ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಇಳಿಕೆ..!

ದೇಶದಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಕಳೆದೊಂದು ದಿನದಲ್ಲಿ 18,166 ಮಂದಿಗೆ ಸೋಂಕು ತಗುಲಿದ್ದು ಕಳೆದ ಏಳು ತಿಂಗಳಲ್ಲೇ ಇದು ಅತ್ಯಂತ ಕಡಿಮೆ ಸಂಖ್ಯೆಯ ಕೋವಿಡ್ ವರದಿಯಾಗಿದೆ.

ಕಳೆದ 24 ಗಂಟೆಯಲ್ಲಿ 214 ಮಂದಿ ಸಾವನ್ನಪ್ಪಿದ್ದಾರೆ. 23,624 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.ಈವರೆಗೆ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 4,50,589ಕ್ಕೆ ಏರಿಕೆಯಾಗಿದೆ.ಕೊರೊನಾದಿಂದ ಒಟ್ಟು ಗುಣಮುಖರಾದವರು ಸಂಖ್ಯೆ ಶೇಕಡಾ 97.99ರಷ್ಟು ಅಥವಾ 3,32,71,915 ತಲುಪಿದೆ. ಒಟ್ಟು ಸಕ್ರಿಯ ಪ್ರಕರಣಗಳು ದೇಶದಲ್ಲಿ ಶೇಕಡಾ 0.68ರಷ್ಟಿದೆ.

ಸದ್ಯ ದಿನಕ್ಕೆ ಶೇಕಡಾ 1.42ರಷ್ಟು ಮಂದಿ ಕೊರೊನಾ ಸೋಂಕಿಗೆ ಗುರಿಯಾಗುತ್ತಿದ್ದಾರೆ.ಈವರೆಗೆ ದೇಶದಲ್ಲಿ 94,70,10,175 (94 ಕೋಟಿ) ಮಂದಿಗೆ ಕೋವಿಡ್​ ವ್ಯಾಕ್ಸಿನೇಷನ್ ಮಾಡಲಾಗಿದೆ.ಶನಿವಾರದ ಅಂತ್ಯದವರೆಗೆ ದೇಶದಲ್ಲಿ 58,25,95,693 (58 ಕೋಟಿ) ಮಂದಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ. ಶನಿವಾರ ಒಂದೇ ದಿನ 12,83,212 ಮಂದಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights