ಖತರ್ನಾಕ್ ಮಹಿಳೆ ಮಾದಕ ಸಾಗಿಸುತ್ತಿದ್ದ ಬಗೆ ಕೇಳಿದ್ರೆ ಶಾಕ್ ಆಗ್ತೀರಾ…!

ಮಾದಕ ವಸ್ತುಗಳು ಇತ್ತೀಚಿನ ದಿನಮಾನಗಳಲ್ಲಿ ಎಗ್ಗಿಲ್ಲದೇ ಸಾಗಾಟ ಮಾಡಲಾಗುತ್ತಿದೆ. ಯಾರು..? ಹೇಗೆ ಅವುಗಳನ್ನ ಸಾಗಿಸುತ್ತಾರೆ ಅನ್ನೋದನ್ನ ಪತ್ತೆ ಹಚ್ಚೋದೇ ಕಷ್ಟ. ಪ್ರತೀ ಬಾರಿ ಇಂಥಹ ಪ್ರಕರಣಗಳು ಬೆಳಕಿಗೆ ಬಂದಾಗ ರೋಚಕ ಸತ್ಯಗಳು ಹೊರ ಬರುತ್ತವೆ. ಅಂತಹ ಕಡೂ ಸತ್ಯ ಹೊರಬಂದಿದ್ದು ಬ್ರೆಜಿಲ್ ನಲ್ಲಿ.
ಮೊನ್ನೆಯಷ್ಟೇ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮಾದಕ ವಸ್ತು ಸಾಗಾಟ ಮಾಡುತ್ತಿದ್ದದ್ದು ಬೆಳಕಿಗೆ ಬಂದಿತ್ತು. ಆದರೆ ಬ್ರೆಜಿಲ್ ನಲ್ಲಿ ಮಾದಕ ಸಾಗಿಸುತ್ತಿದ್ದ ಪರಿ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರೆಂಟಿ. ಅಷ್ಟಕ್ಕೂ ಮಾದಕ ಸಾಗಾಟ ಮಾಡಲು ಹೋಗಿ ಸಿಕ್ಕಿಕೊಂಡಿದ್ದು ಒಬ್ಬ ಮಹಿಳೆ.

ಅದು ಯಾವ ರೀತಿ ಗೊತ್ತಾ…? ಗುಪ್ತಾಂಗದಲ್ಲಿ ಕಾಂಡೋಮ್ ಗಳ ಮೂಲಕ ಡ್ರಗ್ಸ್ ಸಾಗಿಸುತ್ತಿದ್ದ ಖತರ್ನಾಕ್ ಮಹಿಳೆಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬ್ರೆಜಿಲ್ ನ ಸಾವೋ ಪಾಲೋದಿಂದ ಇಥಿಯೋಪಿಯಾದ ಅಡಿಸ್ ಬಾಬಾ ಗೆ ಈ ಮಹಿಳೆ ಪ್ರಯಾಣ ಬೆಳೆಸಿದ್ದಳು.

ಮುಂಬೈನ ವಿಮಾನ ನಿಲ್ದಾಣದಲ್ಲಿ ಡಿಆರ್ಐ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಮಹಿಳೆ ರಿಬೆರಾ ಅನೆಜ್ ಡೆಲಿಸಿಯಾ (56) ತನ್ನ ಗುಪ್ತಾಂಗದಲ್ಲಿ 312 ಗ್ರಾಂ ಡ್ರಗ್ಸ್ ಸಾಗಿಸುತ್ತಿದ್ದಳು. ಇದರ ಬೆಲೆ 1.55 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಮಹಿಳೆಯನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights