ಅಪರಾಧದ ಸಮಯದಲ್ಲಿ ಸಾಕ್ಷಿದಾರನು ಆರೋಪಿಯನ್ನು ಮೊದಲ ಬಾರಿ ನೋಡಿದ್ದರೆ ಅದು ದುರ್ಬಲ ಸಾಕ್ಷ್ಯ: ಸುಪ್ರೀಂ ಕೋರ್ಟ್‌

ಅಪರಾಧ ನಡೆಯುವ ಸಮಯದಲ್ಲಿ ಸಾಕ್ಷಿದಾರನು ಆರೋಪಿಯನ್ನು ಮೊದಲ ಬಾರಿ ನೋಡಿದ್ದರೆ, ವಿಶೇಷವಾಗಿ ಘಟನೆ ನಡೆದ ದಿನಾಂಕ ಮತ್ತು ಸಾಕ್ಷಿದಾರನ ಹೇಳಿಕೆ ದಾಖಲಿಸಿದ ದಿನಾಂಕಗಳ ನಡುವೆ ಹೆಚ್ಚಿನ ಅಂತರವಿದ್ದರೆ ಅದು ದುರ್ಬಲ ಸಾಕ್ಷಿಯಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಸ್ಪಿರಿಟ್ ಕಳ್ಳಸಾಗಣೆಯ ಅಪರಾಧಕ್ಕಾಗಿ ಕೇರಳ ಅಬಕಾರಿ ಕಾಯ್ದೆಯ 55(ಎ) ವಿಧಿ ಅಡಿಯಲ್ಲಿ ಅಪರಾಧಿಗಳೆಂದು ಘೋಷಿಸಲ್ಪಟ್ಟಿದ್ದ ನಾಲ್ವರು ಆರೋಪಿಗಳು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ನ್ಯಾಯಮೂರ್ತಿ ಅಜಯ ರಸ್ತೋಗಿ ಮತ್ತು ಅಭಯ ಎಸ್.ಓಕಾ ಅವರ ನ್ಯಾಯಪೀಠ, ಗುರುತು ಪತ್ತೆ ಪರೇಡ್ ಸಾಕ್ಷಿದಾರನು ಆರೋಪಿಗಳನ್ನು ಗುರುತಿಸುವಂತೆ ವರ್ತಿಸಬಹುದು. ಗುರುತು ಪತ್ತೆ ಪರೇಡ್ ತನಿಖೆಯ ಒಂದು ಭಾಗವಾಗಿದೆ ಮತ್ತು ಅದು ವಸ್ತುನಿಷ್ಠ ಸಾಕ್ಷವಲ್ಲ ಎಂದು ಶುಕ್ರವಾರ ಹೇಳಿದೆ.

ಇದನ್ನೂ ಓದಿ: 2.87 ಲಕ್ಷ ಪಿಎಸ್‌ಯು ಸಿಬ್ಬಂದಿಗಳಿಗೆ 216.38 ಕೋಟಿ ಬೋನಸ್: ತಮಿಳುನಾಡು ಸಿಎಂ ಘೋಷಣೆ!

ಪ್ರಕರಣದ ಆರೋಪಿಗಳಾಗಿದ್ದ “ನಾಲ್ವರು ನಕಲಿ ನೋಂದಣಿ ಸಂಖ್ಯೆಯನ್ನು ಹೊಂದಿದ್ದ ಲಾರಿಯಲ್ಲಿ ಯಾವುದೇ ಪರವಾನಿಗೆಯಿಲ್ಲದೆ 174 ಪ್ಲಾಸ್ಟಿಕ್ ಕ್ಯಾನ್‌ಗಳಲ್ಲಿ 6,090 ಲೀ. ಸ್ಪಿರಿಟ್ ಸಾಗಿಸುತ್ತಿದ್ದರು ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು.

ಪ್ರಕರಣದ ಸಾಕ್ಷಿದಾರ ತಾನು 11 ವರ್ಷಗಳ ಹಿಂದೆ ನೋಡಿದ ಯಾವುದೇ ವ್ಯಕ್ತಿಗಳನ್ನು ಗುರುತಿಸಲು ತನಗೆ ಸಾಧ್ಯವಿಲ್ಲ ಎಂದು ಹೇಳಿದ್ದಲ್ಲದೆ, ಘಟನೆ ನಡೆದಿದ್ದ ಸಂದರ್ಭದಲ್ಲಿ ತಾನು ಮೊದಲ ಬಾರಿಗೆ ನೋಡಿದ್ದ ಇಬ್ಬರು ಆರೋಪಿಗಳನ್ನು ಆತ ಗುರುತಿಸಿದ್ದ. ಈ ಹಿನ್ನೆಲೆಯಲ್ಲಿ ಆತನ ಸಾಕ್ಷಿ ಹೇಳಿಕೆಯನ್ನು ನ್ಯಾಯಾಲಯವು ತಿರಸ್ಕರಿಸಿದೆ.

ಪ್ರಕರಣದ ವಾಸ್ತವಾಂಶಗಳನ್ನು ಪರಿಗಣಿಸಿ ಅದನ್ನು ನ್ಯಾಯಾಲಯವು ಒಪ್ಪಿಕೊಳ್ಳುವುದಿಲ್ಲ. ಘಟನೆಗೆ ಮೊದಲು ತಾನು ಆರೋಪಿಗಳನ್ನು ನೋಡಿಯೇ ಇರದಿದ್ದಾಗ, ಆರೋಪಿಗಳನ್ನು ಸಾಕ್ಷಿದಾರನು 11 ವರ್ಷಗಳ ನಂತರ ಗುರುತಿಸುತ್ತಾನೆ ಎನ್ನುವುದನ್ನು ನಂಬುವುದು ತುಂಬ ಕಷ್ಟ. ಎಲ್ಲಾ ಅಧಿಕೃತ ಸಾಕ್ಷಿಗಳ ವಿಷಯದಲ್ಲಿಯೂ ಇದು ನಡೆಯುತ್ತಿರುತ್ತದೆ. ಲಾರಿಯ ನಿಜವಾದ ನೋಂದಣಿ ಸಂಖ್ಯೆ ಮತ್ತು ಅದರ ಮಾಲಿಕನ ಬಗ್ಗೆ ಸಾಕ್ಷಗಳನ್ನು ಸಲ್ಲಿಸುವುದಕ್ಕೆ ಪ್ರಾಷಿಕ್ಯೂಷನ್ ಆದ್ಯತೆ ನೀಡಿಲ್ಲ. ಹೀಗಾಗಿ ಇಡೀ ಪ್ರಾಸಿಕ್ಯೂಷನ್ ಪ್ರಕರಣವು ಅನುಮಾನಾಸ್ಪದವಾಗಿದೆ ಎಂದು ಕೋರ್ಟ್‌ ಹೇಳಿದ್ದು, ಆರೋಪಿಗಳನ್ನು ಬಿಡುಗಡೆಗೊಳಿಸಿದೆ.

ಇದನ್ನೂ ಓದಿ: ಬಿಹಾರ: ಕನ್ಹಯ್ಯಾ, ಜಿಗ್ನೇಶ್, ಹಾರ್ದಿಕ್ ಮೇಲೆ ಕಾಂಗ್ರೆಸ್‌ಗೆ ಬಲವಾದ ನಂಬಿಕೆ; ಆರ್‌ಜೆಡಿ ಜೊತೆ ಮೈತ್ರಿ ಕಟ್!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights