ಕೆಆರ್‌ಎಸ್‌ ಜಲಾಶಯ ಬಹುತೇಕ ಭರ್ತಿ; ಆದರೂ ರೈತರಿಗೆ ಇಲ್ಲ ನೀರು

ಬೆಂಗಳೂರು, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ಜೀವನಾಡಿ ಎಂದು ಪರಿಗಣಿಸಲ್ಪಟ್ಟಿರುವ ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯವು ಬಹುತೇಕ ಭರ್ತಿಯಾಗಿದೆ. ಕಳೆದ ಹಲವು ದಿನಗಳಿಂದ ಕೊಡಗು ಮತ್ತು ಮೈಸೂರು ಜಲಾನಯನ ಪ್ರದೇಶಗಳಲ್ಲಿ ಹೇರಳವಾಗಿರುವ ಅಕಾಲಿಕ ಮಳೆ ಸುರಿಯುತ್ತಿದ್ದ, ಕಾವೇರಿ ನದಿ ತುಂಬಿ ಹರಿಯುತ್ತಿದೆ. ಆದರೂ, ರೈತರಿಗೆ ಸಿಗುವ ಸಾಧ್ಯತೆ ಇಲ್ಲದಂತಾಗಿದೆ.

“ಹೆಚ್ಚುವರಿ” ನೀರನ್ನು ಕರ್ನಾಟಕವು ಬಳಸುವುದನ್ನು ನೆರೆಯ ತಮಿಳುನಾಡು ವಿರೋಧಿಸಿದೆ. ಹೀಗಾಗಿ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ರೈತರಿಗೆ ಎರಡನೇ ಭತ್ತದ ಬೆಳೆಗೆ ನೀರು ಸಿಗುವ ಸಾಧ್ಯತೆ ಇಲ್ಲದಂತಾಗಿದ್ದು, ಕೆಆರ್‌ಎಸ್‌ ತುಂಬಿದ್ದರೂ, ರೈತರಲ್ಲಿ ಹರ್ಷವಿಲ್ಲದಂತಾಗಿದೆ. ಬುಧವಾರದ ವೇಳೆಗೆ ಕೆಆರ್‌ಎಸ್‌ ನೀರಿನ ಮಟ್ಟ 124.16 ಅಡಿಗಳಿಗೆ ಏರಿಕೆಯಾಗಿದ್ದು, ಜಲಾಶಯದ ಗರಿಷ್ಠ ಸಾಮರ್ಥ್ಯ 124.80 ಅಡಿಗಳಷ್ಟಿದೆ.

ತಮಿಳುನಾಡಿನ ಆಕ್ಷೇಪಣೆಯಿಂದಾಗಿ ನಮ್ಮ ಕೈ ಕಟ್ಟಿ ಹೋಗಿದೆ ಎಂದು ಹೆಸರು ಹೇಳಲಿಚ್ಛಿಸದ ಕರ್ನಾಟಕದ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹವಿರುವಾಗ ಬೆಳೆಗಳಿಗೆ ನೀರು ನಿರಾಕರಿಸುವುದು ಕಷ್ಟವಾಗಬಹುದು. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಬೇಕು.ಎಂದು ಅವರು ಒಪ್ಪಿಕೊಂಡಿದ್ದಾರೆ.

2020-2021ರ ಕಾವೇರಿ ಜಲಾನಯನ ಪ್ರದೇಶದ ವಾರ್ಷಿಕ ನೀರಿನ ಲೆಕ್ಕವನ್ನು ಆಧರಿಸಿ, ಕಾವೇರಿ ನೀರು ನಿಯಂತ್ರಣ ಸಮಿತಿಯ ಮುಂದೆ ತಮಿಳುನಾಡು ಆಕ್ಷೇಪಣೆ ಸಲ್ಲಿಸಿತ್ತು. ಕರ್ನಾಟಕವು ಖಾರಿಫ್ ಋತುವಿನಲ್ಲಿ ವಿಶ್ವೇಶ್ವರಯ್ಯ ಕಾಲುವೆ ಮತ್ತು ಇತರ ಸಣ್ಣ ಕಾಲುವೆಗಳ ವ್ಯಾಪ್ತಿಯ ನೀರಾವರಿ ಪ್ರದೇಶಗಳಿಗೆ ಹಂಚಿಕೆಯಾದ 38.98 ಟಿಎಂಸಿಎಫ್‌ಟಿಗೆ ವಿರುದ್ಧವಾಗಿ 2.178 ಟಿಎಂಸಿ ಅಡಿ ಹೆಚ್ಚುವರಿ ನೀರನ್ನು ಬಳಸಿಕೊಂಡಿದೆ ಎಂದು ಆರೋಪಿಸಿತ್ತು.

ಇದನ್ನೂ ಓದಿ: Fact Check: ರಾಯಚೂರಿನ ಮಸೀದಿ ಕೆಡವಿದಾಗ ಪತ್ತೆಯಾಯ್ತಾ ಹಿಂದೂ ದೇವಾಲಯ?

ಕಬ್ಬು ಬೆಳೆಯುವ ವಿಸ್ತೀರ್ಣ ಹೆಚ್ಚಿರುವುದನ್ನು ಗಮನಿಸಿದೆ, ಇದರ ಪರಿಣಾಮವಾಗಿ 0.41 ಟಿಎಂಸಿ ಅಡಿ ಹೆಚ್ಚುವರಿ ನೀರು ಬಳಕೆಯಾಗಿದೆ. ಸಣ್ಣ ನೀರಾವರಿ ಯೋಜನೆಗಳಾದ ಕಣ್ವ, ಚಿಕ್ಕಹೊಳೆ, ಸುವರ್ಣಾವತಿ, ಯಗಚಿ, ಗುಂಡಾರ್, ವೋಟ್‌ಹೊಳೆ, ಮಂಚನಬೆಲೆ ಮತ್ತು ನಲ್ಲೂರು ಅಮಾನಿಕೆರೆ ಯೋಜನೆಗಳಲ್ಲಿ ನೀರಿನ ಬಳಕೆ ಶೂನ್ಯ ಎಂದು ಕರ್ನಾಟಕ ಹೇಳಿಕೊಂಡಿದೆ.

ನೀರೆತ್ತುವ ಯೋಜನೆಗಳನ್ನು ಉಲ್ಲೇಖಿಸಿರುವ ತಮಿಳುನಾಡು, ಕರ್ನಾಟಕವು 11.645 ಟಿಎಂಸಿ ಅಡಿ ನೀರನ್ನು ಬಳಸುವುದರೊಂದಿಗೆ 1,36, 279 ಎಕರೆಗಳನ್ನು ಆವರಿಸಿದೆ ಎಂದು ಹೇಳಿಕೊಂಡಿದೆ. ಅಲ್ಲದೆ, ಸಣ್ಣ ನೀರಾವರಿ ಯೋಜನೆಗಳ ಅಡಿಯಲ್ಲಿ, ಕರ್ನಾಟಕವು 3,30,000 ಎಕರೆಗಳಲ್ಲಿ ಕೃಷಿ ಮಾಡಲು ನೀರಿನ್ನು ಬಳಸಬೇಕು. ಆದರೆ, ಈ ಪ್ರದೇಶವು 46,933 ಎಕರೆಗಳಷ್ಟು ಹೆಚ್ಚಾಗಿದೆ. ಅಲ್ಲದೆ, ಕೆಆರ್‌ಎಸ್ ಜಲಾನಯನ ಪ್ರದೇಶದಲ್ಲಿ 62,000 ಎಕರೆ ಹೆಚ್ಚು ಕೃಷಿಗೆ ಒಳಪಟ್ಟಿದೆ. ಇದು ಖಾರಿಫ್ ಹಂಗಾಮಿನ ಬೆಳೆ ಪದ್ಧತಿಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತಮಿಳುನಾಡು ಪ್ರತಿಪಾದಿಸಿದೆ.

ಇನ್ನು, ಕುಡಿಯುವ ನೀರಿನ ಯೋಜನೆಗಳನ್ನು ಉಲ್ಲೇಖಿಸಿ, ಕರ್ನಾಟಕವು 6.716 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಲು ಅನುಮತಿ ನೀಡಿದ್ದರೂ, ಬೆಂಗಳೂರಿಗೆ 18.876 ಟಿಎಂಸಿ ಅಡಿ ನೀರು ಬಳಸಿಕೊಳ್ಳುತ್ತಿದೆ. ಏಕೆಂದರೆ ಮೂರನೇ ಎರಡರಷ್ಟು ಪ್ರದೇಶವು ಕಾವೇರಿ ಜಲಾನಯನ ಪ್ರದೇಶದ ಹೊರಗೆ ಇದೆ. 40,000 ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯಲು ರೈತರಿಗೆ ಅವಕಾಶವಿದ್ದರೂ, 2014 ರಿಂದ 2017 ರವರೆಗೆ ಅನಾವೃಷ್ಟಿ ಮತ್ತು ಅಲ್ಪ ಮಳೆಯಿಂದ ಹಾನಿಗೊಳಗಾದ ರೈತರು ಕಳೆದ ಕೆಲವು ವರ್ಷಗಳಿಂದ ಕಬ್ಬು ಬೆಳೆಯುವ ಪ್ರದೇಶವನ್ನು ಹೆಚ್ಚಿಸಿದ್ದಾರೆ.

ಆದರೆ, ಕರ್ನಾಟಕ ನೀರಾವರಿ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಅಲ್ಲಲ್ಲಿ ಕಬ್ಬು ಅರೆಯುತ್ತಿದ್ದು, ವಿಶ್ವೇಶ್ವರಯ್ಯ ಕಾಲುವೆ ಪ್ರದೇಶ ಹಾಗೂ ಹಿಂಗಾರು ಭಾಗದ ರೈತರೂ ಉತ್ತಮ ಇಳುವರಿ ನಿರೀಕ್ಷೆಯಲ್ಲಿ ಕಬ್ಬು ಬೆಳೆದಿದ್ದಾರೆ. ಸಣ್ಣ ಕಾಲುವೆಗಳ ವ್ಯಾಪ್ತಿಯ ರೈತರು ಭತ್ತದ ಬೆಳೆ ಮತ್ತು ಅರೆ ಒಣ ಬೆಳೆಗಳನ್ನು ಬೆಳೆಯುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕೊರೊನಾದಿಂದ 368 ಸಾರಿಗೆ ನೌಕರರು ಸಾವು; ಪರಿಹಾರ ಸಿಕ್ಕಿದ್ದು 11 ಮಂದಿಗೆ ಮಾತ್ರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights