FACT CHECK | ರಾಹುಲ್ ಗಾಂಧಿಯನ್ನು ಭಾರತದ ರಾಜಕೀಯ ಹೀರೋ ಎಂದು ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ

“ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಗೃಹ ಸಚಿವರಾದ ಎಲ್ ಕೆ ಅಡ್ವಾಣಿ ಅವರು ರಾಹುಲ್ ಗಾಂಧಿ ಅವರನ್ನು ಭಾರತದ ರಾಜಕೀಯ ಹೀರೋ ಎಂದು ಕರೆದಿದ್ದಾರೆ ಆ ಮೂಲಕ ರಾಹುಲ್ ಗಾಂಧಿಯವರ ನಾಯಕತ್ವವನ್ನು ಎಲ್ ಕೆ ಅಡ್ವಾಣಿ ಅವರು ಮೆಚ್ಚಿಕೊಂಡಿದ್ದಾರೆ” ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ.

ಇದೇ ಹೇಳಿಕೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಈ ಕುರಿತು 7 ಮೇ 2024 ರಂದು ಆವಾದ್‌ಭೂಮಿ ಎಂಬ ವೆಬ್ಸೈಟ್ ವರದಿಯನ್ನು ಮಾಡಿದೆ. ಅಡ್ವಾಣಿ ಅವರು ರಾಹುಲ್ ಗಾಂಧಿಯವರನ್ನು ಹಾಡಿ ಹೊಗಳಿರುವ ಕುರಿತು ಬರೆಯಲಾಗಿದೆ.” ಎಂದು ಈ ಹಿಂದಿ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಶೀಲಿಸಲು ಕೀ ವರ್ಡ್ಸ್‌ಗಳನ್ನು ಬಳಸಿ ಸರ್ಚ್ ಮಾಡಿದಾಗ ಲಾಲ್ ಕೃಷ್ಣ ಅಡ್ವಾಣಿ ರಾಹುಲ್ ಕುರಿತು ಹೇಳಿದ್ದಾರೆ ಎನ್ನಲಾದ ಹೇಳಿಕೆಯನ್ನು ಉಲ್ಲೇಖಿಸಿ ಮಾಡಿದ ಯಾವುದೇ ವರದಿಗಳು ಲಭ್ಯವಾಗಿಲ್ಲ. ಬಳಿಕ ವೈರಲ್ ವರದಿಯ ಸ್ಕ್ರೀನ್‌ಶಾಟ್ ಅನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಿದಾಗ ಇದೊಂದು ಸುಳ್ಳು ಸುದ್ದಿ ಎಂಬ ಕುರಿತು ಆಂಗ್ಲ ಭಾಷೆಯಲ್ಲಿ ಹಲವು ಫ್ಯಾಕ್ಟ್‌ಚೆಕ್ ವರದಿಗಳು ಕಂಡುಬಂದಿವೆ.

ಆದರೆ ಇದನ್ನು ಹೊರತುಪಡಿಸಿ ಹೆಚ್ಚಿನ ಮಾಹಿತಿಗಾಗಿ ಸರ್ಚ್ ಮಾಡಿದಾಗ, ಅಡ್ವಾಣಿ ಅವರು ರಾಹುಲ್ ಗಾಂಧಿಯವರನ್ನು ಹೊಗಳಿರುವ ಕುರಿತು ಯಾವುದೇ ವರದಿಗಳು ಕಂಡುಬಂದಿಲ್ಲ. ಒಂದು ವೇಳೆ ಬಿಜೆಪಿಯ ಮಾಜಿ ಗೃಹ ಮಂತ್ರಿಗಳಾದ ಲಾಲ್ ಕೃಷ್ಣ ಅಡ್ವಾಣಿ ಅವರು ಈ ಮಾತನ್ನ ಹೇಳಿದ್ದು ನಿಜವೇ ಆಗಿದ್ದರೆ ರಾಷ್ಟ್ರೀಯ ಮಾಧ್ಯಮಗಳಿಂದ ಹಿಡಿದು ದೇಶದ ಹಲವು ಪ್ರತಿಷ್ಠಿತ ಸುದ್ದಿ ಸಂಸ್ಥೆಗಳು ವರದಿಯನ್ನು ಮಾಡಬೇಕಿತ್ತು. ಆದರೆ ಅಂತಹ ಯಾವುದೇ ವರದಿಗಳು ಕಂಡುಬಂದಿಲ್ಲ. ಹಾಗಾಗಿ ಈ ಸುದ್ದಿಯಲ್ಲಿ ನೈಜತೆ ಇಲ್ಲ ಎಂಬುದು ಸಾಬೀತಾಗಿದೆ.

ತದನಂತರ ವೈರಲ್ ಆದಂತಹ ವೆಬ್‌ಸೈಟ್‌ ಒಂದರ ವರದಿಯ ಕುರಿತು ಪರಿಶೀಲನೆ ನಡೆಸಲು ವೆಬ್‌ಸೈಟ್‌ ಡೊಮೈನ್‌ ಪರಿಶೀಲನಾ ತಾಣವಾದ ಹೂ ಇಸ್ ಎಂಬ ವೆಬ್‌ಸೈಟ್‌ಗಳ ಮಾಹಿತಿ ನೀಡುವ ತಾಣದಲ್ಲಿ ಹುಡುಕಿದಾಗ ಸುಳ್ಳು ವರದಿ ಮಾಡಿದ ಅವಧ್ ಭೂಮಿ ನೆದರ್ಲ್ಯಾಂಡ್‌ನಲ್ಲಿ ನೊಂದಣಿ ಮಾಡಿಸಿಕೊಂಡಿರುವುದು ತಿಳಿದುಬಂದಿದೆ. ಭಾರತೀಯ ಮೂಲವಲ್ಲದ ಈ ವೆಬ್ ತಾಣ ಸುಳ್ಳು ಸುದ್ದಿಯನ್ನು ಹರಡಿ ಗೊಂದಲವನ್ನು ಉಂಟುಮಾಡುವುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಹಿರಿಯ ಬಿಜೆಪಿ ನಾಯಕ,  ಮಾಜಿ ಗೃಹ ಸಚಿವ  ಎಲ್ ಕೆ ಅಡ್ವಾಣಿ ಅವರು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರನ್ನು ಭಾರತದ ರಾಜಕೀಯ ಹೀರೋ ಎಂದು ಕರೆದಿದ್ದಾರೆ ಎಂಬುದು ಸುಳ್ಳು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಶ್ರೀರಾಮನ ಫ್ಲೆಕ್ಸ್‌ ಹರಿದು ಪ್ರತಿಭಟಿಸಿದ್ದು ಕಾಂಗ್ರೆಸ್‌ ಕಾರ್ಯಕರ್ತರಲ್ಲ! ಮತ್ತ್ಯಾರು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights