ಗಂಡ ಹೆಂಡತಿ ನಡುವಿನ ಮುನಿಸಿಗೆ ಕಾರಣಗಳೇನು…? : ಸುಖ ಸಂಸಾರದ ಸೂತ್ರಗಳು ಇಲ್ಲಿವೆ…

ಒಂದು ಸಂಸಾರ ಸುಖಕರವಾಗಿ ಇರಬೇಕಾದರೆ, ಏನ್ ಮಾಡಬೇಕು..? ಯಾವೆಲ್ಲಾ ವಿಚಾರಗಳನ್ನು ದಂಪತಿಗಳಿಬ್ಬರು ತಿಳಿದಿರಬೇಕು..? ಇಂತೆಲ್ಲಾ ವಿಚಾರಗಳನ್ನು ತಿಳಿಯುವ ಮುನ್ನ ದಾಂಪತ್ಯದಲ್ಲಿ ಬಿರುಕು ಉಂಟಾಗುವ ವಿಚಾರಗಳು ಯಾವವು ಅನ್ನೋದನ್ನ ತಿಳಿದುಕೊಳ್ಳೋಣ. ಸಾಮಾನ್ಯವಾಗಿ ಮನೆಯಲ್ಲಿ ಪತಿಗಿಂತ ಪತ್ನಿಯೇ ಹೆಚ್ಚು ಜಗಳವಾಡುತ್ತಾಳೆ ಎನ್ನುವ ಆರೋಪವಿದೆ. ಇದಕ್ಕೆ ಕಾರಣಗಳೇನು..? ಅನ್ನೋದನ್ನ ಮೊದಲು ತಿಳಿಯೋಣ ಆ ನಂತರ ಸುಖ ಸಂಸಾರದ ಸೂತ್ರಗಳ ಬಗ್ಗೆ ತಿಳಿಯೋಣ.

ಒಬ್ಬ ಪತಿ ಹಾಗೂ ಪತ್ನಿ ಇಂತೆಲ್ಲಾ ವಿಚಾರಕ್ಕೆ ಮನಸ್ಥಾಪ ಬರಬಹುದು :-

ಗಂಡ/ಹೆಂಡತಿ ಪರಸ್ತ್ರೀ/ ಪರಪುರುಷರ ಕಡೆಗೆ ನೋಡಿದಾಗ, ಗಂಡ/ಹೆಂಡತಿ ಮಾತಿನಲ್ಲಿ ಬದಲಾವಣೆಯಾದಾಗ, ನಡೆಸಿಕೊಳ್ಳುವ ರೀತಿ ಬದಲಾದಾಗ, ತನ್ನೊಂದಿಗೆ ಹೊರತು ಪರರೊಂದಿಗೆ ಹೆಚ್ಚಾಗಿ ಆತ್ಮೀಯತೆಯಿಂದ ಬೆರೆತಾಗ, ತನಗೆ ಕೊಡದ ಸಮಯ ಕೊಡದೇ ಇದ್ದಾಗ, ದುಷ್ಚಟಗಳಿಗೆ ಬಲಿಯಾದಾಗ, ತನ್ನನ್ನ ಬಿಟ್ಟು ಪರಸ್ತ್ರೀ / ಪುರುಷರನ್ನು ಹೊಗಳಿದಾಗ, ಬೇಕೆನಿಸಿದ ವಸ್ತುಗಳನ್ನ ಕೊಡಿಸದೇ ಇದ್ದಲ್ಲಿ/ ಹೇಳಿದ ಕೆಲಸ ಮಾಡದೇ ಇದ್ದಲ್ಲಿ, ಏನೇ ಹೇಳಲಿ ಅದರಲ್ಲಿ ಪ್ರೀತಿ ಇಲ್ಲದೇ ಇದ್ದಾಗ, ಬಯಸಿದ ಸ್ಥಳಕ್ಕೆ ಕರೆದುಕೊಂಡು ಹೋಗದೇ ಇದ್ದಾಗ, ತನ್ನ ಮಾತನ್ನು ಕೇಳದೇ ಇದ್ದಾಗ ಮನಸ್ಥಾಪಗಳು ಗಂಡ ಮತ್ತು ಹೆಂಡತಿ ನಡುವೆ ಉಂಟಾಗುತ್ತವೆ.

ಸುಖ ಸಂಸಾರದ ಸೂತ್ರಗಳು :-

ಮುಖ್ಯವಾಗಿ ದಂಪತಿಗಳಲ್ಲಿ ಸಾಮರಸ್ಯವಿರಬೇಕು. ಹಿಂದಿನ ಕಾಲದಲ್ಲಿ ಹೆಣ್ಣು ತಗ್ಗಿ, ಬಗ್ಗಿ ಹೇಳಿದ ಹಾಗೆ ಕೇಳಿಕೊಂಡು, ಮನೆಯಲ್ಲಿರುವ ಎಲ್ಲರ ಬೇಕು ಬೇಡಗಳನ್ನು ಅರಿತು, ಜೀವನ ಸಾಗಿಸಬೇಕಿತ್ತು. ಆದರೆ, ಕಾಲ ಬದಲಾದ ಹಾಗೆ, ಹೆಣ್ಣು ವಿದ್ಯಾವಂತಳಾಗಿ, ಮನೆಯ ಒಳಗು ಹೊರಗು ದುಡಿದು, ಸಂಸಾರ ನಿರ್ವಹಿಸುತ್ತತ್ತಿದ್ದಾಳೆ. ಹಿಂದೆ, ಅವಿಭಕ್ತ ಕುಟುಂಬಗಳಿದ್ದವು. ಈಗ, ಚಿಕ್ಕ ಸಂಸಾರ ಚೊಕ್ಕ ಹಾಗೂ ಸುಖ ಸಂಸಾರಗಳು ಹೆಚ್ಚಾಗಿವೆ. ಸುಖ ಸಂಸಾರದ ಸೂಕ್ರಕ್ಕೆ ಕೆಳಗಿನ ಕೆಲವು ಸೂತ್ರಗಳನ್ನು ಗಮನಿಸಿ.

ಗಂಡಾ ಹೆಂಡತಿಯಲ್ಲಿ ಅಹಂ ಇರಬಾರದು, ಪೊಸೆಸಿವ್ ನೆಚರ್ ಇರಬೇಕು. ಪರಸ್ಪರ ಇಬ್ಬರ ಸ್ವಭಾವವನ್ನು ಅರಿತುಕೊಳ್ಳಬೇಕು. ಆದಷ್ಟು ತಾಳ್ಮೆಯಿಂದ ವರ್ತಿಸಬೇಕು. ಸಾಮಾನ್ಯವಾಗಿ ಕಂಡು ಬರುವ ಸಕಾರಾತ್ಮ ಗುಣಗಳು ಹಾಗೂ ನಕಾರಾತ್ಮಕಗಳ ಗುಣಗಳ ಪೈಕಿ ಸಕಾರಾತ್ಮಕ ಗುಣಗಳನ್ನು ಪ್ರೋತ್ಸಾಹಿಸಬೇಕು.

ಮಾತಾಡುವ ಮುನ್ನ ಯೋಚಿಸಿ, ಮನ ನೋಯದಂತೆ ಆಡಬೇಕು. ಯಾವುದೇ ವಿಚಾರವನ್ನು ತೀರ್ಮಾನಿಸುವ ಮುನ್ನ ಇಬ್ಬರು ಚರ್ಚಿಸಬೇಕು. ಹೀಗೆ ಮಾಡಿದಲ್ಲಿ ಸುಖ ಸಂಸಾರವನ್ನು ದಂಪತಿಗಳು ಮಾಡುವುದರಲ್ಲಿ ಸಂಶಯವೇ ಇಲ್ಲ. ಅನುಮಾನವಿದ್ದರೆ ಒಮ್ಮೆ ಟ್ರೈ ಮಾಡಿ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights