಕಾಯಿಲೆಗಳು ಆವರಿಸಬಹುದು.

ಶುಗರ್ ಇದಿಯಾ ಬೀ ಕೇರ್ ಫುಲ್..? – ಮಧುಮೇಹಿಗಳಿಗೆ ಉಪ್ಪಿನಕಾಯಿ ಮಾರಕವಾಗಿದೆ. ಮಧುಮೇಹಿಗಳು ಮಾತ್ರೆ ಸೇವಿಸುತ್ತಿರುವ ವೇಳೆ ಉಪ್ಪು ಅಧಿಕ ಸೇವಿಸುವುದು ಅಪಾಯವೇ. ಯಾಕಂದ್ರೆ ಸಕ್ಕರೆ ಕಾಯಿಲೆ ಇರುವವರಿಗೆ ಮೂತ್ರವಿರ್ಜನೆ ಅಧಿಕವಾಗಿರುತ್ತದೆ. ಇದರಿಂದ ಕಿರಿಕಿರಿ ಅನುಭವಿಸುವವರು ಅಧಿಕ ನೀರು ಕುಡಿಯದೇ ಹೋದಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ.

ರಕ್ತದೊತ್ತಡ ಅಧಿಕವಾಗುವ ಸಾಧ್ಯತೆ-  ನಾವು ಮೊದಲೇ ಹೇಳಿದಂತೆ ಉಪ್ಪು ಹೊಂದಿರುವ ಉಪ್ಪಿನ ಕಾಯಿ ಮಿತಿಯಲ್ಲಿ ಸೇವಿಸಿದರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅಧಿಕವಾದ್ರೆ ರಕ್ತದೊತ್ತಡ ಅಧಿಕವಾಗುವ ಜೊತೆಗೆ ನಾನಾ ಕಾಯಿಲೆಗಳಿದೆ ದಾರಿಯಾಗಬಹುದು.

ಅಲ್ಸರ್ ಗೂ ಕಾರಣವಾಗಬಹುದು ಉಪ್ಪಿನ ಕಾಯಿ – ಉಪ್ಪಿನ ಕಾಯಿಯಲ್ಲಿ ನಾನಾ ಮಸಾಲಾ ಪಾದರ್ಥಗಳು ಇರುತ್ತವೆ. ಇವು ನಾಲಿಗೆಗೆ ಎಷ್ಟು ರುಚಿ ಉಣಬಡಿಸುತ್ತವೆಯೋ ಅಧಿಕಾದರೆ ಅಷ್ಟೇ ಅಪಾಯಕಾರಿ. ಕೆಲ ಮಸಲಾ ಪದಾರ್ಥಗಳು ಜಠರ ಪ್ರವೇಶ ಮಾಡುವಾಗ ತೊಂದರೆ ಮಾಡಬಹುದು. ಇದು ಅಲ್ಸರ್ ಗೂ ಕಾರಣವಾಗಬಹುದು.

ಹಾಗಂತ ಉಪ್ಪಿನ ಕಾಯಿ ತಿನ್ನೋದು ತಪ್ಪು..? ಇನ್ಮುಂದೆ ಉಪ್ಪಿನಕಾಯಿ ನಾವು ಸೇವಿಸುವುದಿಲ್ಲ ಅಂತ ದೃಢ ನಿರ್ಧಾರಕ್ಕೆ ಬಂದು ಬಡಿಬೇಡಿ. ನಾವೆಲ್ಲರೂ ಉಪ್ಪು, ಉಳಿ, ಖಾರ ಪ್ರೀಯರು. ನಮ್ಮ ಆರೋಗ್ಯ ಚೆನ್ನಾಗಿ ಇರಬೇಕಾದರೆ ಇದೆಲ್ಲವೂ ಬೇಕು. ಆದರೆ ಅತಿಯಾದ್ರೆ ಅಮೃತ ಕೂಡ ವಿಷ ಅನ್ನೋ ಹಾಗೆ ಅತಿಯಾದ್ರೆ ಉಪ್ಪಿನ ಕಾಯಿ ಕೂಡ ವಿಷವನ್ನುಣಬಡಿಸಬಹುದು. ಹೀಗಾಗಿ ಊಟದಲ್ಲಿ ಸೇವಿಸುವ ಉಪ್ಪಿನಕಾಯಿ ಒಂದು ಚಮಚಕ್ಕಿಂತ ಮೀರದಂತೆ ನೋಡಿಕ್ಕೊಳ್ಳಿ ಸಾಕು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights