ಇಂದು ಆರ್‌ಸಿಬಿ ಮತ್ತು ಸನ್‌ ರೈಸರ್ಸ್‌ ಹಣಾಹಣಿ: ಕ್ರಿಕೆಟ್‌ ಪ್ರೇಮಿಗಳ ಕಾತುರ!

ಇಂದು (ಸೋಮವಾರ) ಐಪಿಎಲ್ ನ ಮೂರನೇ ಪಂದ್ಯದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಈ ಪಂದ್ಯ ಮೂಲಕ 2020ರ ಐಪಿಎಲ್‌ ಟೂರ್ನಿಗೆ ಪ್ರವೇಶಿಸಲಿವೆ. ಉಭಯ ತಂಡೆಗಳ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಪ್ರತಿ ವರ್ಷವೂ, ಈ ಬಾರಿ ಕಪ್ ನಮ್ದೆ ಎಂದು ಹೇಳಿಕೊಳ್ಳುವ ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ತಂಡ ಇದುವರೆಗೂ ಐಪಿಎಲ್‌ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿಯಾದರೂ ಟ್ರೋಫಿ ಎತ್ತಿ ಹಿಡಿಯಬೇಕೆಂಬ ನಿರೀಕ್ಷೆಯಲ್ಲಿದ್ದಾರೆ.

ಕೊಹ್ಲಿ ಪಡೆ ಆರ್‌ಸಿಬಿ ಕೂಡ ಭರ್ಜರಿ ಸಿದ್ದತೆ ನಡೆಸಿದ್ದು, ಅಭ್ಯಾಸಕ್ಕಾಗಿ ಎರಡು ತಂಡಗಳನ್ನು ಮಾಡಿಕೊಂಡು ಭಾರಿ ಅಭ್ಯಾಸ ಮಾಡಿದೆ. ಕಳೆದ 12 ಸೀಸನ್​ಗಳಿಂದ ಮರೀಚಿಕೆಯಾಗಿರುವ ಟ್ರೋಫಿ ಈ ಬಾರಿ ಆರ್​ಸಿಬಿ ಮುಡಿಗೇರಲಿದೆ ಎಂಬ ವಿಶ್ವಾಸದಲ್ಲಿ ಅಭಿಮಾನಿಗಳಿದ್ದಾರೆ. ಇಂದಿನ ಮೊಲದ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ, ಆ ಗೆಲವು ಟ್ರೋಫಿ ಗೆಲ್ಲುವ ಭರವಸೆಯನ್ನು ಮತ್ತಷ್ಟು ಹೆಚ್ಚಿಸಲಿದೆ.

ಡೇವಿಡ್ ವಾರ್ನರ್‌ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡ ಬೌಲಿಂಗ್ ನಲ್ಲಿ ತುಂಬಾ ಬಲಿಷ್ಠವಾಗಿದೆ. ಈ ಎರಡು ತಂಡದಲ್ಲಿ ಇಂದು ಯಾರಿಗೆ ಜಯ ಸಿಗುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.


ಇದನ್ನೂ ಓದಿ: IPL ಮೊದಲ ಪಂದ್ಯ ಗೆದ್ದ ಸಿಎಸ್‌ಕೆ; 5 ವಿಕೆಟ್‌ಗಳ ಭರ್ಜರಿ ಜಯ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights