ಕೊರೊನಾ ಹೋರಾಟಕ್ಕೆ ಕೈ ಜೋಡಿಸಿದ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಪತ್ನಿ! : ನೆಟ್ಟಿಗರಿಂದ ಭಾರೀ ಮೆಚ್ಚುಗೆ

ದೇಶದೆಲ್ಲೆಡೆ ಕೊರೊನಾ ಅಟ್ಟಹಾಸ ಮುಂದುವೆದಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದ ಜನರಿಗೆ ಮಾಸ್ಕ್ ಅಗತ್ಯಕ್ಕೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ಇದರಿಂದ ಅದೆಷ್ಟೋ ಜನ ಮನೆಯಲ್ಲೇ ಮಾಸ್ಕ್ ತಯಾರಿಸುತ್ತಿದ್ದಾರೆ. ತಮಗೂ ತಯಾರಿಸಿ ಪರರಿಗೂ ಮಾಸ್ಕ್ ತಯಾರಿಸಿ ಕೊಡುತ್ತಿದ್ದಾರೆ. ಇದಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಪತ್ನಿ ಕೂಡ ಹೊರತಾಗಿಲ್ಲ.

ಹೌದು… ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಪತ್ನಿ ಸವಿತಾ ಕೋವಿಂದ್ ತಾವೇ ಮಾಸ್ಕ್ ತಯಾರಿಕೆ ಮಾಡಿದ್ದಾರೆ. ಈ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಸವಿತಾ ಅವರ ಕೆಲಸಕ್ಕೆ ವ್ಯಾಪಕವಾದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮನೆಯಲ್ಲಿಯೇ ಮಾಸ್ಕ್ ತಯಾರಿಸಿ ಮಾಸ್ಕ್ ತಯಾರಿಸಿ ಬಡಬಗ್ಗರಿಗೆ ನಿಡುತ್ತಿದ್ದಾರೆ. ಕೊರೊನಾರ ತಡೆಗೆ ಮಾಸ್ಕ್ ಅತ್ಯಗತ್ಯ. ಆದರೆ ಬಡವರ್ಗದ ಜನರಿಗೆ ಇದನ್ನ  ಖರೀದಿ ಮಾಡುವುದು ಕಷ್ಟ. ಹೀಗಾಗಿ ಬಡವರ ಸಂಕಷ್ಟ ಅರಿತ ಸವಿತಾ ಅವರು ಬಡವರ ನೆರವಿಗೆ ಬಂದಿದ್ದಾರೆ. ತಾವೇ ಮಾಸ್ಕ್ ತಯಾರು ಮಾಡಿ, ಅದನ್ನು ಬಡ ಜನರಿಗೆ ನೀಡುತ್ತಿದ್ದಾರೆ. ತಾವು ಮಾಸ್ಕ್‌ ಧರಿಸಿಯೇ ಹೊಲಿಗೆ ಯಂತ್ರದ ಮೇಲೆ ಕೂತು, ಮಾಸ್ಕ್ ಗಳ ತಯಾರಿಕೆಯಲ್ಲಿ ಸವಿತಾ ನಿರತರಾಗಿದ್ದಾರೆ. ದೆಹಲಿಯ ಶಕ್ತಿ ಹಾತ್ ನಲ್ಲಿರುವ ರಾಷ್ಟ್ರಪತಿಗಳ ಎಸ್ಟೇಟ್‌ನ ತಮ್ಮ ಮನೆಯಲ್ಲಿ ಅವರು ಮಾಸ್ಕ್ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.

ಇಂಹತದೊಂದು ಫೋಟೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ಸವಿತಾ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲಾಕ್‌ಡೌನ್ ನಡುವೆ ಮನೆಯಿಂದ ಹೊರ ಹೋಗುವ ಆಗಿಲ್ಲ. ಬೇರೆ ಕೆಲಸಗಳಲ್ಲಿ ಮಾಡುವಂತಿಲ್ಲ. ಇಂತಹ ಸಮಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಿರುವ ಅವರು ಕೊರೊನಾ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights