Fact Check: 1 ಕೋಟಿ ಕೋವಿಡ್-19 ರೋಗಿಗಳಿಗೆ ಸರ್ಕಾರ ಚಿಕಿತ್ಸೆ ನೀಡಿದೆ ಎಂದು ಪ್ರಧಾನಿ ಹೇಳಿದ್ದರೇ?

‘ಒಂದು ಕೋಟಿ ಕೋವಿಡ್-19 ರೋಗಿಗಳಿಗೆ ಸರ್ಕಾರ ಉಚಿತವಾಗಿ ಚಿಕಿತ್ಸೆ ನೀಡಿದೆ’ ಎಂದು ಪ್ರಧಾನ ಮಂತ್ರಿ ಹೇಳಿದ್ದಾರೆಂಬ “ಇಂಡಿಯಾ ಟಿವಿ” ವಾಹಿನಿಯ ಸ್ಕ್ರೀನ್ ಶಾಟ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ದೇಶದಲ್ಲಿ ಕೋವಿಡ್-19 ರೋಗಿಗಳ ಸಂಖ್ಯೆ 2 ಲಕ್ಷಕ್ಕೂ ಕಡಿಮೆ ಇರುವಾಗ ಸರ್ಕಾರ ಒಂದು ಕೋಟಿ ರೋಗಿಗಳಿಗೆ ಚಿಕಿತ್ಸೆ ಕೊಡಲು ಹೇಗೆ ಸಾಧ್ಯ ಎಂದು ಈ ಫೇಸ್ಬುಕ್ ಪೋಸ್ಟ್ ಪ್ರಶ್ನಿಸಿದೆ. ಈ ಪೋಸ್ಟ್ ನಲ್ಲಿ ಕೇಳಿರುವ ಪ್ರಶ್ನೆಯ ಸತ್ಯಾಸತ್ಯತೆಯನ್ನು ತಿಳಿಯೋಣ.

ಪೋಸ್ಟ್ನನಲ್ಲಿ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಮಂಡನೆ: ಭಾರತದಲ್ಲಿ ಒಂದು ಕೋಟಿ ಕೋವಿಡ್-19 ರೋಗಿಗಳಿಗೆ ಸರ್ಕಾರ ಉಚಿತವಾಗಿ ಚಿಕಿತ್ಸೆ ನೀಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನಿಜಾಂಶ: ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ‘ಆಯುಶ್ಮಾನ್ ಭಾರತ್’ ಯೋಜನೆಯ ಫಲಾನುಭವಿಗಳು ಒಂದು ಕೋಟಿ ದಾಟಿದ್ದಾರೆ ಎಂದು ಮೋದಿ ಹೇಳಿದ್ದರು. ಸರ್ಕಾರ ಒಂದು ಕೋಟಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಿದೆ ಎಂದು ಅವರು ಹೇಳಿಲ್ಲ. ಆದುದರಿಂದ ಪೋಸ್ಟ್ ನಲ್ಲಿ ಮಂಡಿಸಿರುವ ವಿಷಯ ಸುಳ್ಳು.

ಪೋಸ್ಟ್ ನಲ್ಲಿ ಹೇಳಿಕೊಂಡಿರುವ ವಿಷಯದ ಬಗ್ಗೆ ಹುಡುಕಾಟ ನಡೆಸಿದ ಮೇಲೆ ಮೋದಿಯವರು ಅಂತಹ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ ಎಂದು ಗೊತ್ತಾಗಿದೆ. ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮೋದಿ ಅವರು ಸಾಂಕ್ರಾಮಿಕ ರೋಗದ ವಿರುದ್ಧದ ಸರ್ಕಾರದ ಶ್ರಮವನ್ನು ಶ್ಲಾಘಿಸಿ, ‘ಆಯುಶ್ಮಾನ್ ಭಾರತ್’ ಯೋಜನೆಯ ಫಲಾನುಭವಿಗಳು ಒಂದು ಕೋಟಿ ದಾಟಿರುವ ವಿಷಯವನ್ನು ಹೆಮ್ಮೆಯಿಂದ ಹಂಚಿಕೊಂಡಿದ್ದರು. ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ‘ಆಯುಶ್ಮಾನ್ ಭಾರತ್’ ಯೋಜನೆಯ ಫಲಾನುಭವಿಗಳು ಒಂದು ಕೋಟಿ ದಾಟಿರುವ ವಿಷಯವನ್ನು ಈ ವಿಡಿಯೋದ 18:03 ಸಮಯದಲ್ಲಿ ಕೇಳಬಹುದು. ಇದೇ ಭಾಷಣದ ಪಠ್ಯ ರೂಪವನ್ನು ‘ಪಿಎಂ ಇಂಡಿಯ’ ವೆಬ್ ಸೈಟ್ ನಲ್ಲಿ ಹಾಗೂ ‘ಪಿಎಂಒ ಇಂಡಿಯ’ ಮಾಡಿರುವ ಟ್ವೀಟ್ ನಲ್ಲಿ ಕಾಣಬಹುದು.

ಪ್ರಸಾರ ಮಾಡುವಾಗ ಎಸಗಿದ ತಪ್ಪಿಗೆ ಕ್ಷಮೆ ಕೋರಿ ‘ಇಂಡಿಯಾ ಟಿವಿ’ ತಿದ್ದುಪಡಿಯನ್ನು ವೀಕ್ಷಕರಿಗೆ ತಿಳಿಸಿತ್ತು.

ಒಟ್ಟಿನಲ್ಲಿ, ಪ್ರಧಾನಿ ಮೋದಿ ಅವರು ಒಂದು ಕೋಟಿ ಕೋವಿಡ್-19 ರೋಗಿಗಳಿಗೆ ಸರ್ಕಾರ ಉಚಿತವಾಗಿ ಚಿಕಿತ್ಸೆ ನೀಡಿದೆ ಎಂದು ಹೇಳಿಲ್ಲ.

ಕೃಪೆ: ಫ್ಯಾಕ್ಟ್ಲಿ 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights