ಪ್ರಧಾನ ಮಂತ್ರಿ ಕಚೇರಿಯ ಜವಾನರೊಂದಿಗೆ ಪಿಎಂ ಮೋದಿ ಫೋಟೋ… ಇದು ನಿಜವೇ?

ಇತ್ತೀಚೆಗೆ ಪ್ರಧಾನಿ ಮೋದಿ ಪುರುಷರ ಗುಂಪಿನೊಂದಿಗೆ ಮೆಟ್ಟಿಲುಗಳ ಮೇಲೆ ಕುಳಿತಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಫೋಟೋ ವಿಶ್ವ ನಾಯಕರಾಗಿರುವ ಪ್ರಧಾನಿ ತಮ್ಮ ಕಚೇರಿ ಸಿಬ್ಬಂದಿಯೊಂದಿಗೆ ಕುಳಿತಿದ್ದಾರೆ ಎಂದು ಹೇಳುತ್ತದೆ. ಮೋದಿಯೊಂದಿಗೆ ಕುಳಿತವರಲ್ಲಿ ಕೆಲವರು ಪಿವೋನ್ಗಳು ಇದ್ದಾರೆ. ಪೋಸ್ಟ್ ಚಿತ್ರವನ್ನು ಸಮಾನತೆ ಮತ್ತು ಒಡನಾಟದ ಸಂಕೇತವೆಂದು ವಿವರಿಸುತ್ತದೆ. ಇಲ್ಲಿ ಯಾವುದೇ ಅಸಮಾನತೆಯಿಲ್ಲ. ನಮ್ಮೊಂದಿಗೆ ಕುಳಿತುಕೊಳ್ಳಿ ನಾವು ಒಟ್ಟಾಗಿ ಕೆಲಸ ಮಾಡೋಣ ಎಂಬ ಸಂಕೇತವನ್ನು ಇದು ಕೊಡುತ್ತದೆ ಎಂದು ವೈರಲ್ ಫೋಟೋ ಹೇಳುತ್ತದೆ.

ಆದರೆ ಈ ಫೋಟೋದಲ್ಲಿ ಕಾಣುವ ಪುರುಷರು ಬಿಜೆಪಿಯ ಗುಜರಾತ್ ಕಚೇರಿಯ ಸಿಬ್ಬಂದಿಗಳಾಗಿದ್ದಾರೆಂಬುವುದು ತನಿಖೆಯಿಂದ ತಿಳಿದು ಬಂದಿದೆ. ಈ ಫೋಟೋವನ್ನು ಫೆಬ್ರವರಿ 2014 ರಲ್ಲಿ ತೆಗೆದುಕೊಳ್ಳಲಾಗಿದೆ. 2014 ರಲ್ಲಿ ಗುಜರಾತ್‌ನ ಬಿಜೆಪಿಯ ಕಚೇರಿಯಲ್ಲಿ ಅದೇ ಫೋಟೋವನ್ನು ಹಂಚಿಕೊಳ್ಳಲಾಗಿದೆ.

ಫೆಬ್ರವರಿ 10, 2014 ರಂದು ಅಪ್‌ಲೋಡ್ ಮಾಡಲಾದ ಫೇಸ್‌ಬುಕ್‌ನಲ್ಲಿ ಅಂತಹ ಒಂದು ಪೋಸ್ಟ್ ಶೀರ್ಷಿಕೆಯಲ್ಲಿ, “ನಜೇಂದ್ರಜಿ ಮೋದಿ ಅವರು ಬಿಜೆಪಿ ಗುಜರಾತ್ ಕಚೇರಿ ಸಿಬ್ಬಂದಿಗಳೊಂದಿಗೆ. ಇದು ಕಚೇರಿ ಸಿಬ್ಬಂದಿಗೆ ಹೆಮ್ಮೆಯ ಕ್ಷಣ (sic)” ಎಂದು ಬರೆಯಲಾಗಿದೆ.

ಇದೇ ಚಿತ್ರವನ್ನು ಫೆಬ್ರವರಿ 10, 2014 ರಂದು ಮಜುರಾ (ಸೂರತ್) ಶಾಸಕ ಹರ್ಷ್ ಸಂಘವಿಯ ಪರಿಶೀಲಿಸಿದ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ. “ಬಿಜೆಪಿ ಗುಜರಾತ್ ಕಚೇರಿ ಸಿಬ್ಬಂದಿಯೊಂದಿಗೆ ಮೆಟ್ಟಿಲುಗಳ ಮೇಲೆ ಕುಳಿತ ನಾಯಕ ” ಎಂದು ಟ್ವೀಟ್ನಲ್ಲಿ ಬರೆಯಲಾಗಿದೆ.

ಹೀಗಾಗಿ ಮೋದಿ ಭಾರತದ ಪ್ರಧಾನಿಯಾಗುವ ಮೊದಲು ವೈರಲ್ ಚಿತ್ರವನ್ನು ತೆಗೆದುಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿದೆ ಮತ್ತು ಮೋದಿಯವರೊಂದಿಗೆ ಪುರುಷರು ಗಾಂಧಿನಗರದ ಬಿಜೆಪಿಯ ಗುಜರಾತ್ ರಾಜ್ಯ ಕಚೇರಿಯ ಸಿಬ್ಬಂದಿಗಳಾಗಿದ್ದಾರೆ. ಜೊತೆಗೆ ಈ ಫೋಟೋ ಪ್ರಧಾನ ಮಂತ್ರಿಯ ಕಚೇರಿಯಲ್ಲಿಯಾಗಲಿ ಅಥವಾ ಪಿವೋನ್ ಜೊತೆಗಾಗಲಿ ತೆಗೆದಿರುವ ಫೋಟೋ ಅಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights