ಅಯೋಧ್ಯೆಯಲ್ಲಿ ಬಾಬರಿ ಮಸೀದಿಯಂತದ್ದೇ ಮಸೀದಿಯ ಜೊತೆಗೆ ಆಸ್ಪತ್ರೆಯೂ ನಿರ್ಮಾಣ; ಟ್ರಸ್ಟ್‌

ರಾಮಮಂದಿರ ಮತ್ತು ಬಾಬರಿ ಮಸೀದಿಗಳ ವಿವಾದಿತ ಸ್ಥಳವಾಗಿದ್ದ ಅಯೋಧ್ಯೆಯ ವಿಚಾರದಲ್ಲಿ ಸುಪ್ರೀಂಕೋರ್ಟ್‌ ತೀರ್ಪು ನೀಡದ ನಂತರ, ಬಾಬರಿ ಮಸೀದಿ ಇದ್ದ ಸ್ಥಳದಲ್ಲಿ ರಾಮಮಂದಿರಕ್ಕೆ ಭೂಮಿಪೂಜೆ ನಡೆದ ಬೆನ್ನಲ್ಲೇ, ಸುಪ್ರೀಂ ಕೋರ್ಟ್‌ ತೀರ್ಪಿನಂತೆ ಮಸೀದಿ ನಿರ್ಮಾಣಕ್ಕಾಗಿ ಅಯೋಧ್ಯೆಯ ಧನ್ನಿಪುರ ಗ್ರಾಮದಲ್ಲಿ ನೀಡಲಾಗಿರುವ ಐದು ಎಕರೆ ಜಾಗದಲ್ಲಿ ಬಾಬರಿ ಮಸೀದಿಯಷ್ಟೇ ಗಾತ್ರದ ಮಸೀದಿ ನಿರ್ಮಾಣ ಮಾಡಲು ನಿರ್ಧರಿಸಿರುವುದಾಗಿ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಕಾರ್ಯದರ್ಶಿ ಅಥರ್ ಹುಸೇನ್ ತಿಳಿಸಿದ್ದಾರೆ.

ಮಸೀದಿ ನಿರ್ಮಾಣಕ್ಕಾಗಿ ನೀಡಲಾಗಿರುವ ಧನ್ನಿಪುರದ 5 ಎಕರೆ ಜಾಗದಲ್ಲಿ 15,000 ಚದರ ಅಡಿ ವಿಸ್ತೀರ್ಣದ ಮಸೀದಿ ನಿರ್ಮಾಣ ಮಾಡಲಾಗುವುದು. ಮಸೀದಿಯ ಜೊತೆಗೆ ಆಸ್ಪತ್ರೆ ಹಾಗೂ ಇಂಡೋ-ಇಸ್ಲಾಮಿಕ್ ಸಂಶೋಧನಾ ಕೇಂದ್ರದ ವಸ್ತುಸಂಗ್ರಹಾಲಯ ನಿರ್ಮಾಣ ಮತ್ತು ಹಲವು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದ್ದಾರೆ.

Invite all 32 accused in Babri mosque demolition case to Ram temple 'bhumi  pujan': Hindutva outfit - OrissaPOST

ಉತ್ತರ ಪ್ರದೇಶ ಸುನ್ನಿ ಕೇಂದ್ರ ವಕ್ಫ್ ಮಂಡಳಿಯು ಮಸೀದಿ ನಿರ್ಮಾಣಕ್ಕಾಗಿ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಎಂಬ ಟ್ರಸ್ಟ್‍ನ್ನು ರಚಿಸಲಾಗಿದ್ದು, ಟ್ರಸ್ಟ್‌ನ ಕಾರ್ಯದರ್ಶಿಯಾಗಿ ಅಖ್ತರ್ ಅವರನ್ನು ನೇಮಿಸಲಾಗಿದೆ.

ಮಸೀದಿಯ ಜೊತೆಗೆ ವಸ್ತುಸಂಗ್ರಹಾಲಯವನ್ನು ನಿರ್ವಹಿಸಲು ಒಪ್ಪಿಗೆ ನೀಡಿದ್ದು, ಅಖ್ತರ್ ಅವರು ಯೋಜನೆಯ ಸಲಹೆಗಾರರಾಗಿರುತ್ತಾರೆ ಎಂದು ಹೇಳಲಾಗಿದೆ.

ಮಸೀದಿ ನಿರ್ಮಾಣವಾಗುವ ಇಡೀ ಸಂಕೀರ್ಣವು ಭಾರತದ ನೀತಿ ಮತ್ತು ಇಸ್ಲಾಂ ಧರ್ಮದ ಮನೋಭಾವವನ್ನು ಒಟ್ಟುಗೂಡಿಸುತ್ತದೆ ಎಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾದ ವಾಸ್ತುಶಿಲ್ಪ ವಿಭಾಗದ ಮುಖ್ಯಸ್ಥ ಅಖ್ತರ್ ಅವರು ಹೇಳಿದ್ದರು.

2002ರಲ್ಲಿ ಸಂಘ ಪರಿವಾರದ ಬಲಪಂಥೀಯರು ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿಯನ್ನು ದ್ವಂಸ ಗೊಳಿಸಿದ ನಂತರ, ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿತ್ತು. ಕಳೆದ ನವೆಂಬರ್ 09 ರಂದು ಬಾಬರಿ ಮಸೀದಿ ಇದ್ದ ಜಾಗ ರಾಮಲಲ್ಲಾಗೆ ಸೇರಿದ್ದಾಗಿದ್ದು, ಆ ಜಾಗದಲ್ಲಿ ರಾಮಮಂದಿರ ಕಟ್ಟಬೇಕು. ಮಸೀದಿಗಾಗಿ ಅಯೋಧ್ಯೆಯಲ್ಲಿಯೇ 05 ಎಕರೆ ಜಾಗ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ತೀರ್ಪಿನಂತೆ ಸುನ್ನಿ ವರ್ಕ್ಪ ಬೋರ್ಡ್‌ ಮಂಡಳಿಯು ಮಸೀದಿ ನಿರ್ಮಾಣಕ್ಕೆ ಮುಂದಾಗಿದೆ.


ಇದನ್ನೂ ಓದಿ: ಬಿಹಾರ ಚುನಾವಣೆ – ಬಿಜೆಪಿಯಲ್ಲಿ ರವಿಶಂಕರ್ ಪ್ರಸಾದ್ ಮತ್ತು ನಿತ್ಯಾನಂದ ರೈ ಅವರಿಗೆ ಅಧಿಕಾರ

Spread the love

Leave a Reply

Your email address will not be published. Required fields are marked *