IPL 2020: ಬಿಡುಗಡೆಯಾಗದ ವೇಳಾಪಟ್ಟಿ; ಕ್ರಿಕೆಟ್‌ ಪ್ರೇಮಿಗಳಿಂದ ಐಪಿಎಲ್‌ ಟ್ರೋಲ್‌!

ಕೊರೊನಾ ಕಾರಣದಿಂದಾಗಿ ನಡೆಯುವುದೇ ಇಲ್ಲವೆಂದು ಭಾವಿಸಿದ್ದ ಐಪಿಎಲ್‌ ಕ್ರಿಕೆಟ್‌ ಟೂರ್ನಿಯನ್ನು ಏಷ್ಯನ್‌ ಕಪ್‌ ರದ್ದಾದ ಕಾರಣ ಮತ್ತೆ ನಡೆಸಲು ನಿರ್ಧರಿಸಲಾಗಿದೆ. ಈ ಬಾರಿಯ IPL‌ ಕ್ರಿಕೆಟ್‌ ಟೂರ್ನಿಯು ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇಯಲ್ಲಿ ಟೂರ್ನಿ ನಿಗದಿಯಾಗಿದ್ದು, ಟೂರ್ನಿಗೆ ಇನ್ನು 2 ವಾರಗಳಷ್ಟೇ ಬಾರಿ ಉಳಿದಿವೆ. ಹೀಗಾಗಿ ಶುಕ್ರವಾರ ವೇಳಾಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಗುರುವಾರ ತಿಳಿಸಿದ್ದರು. ಆದರೆ, ಇದೂವರೆಗೂ ವೇಳಾಪಟ್ಟಿ ಬಿಡುಗಡೆಯಾಗಿಲ್ಲ.

ಶುಕ್ರವಾರ ವೇಳಪಟ್ಟಿ ಬಿಡುಗಡೆಯಾಗುತ್ತದೆ ಎಂದು ಕಾದು ಕುಳಿತಿದ್ದ ಕ್ರಿಕೆಟ್‌ ಪ್ರೇಮಿಗಳಿಗೆ ನಿರಾಸೆಯಾಗಿದ್ದು, ಬಿಬಿಸಿಐ ವಿರುದ್ಧ ನೆಟ್ಟಿಗರು ವಿವಿಧ ಮಿಮ್ಸ್‌ಗಳನ್ನು ಮಾಡಿ ಟ್ರೋಲ್‌ ಮಾಡಿದ್ದಾರೆ.

ಐಪಿಎಲ್ ವೇಳಾಪಟ್ಟಿ ಈಗ ಬಿಡುಗಡೆಯಾಗಲಿದೆ ಎಂದು ಶುಕ್ರವಾರವಿಡೀ ಕಾದ ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣ, ಅಂತರ್ಜಾಲಗಳಲ್ಲಿ ಪದೇ ಪದೇ ಹುಡುಕಾಡಿದರೂ, ವೇಳಾಪಟ್ಟಿ ಸಿಗದೆ ನಿರಾಸೆಗೆ ಒಳಗಾಗಿದ್ದಾರೆ.

ವೇಳಾಪಟ್ಟಿ ಬಿಡುಗಡೆ ಮಾಡದ ಬಿಬಿಸಿಐ ಮೇಲೆ ಸಿಟ್ಟಾದ ನೆಟ್ಟಿಗರು, ಮಿಸ್ಟರ್ ಬೀನ್ ಮತ್ತು ಸಲ್ಮಾನ್ ಖಾನ್ ಸಿನಿಮಾದ ದೃಶ್ಯಗಳು ಹಾಗೂ ಹಲವು ಕ್ರಿಕೆಟ್‌ ಫೋಟೋಗಳನ್ನೂ ಒಳಗೊಂಡತೆ ವಿವಿಧ ಚಿತಗ್ರಗಳನ್ನು ಬಳಸಿ ಟ್ರೋಲ್‌ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಟೂರ್ನಿಯನ್ನು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್‌ಕಿಂಗ್ಸ್ ತಂಡಗಳ ನಡುವೆಯೇ ಉದ್ಘಾಟನಾ ಪಂದ್ಯ ನಡೆಯುವ ನಿರೀಕ್ಷೆ ಇದೆ. ಆದರೆ, ಸಿಎಸ್‌ಕೆ ತಂಡದ 13 ಸದಸ್ಯರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಸಿಎಸ್‌ಕೆ ಬದಲಿಗೆ ಆರ್‌ಸಿಬಿ ತಂಡ ಕಣಕ್ಕಿಳಿಯಲಿದೆ ಎಂದು ಮಾತೂ ಕೇಳಿಬರುತ್ತಿವೆ. ಭಾನುವಾರ ವೇಳಪಟ್ಟಿ ಪ್ರಕಟಿಸುವುದಾಗಿ ಬ್ರಿಜೇಶ್‌ ಪಟೇಲ್‌ ಹೇಳಿದ್ದಾರೆ.

 

 

53 ದಿನಗಳ ಟೂರ್ನಿಯಲ್ಲಿ 60 ಪಂದ್ಯಗಳು ಅರಬ್‌ ರಾಷ್ಟ್ರಗಳ (ಯುಎಇ) ಶಾರ್ಜಾ, ಅಬುಧಾಬಿ ಮತ್ತು ದುಬೈನಲ್ಲಿ ನಡೆಯಲಿವೆ.


ಇದನ್ನೂ ಓದಿ: ಯುಎಸ್ ಓಪನ್‌ನ 2ನೇ ಸುತ್ತು ತಲುಪಿದ ರೋಹನ್ ಬೋಪಣ್ಣ-ಶಪೋವೊಲೊವ್ ಜೋಡಿ..

Spread the love

Leave a Reply

Your email address will not be published. Required fields are marked *