IPL 2nd ಇನ್ನಿಂಗ್ಸ್‌: RCB ಹೀನಾಯ ಸೋಲು; ಕ್ರಿಕೆಟ್‌ ಪ್ರೇಮಿಗಳು ಹೇಳಿದ್ದೇನು?

ಕೊರೊನಾ ಎರಡನೇ ಅಲೆಯ ಅಬ್ಬರದಿಂದ ಅರ್ಧಕ್ಕೆ ಮೊಟಕುಗೊಂಡಿದ್ದ ಐಪಿಎಲ್‌-2021 ಮತ್ತೆ ಯುಎಇಯಲ್ಲಿ ಆರಂಭವಾಗಿದೆ. ಐಪಿಎಲ್‌-2021ರ 2ನೇ ಇನ್ನಿಂಗ್ಸ್‌ನಲ್ಲಿ ಸೋಮವಾರ ಆರ್‌ಸಿಬಿ ತಂಡವು ಕೆಕೆಆರ್‌ ವಿರುದ್ದ ಮೊದಲ ಸೆಣೆಸಾಟ ನಡೆಸಿದ್ದು, ಹೀನಾಯವಾಗಿ ಸೋಲು ಕಂದಿದೆ. ಈ ಆವೃತ್ತಿಯ ಮೊದಲ ಸೋಲಿನ ಬಗ್ಗೆ ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಮೊದಲ ಪಂದ್ಯ ದೇವರಿಗೆ, ಸೋತರು ಪಾಯಿಂಟ್ ಪಟ್ಟಿಯಲ್ಲಿ ಹತ್ತು ಅಂಕ ಗಳಿಸಿದೆ ಎಂದು ಆರ್‌ಸಿಬಿ ಅಭಿಮಾನಿಗಳು ಹೇಳುತ್ತಿದ್ದಾರೆ. ಇದೇ ವೇಳೆ ಮತ್ತೊಂದೆಡೆ, ಬೆಂಗಳೂರು ತಂಡದ ಹೀನಾಯ ಪ್ರದರ್ಶನ ನೀಡಿದೆ.  ವಿರಾಟ್ ಕ್ಯಾಪ್ಟನ್‌ಶಿಪ್‌ನಿಂದ ಇಳಿಯುವ  ನಿರ್ಧಾರ ಮಾಡಿರುವುದು ಒಳ್ಳೆಯದಾಯಿತು ಎಂದು ಮತ್ತಷ್ಟು ಜನ ಹೇಳಿದ್ದಾರೆ.

‘ಈ ಆಟವು ಸೋತಿರಬಹುದು, ಆದರೆ ಕೊನೆಯಲ್ಲಿ ನಾವು #IPL2021 ಅನ್ನು ಗೆಲ್ತಿವಿ’ ಎಂದು ಮೇಘಶ್ರೀ ಎನ್ನುವವರು ಕೂನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಇತಿಹಾಸವನ್ನು ರಚಿಸಲಾಗಿದೆ: ಐಪಿಎಲ್ ಇತಿಹಾಸದಲ್ಲಿ 3 ವಿಭಿನ್ನ ಜೆರ್ಸಿಗಳಲ್ಲಿ ಸೋತ ಮೊದಲ ತಂಡ ಆರ್ಸಿಬಿ’ ಎಂದು ನಿಶ್ಚಿತ್ ಎನ್ನುವವರು ಕೂ ಮಾಡಿದ್ದಾರೆ.

‘ನೆನ್ನೆ #ABD ಔಟ್ ಆದಾಗ ಹಾರ್ಟ್ ಬೀಟ್ ನಿಂತಂಗ್ ಆಗಿತ್ತು! ‘ ಎಂದು ಸುದರ್ಶನ್ ಕೂ ಮಾಡಿದ್ದಾರೆ.

‘ಇದು ನಿಮ್ಮನ್ನು ವ್ಯಾಖ್ಯಾನಿಸುವ ವಿಜಯಗಳು ಮಾತ್ರವಲ್ಲ … ಆಗಾಗ್ಗೆ ನೀವು ಕಳೆದುಕೊಳ್ಳುವ ಮಾರ್ಗವಾಗಿದೆ. ನಿಮ್ಮ ಬಿಡುವಿನ ದಿನಗಳು ಎಷ್ಟು ಕೆಟ್ಟದು !!! #RCB NRR ಘನ ಸೋಲನ್ನು ತೆಗೆದುಕೊಳ್ಳುವಷ್ಟು ಕೆಟ್ಟದಾಗಿ ಕಳೆದುಕೊಳ್ಳದಿರುವ ಮಾರ್ಗವನ್ನು ಕಂಡುಕೊಳ್ಳಬೇಕು. ಶ್ರೇಷ್ಠ ತಂಡಗಳು ಸೋಲಿನಲ್ಲೂ ಸಾಧ್ಯವಾದಷ್ಟು ಕಡಿಮೆ ಕಳೆದುಕೊಳ್ಳಲು ನಿರ್ವಹಿಸುತ್ತವೆ’ ಎಂದು ಕ್ರಿಕೆಟರ್ ಆಕಾಶ್ ಚೋಪ್ರಾ ಕೂ ಮಾಡಿದ್ದಾರೆ.

’11 ಜನ ಆಟಗಾರರಿಗೂ ಬ್ಯಾಟಿಂಗ್ ನೀಡಿ ಮಾನವೀಯತೆ ಮೆರೆದ RCB’ ಎಂದು ಬೇಸರದಲ್ಲಿ ಅಭಿಮಾನಿಯೊಬ್ಬರು ಕೂ ಮಾಡಿದ್ದಾರೆ.

ಇದನ್ನೂ ಓದಿ: ಅಧಿಕಾರಿಗಳು ನಮ್ಮ ಚಪ್ಪಲಿ ಎತ್ತಿಕೊಳ್ಳಲು ಮಾತ್ರ ಇರುವುದು: ಬಿಜೆಪಿ ನಾಯಕಿ ವಿವಾದಾತ್ಮಕ ಹೇಳಿಕೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights