ಒಂದೇ ದಿನ 11,000 ಕೊರೊನಾ ಪ್ರಕರಣ; ದೇಶದಲ್ಲಿ 3 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ

ಕೊರೊನಾ ವೈರಸ್‌ ಹರಡುವಿಕೆಯನ್ನು ನಿಯಂತ್ರಿಸಲು ದೇಶಾದ್ಯಂತ ಲಾಕ್‌ಡೌನ್ ಮಾಡಲಾಗಿತ್ತು. ಲಾಕ್‌ಡೌನ್‌ ಘೋಷಿಸಿದ ಸಂದರ್ಭದಲ್ಲಿ ಸೋಂಕಿನ ಹತಡುವಿಕೆಯ ಪ್ರಮಾಣ ತೀವ್ರ ಕಡಿಮೆ ಇತ್ತು. ಆದರೆ, ಈಗ ದಿನಕ್ಕೆ ಸರಾಸರಿ 10,000 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಲಾಕ್‌ಡೌನ್‌ ಮಾತ್ರ ಹೆಸರಿಗಷ್ಟೇ ಲಾಕ್‌ಡೌನ್‌ ಆಗಿದ್ದು, ಕಂಪ್ಲೀಟ್‌ ಮೊದಲಿನ ರೀತಿಗೆ ಚಟುವಟಿಕೆಗಳು ನಡೆಯುತ್ತಿವೆ.

ಸೋಂಕಿತರ ಸಂಖ್ಯೆಯಲ್ಲಿ ವಿಶ್ವದ ನಾಲ್ಕನೇ ಸ್ಥಾನಕ್ಕೆ ಭಾರತ ನಿನ್ನೆ ಏರಿಕೆಯಾಗಿತ್ತು. ಇಂದು ದೇಶದಲ್ಲಿ ಸೋಂಕಿತರ ಸಂಖ್ಯೆ 03 ಲಕ್ಷದ ಗಡಿ ದಾಟಿ ಮುನ್ನುಗ್ಗುತ್ತಿದೆ.

Nephrologist #COVIDWarrior: 'We Are Winning Some of These Battles'

ಭಾರತದಲ್ಲಿ  ಜೂನ್‌ 3ರ ನಂತರ ದಿನಕ್ಕೆ ಸರಾಸರಿ 9 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದವು. ಜೂನ್ 11ರ ನಂತರ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದವು. ಆದರೆ, ನಿನ್ನೆ 11 ಸಾವಿರಕ್ಕೂ ಹೆಚ್ಚು‌ ಸೋಂಕು ಪೀಡಿತರು ಕಾಣಿಸಿಕೊಂಡಿದ್ದಾರೆ.

ಶುಕ್ರವಾರ 11,458 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 3,08,993ಕ್ಕೆ ಏರಿಕೆಯಾಗಿದೆ.  ಶುಕ್ರವಾರ ಒಂದೇ ದಿನ ಕೊರೋನಾದಿಂದ 386 ಜನ ಮೃತಪಟ್ಟಿದ್ದು, ದೇಶದಲ್ಲಿ ಕೊರೋನಾದಿಂದ ಸತ್ತವರ ಸಂಖ್ಯೆ 8,884ಕ್ಕೆ ಏರಿಕೆಯಾಗಿದೆ.

ಇದುವರೆಗೂ ದೇಶದಲ್ಲಿ 1,54,330 ಜನರು ಕೊರೊನಾ ಸೋಂಕಿನಿಂದ  ಗುಣಮುಖರಾಗಿದ್ದಾರೆ. 1,45,779 ಸೋಂಕಿತ ಪ್ರಕರಣಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights