ರಾಜಸ್ಥಾನ ಚುನಾವಣೆ: ಕಾಂಗ್ರೆಸ್‌ಗೆ ಭಾರೀ ಪೈಪೋಟಿ ಕೊಟ್ಟ BJP; ಗೆದ್ದು ಬೀಗಿದ ಕಾಂಗ್ರೆಸ್‌!

ಕಳೆದ ವಾರ ನಡೆದ ರಾಜಸ್ಥಾನ ಸ್ಥಳೀಯ ಸಂಸ್ಥೆಗಳ (ನಗರಸಭೆ) ಚುನಾವಣೆಯಲ್ಲಿ ಒಟ್ಟು 3,035 ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷವು 1,197 ವಾರ್ಡ್‌ಗಳನ್ನು ಗೆದ್ದಿದ್ದು, ಬಿಜೆಪಿ 1,140 ವಾರ್ಡ್‌ಗಳನ್ನು ಗೆದ್ದಿದೆ. ಅಲ್ಲದೆ, ಸ್ವತಂತ್ರ ಅಭ್ಯರ್ಥಿಗಳು 634 ಸ್ಥಾನಗಳನ್ನು ಗಳಿಸಿದ್ದಾರೆ.

ಬಿಎಸ್‌ಪಿಯು ಒಂದು ಸ್ಥಾನವನ್ನು ಗೆದ್ದಿದ್ದರೆ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಮೂರು, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ 46 ಮತ್ತು ರಾಷ್ಟ್ರೀಯ ಲೋಕ್ತಂತ್ರಿಕ್ ಪಕ್ಷ 13 ಸ್ಥಾನಗಳನ್ನು ಪಡೆದುಕೊಂಡಿದೆ.

ಜನವರಿ 28 ರಂದು ರಾಜ್ಯದ 20 ಜಿಲ್ಲೆಗಳಲ್ಲಿ 90 ಮುನ್ಸಿಪಲ್‌ಗಳಿಗೆ ಚುನಾವಣೆ ನಡೆದಿತ್ತು.

90 ಪುರಸಭೆಗಳ 3,035 ವಾರ್ಡ್‌ಗಳಿಗೆ 5,253 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಎಲ್ಲಾ ಮತಗಟ್ಟಗಲ್ಲಿ ಒಟ್ಟು 30,28,544 ಮತದಾರರಿದ್ದು, ಈ ಪೈಕಿ 15,47,974 ಪುರುಷರು, 14,80,514 ಮಹಿಳೆಯರು ಮತ್ತು 56 ಇತರ ಮತದಾರರಿದ್ದು ಭಾಗಶಃ ಮತದಾರರು ಮತಚಲಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಪ್ರಧಾನಿ ಘನತೆಯನ್ನು ಗೌರವಿಸುತ್ತೇವೆ; ನಮ್ಮ ಆತ್ಮಗೌರವಕ್ಕಾಗಿ ಹೋರಾಡುತ್ತಿದ್ದೇವೆ: ರೈತ ಮುಖಂಡ ನರೇಶ್ ಟಿಕಾಯತ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights