ಹುಲಿಯ ನಂತರ ಬೆಕ್ಕುಗಳಿಗೂ ಕೋವಿಡ್-19 : ದೊಡ್ಡಣ್ಣನಿಗೆ ಸವಾಲಾದ ಮುಖಪ್ರಾಣಿಗಳ ರಕ್ಷಣೆ!

ಅಮೆರಿಕಾದಲ್ಲಿ ಮನುಷ್ಯರಿಗೆ ಮಾತ್ರವಲ್ಲದೇ ಪ್ರಾಣಿಗಳಿಗೂ ಕೊರೊನಾ ವೈರಸ್ ಹರಡುತ್ತಿರುವುದು ಆತಂಕವನ್ನು ಹೆಚ್ಚಿಸಿದ್ದು, ಹುಲಿ ಸರದಿ ಮುಗಿಸಿದ ಕೊರೊನಾ ಸದ್ಯ ಬೆಕ್ಕುಗಳ ಮೇಲೆ ತನ್ನ ಪ್ರಯೋಗ ನಡೆಸಿದೆ.

ಹೌದು… ಜಗತ್ತಿನಲ್ಲಿ ವೇಗವಾಗಿ ಕೊರೊನಾ ಸೋಂಕು ಹರಡುತ್ತಿರುವ ದೇಶ ಅಂದರೆ ಅದು ಅಮೆರಿಕಾ. ವಿಶ್ವದ ದೊಡ್ಡ ಅಮೆರಿಕಾಗೆ ಕೋವಿಡ್-19 ಹುಟ್ಟೂರು ಡ್ರ್ಯಾಗನ್ ರಾಷ್ಟ್ರ ಚೀನಾಗಿಂತಲೂ ಹೆಚ್ಚಿನ ಪೆಟ್ಟು ಬಿದ್ದಿದೆ. ಹೀಗಿರುವಾಗ ಮೂಖ ಪ್ರಾಣಿಗಳನ್ನೂ ಕೊರೊನಾ ಕಾಡಲು ಶುರು ಮಾಡಿದೆ. ಇತ್ತೀಚೆಗಷ್ಟೇ ವನ್ಯಮೃಗ ಹುಲಿಗೆ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಸಾಕು ಪ್ರಾಣಿ ಬೆಕ್ಕುಗಳಲ್ಲೂ ವೈರಸ್​ ಪತ್ತೆಯಾಗಿದೆ.

ಅಮೆರಿಕದ ನ್ಯೂಯಾರ್ಕ್‌ ನಗರದಲ್ಲಿ ಎರಡು ಸಾಕು ಬೆಕ್ಕುಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಜಗತ್ತಿನಲ್ಲೇ ಅತೀ ಹೆಚ್ಚು ಸೋಂಕು ಪ್ರಕರಣಗಳಿಂದ ಬಳಲುತ್ತಿರುವ ಅಮೆರಿಕಾದಲ್ಲಿ ಇದೇ ಮೊದಲ ಬಾರಿಗೆ ಸಾಕು ಪ್ರಾಣಿಗಳಲ್ಲಿ ಕೊರೊನಾ ಕಾಣಿಸಿಕೊಂಡಿದೆ ಎಂದು ಯುಎಸ್ ಕೃಷಿ ಇಲಾಖೆ ಹಾಗೂ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ತಿಳಿಸಿದೆ.

ಸೋಂಕು ಹರಡಿದ ಬೆಕ್ಕುಗಳು ಮನುಷ್ಯರಂತೇ ಉಸಿರಾಟದ ತೊಂದರೆ ಅನುಭವಿಸುತ್ತಿವೆ ಎನ್ನಲಾಗುತ್ತಿದೆ. ಸೋಂಕಿತರ ಸಂಪರ್ಕದಿಂದಾಗಿ ಬೆಕ್ಕುಗಳಿಗೂ ಸೋಂಕು ತಗುಲಿರಬಹುದು ಎಂದು ತಜ್ಞರು ಶಂಕಿಸಿದ್ದಾರೆ. ಅಂದ್ಹಾಗೆ, ಈ ಬೆಕ್ಕುಗಳು ಹುಲಿ ಮತ್ತು ಸಿಂಹದ ಪಂಗಡಕ್ಕೆ ಸೇರಿದ್ದಾಗಿವೆ.  ಎರಡು ಬೆಕ್ಕಿಗಳಿಗೂ ಸೋಂಕು ಪತ್ತೆಯಾದ ಬಳಿಕ ಮನೆಯಲ್ಲಿದ್ದವರಿಗೆ ಪರೀಕ್ಷೆ ಮಾಡಲಾಯಿತು. ಆದರೆ, ಅವರಲ್ಲಿ ಸೋಂಕು ಪತ್ತೆಯಾಗಿಲ್ಲ. ಸದ್ಯ ಬೆಕ್ಕಿಗಳ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದಷ್ಟೂ ಬೇಗ ಚೇತರಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗ್ತಿದೆ.

ಕೆಲ ದಿನಗಳ ಹಿಂದಷ್ಟೇ ನ್ಯೂಯಾರ್ಕ್‌ ನಗರದ ಮೃಗಾಲಯದಲ್ಲಿ 4 ವರ್ಷದ ಹುಲಿಗೆ ಕೊರೊನಾ ಸೋಂಕು ತಗುಲಿತ್ತು. ಆನಂತರ ಹಲವು ದೇಶಗಳು ಮೃಗಾಲಯಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದ್ದವು. ಇದೀಗ ಸಾಕು ಪ್ರಾಣಿ ಬೆಕ್ಕುಗಳಿಗೆ ಸೋಂಕು ತಗುಲಿರೋದು ಮತ್ತಷ್ಟು ಆತಂಕವನ್ನ ಹೆಚ್ಚಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights