ಬೆಂಗಳೂರಿನಲ್ಲಿ ಹೆಚ್ಚಿದ ಕೊರೊನಾ ಆತಂಕ : ಒಂದೇ ದಿನಕ್ಕೆ 11 ಜನರಿಗೆ ಸೋಂಕು

ಕರ್ನಾಟಕದಲ್ಲಿ ಕೊರೊನಾ ಕಡಿಮೆಯಾಗುವ ಲಕ್ಷಣವೇ ಕಾಣಸಿಗುತ್ತಿಲ್ಲ. ಇಂದು ಮತ್ತೆ ಹೊಸದಾಗಿ 18 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು ಆತಂಕ ಹೆಚ್ಚಿಸಿದೆ.ಈ ಮೂಲಕ ಸೋಂಕಿತರ ಸಂಖ್ಯೆ 463ಕ್ಕೆ ಏರಿಕೆಯಾಗಿದೆ. ನಿನ್ನೆ ದಕ್ಷಿಣ ಕನ್ನಡದ ಬಂಟ್ವಾಳದ 75 ವರ್ಷದ ವೃದ್ಧೆ ಕೊರೋನಾ ವೈರಸ್​ನಿಂದ ಸಾವನ್ನಪ್ಪಿದ್ದಾರೆ.

ನಿನ್ನೆ ಲಾಕ್ ಡೌನ್ ಸಡಿಲಿಕೆಯಾಗಿದೆ ಎಂದು ಭಾವಿಸಿ ಲಕ್ಷಾಂತರ ಜನ ಮನೆಬಿಟ್ಟು ಬೀದಿಗಿಳಿದಿದ್ದರು. ಮೇ 3ರವರೆಗೆ ಲಾಕ್ ಡೌನ್ ಜಾರಿಯಾಗಿದ್ದರೂ ನಿನ್ನೆ ಬಹುತೇಕ ಜನ ಬೀದಿಗಿಳಿದಿದ್ದರು. ಬೆಂಗಳೂರಿನಲ್ಲಿ ಏಕಾಏಕಿ ಬೀದಿಗಿಳಿದ ಜನರಿಂದಾಗಿ ಕೆಲ ಹೊತ್ತು ಟ್ರಾಫಿಕ್ ಜಾಮ್ ಕೂಡ ಆಗಿತ್ತು. ಪಾದರಾಯನಪುರದಲ್ಲಿ ಗಲಭೆ ಸೃಷ್ಟಿಸಿದ್ದವರ ಪೈಕಿ 5 ಆರೋಪಿಗಳಿಗೆ ಕೊರೊನಾ ಸೋಂಕು ತಗುಲಿದೆ.

ಬೆಂಗಳೂರಿನ ಕೊರೋನಾ ಹಾಟ್​ಸ್ಪಾಟ್​ ಆಗಿರುವ ಹೊಂಗಸಂದ್ರದಲ್ಲಿ 5 ಹೊಸ ಕೊರೋನಾ ಪಾಸಿಟಿವ್ ಕೇಸುಗಳು ಬೆಳಕಿಗೆ ಬಂದಿವೆ. ಒಂದೇ ದಿನದಲ್ಲಿ ಬೆಂಗಳೂರೊಂದರಲ್ಲೇ 11 ಕೊರೋನಾ ಕೇಸುಗಳು ದೃಢಪಟ್ಟಿವೆ.ನಿನ್ನೆ ಸಂಜೆಯಿಂದ ಇಂದು ಮಧ್ಯಾಹ್ನದವರೆಗೆ ಬೆಂಗಳೂರಿನಲ್ಲಿ 11, ತುಮಕೂರಿನಲ್ಲಿ 1, ಬೆಳಗಾವಿಯ ರಾಯಭಾಗದಲ್ಲಿ 2, ಚಿಕ್ಕಬಳ್ಳಾಪುರದಲ್ಲಿ 1, ಬಾಗಲಕೋಟೆಯ ಮುಧೋಳದಲ್ಲಿ 1, ಜಮಖಂಡಿಯಲ್ಲಿ 1, ವಿಜಯಪುರದಲ್ಲಿ 1 ಕೊರೋನಾ ಕೇಸುಗಳು ದೃಢಪಟ್ಟಿವೆ.

ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 463ಕ್ಕೆ ಏರಿಕೆಯಾಗಿದ್ದು, ಈಗಾಗಲೇ 150 ಜನ ಡಿಸ್ಚಾರ್ಜ್ ಆಗಿದ್ದಾರೆ. ನಿನ್ನೆ ದಕ್ಷಿಣ ಕನ್ನಡದ ಬಂಟ್ವಾಳದ 75 ವರ್ಷದ ವೃದ್ಧೆ ಸಾವನ್ನಪ್ಪುವ ಮೂಲಕ ಕರ್ನಾಟಕದಲ್ಲಿ ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ18ಕ್ಕೆ ಏರಿಕೆಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights