ಬೆಂಗಳೂರು: ಅನೈತಿಕ ಪೊಲೀಸ್‌ ಗಿರಿ; ಆರೋಪಿಗಳ ಬಂಧನ; 7 ಸೆಕ್ಷನ್‌ಗಳ ಅಡಿ ಎಫ್‌ಐಆರ್‌ ದಾಖಲು!

ಬೆಂಗಳೂರಿನಲ್ಲಿ ತನ್ನ ಸಹೋದ್ಯೋಗಿ ಮುಸ್ಲಿಂ ಯುವತಿಯನ್ನು ಬೈಕ್‌ನಲ್ಲಿ ಮನೆಗೆ ಡ್ರಾಪ್ ಮಾಡುತ್ತಿದ್ದ ಹಿಂದೂ ಯುವಕನ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಯುವತಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳಾದ ಸೊಹೇಲ್ ಹಾಗೂ ನಯಾಜ್ ವಿರುದ್ಧ ಐಪಿಸಿಯ 7 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಐಪಿಸಿ ಸೆಕ್ಷನ್ 153(a) -ಉದ್ದೇಶಪೂರ್ವಕವಾಗಿ ಎರಡು ಧರ್ಮಗಳ ನಡುವೆ ದ್ವೇಷ, ಸೆಕ್ಷನ್ 506- ಜೀವ ಬೆದರಿಕೆ, 341- ಅಕ್ರಮ ತಡೆ, 34-ಉದ್ದೇಶಪೂರ್ವಕ ಜನರಿಗೆ ನೋವುಂಟು ಮಾಡುವುದು, 504-ಮಾನಹಾನಿ, 323- ಮನಸ್ಸಿಗೆ ಘಾಸಿ ಹಾಗೂ 354- ಮಹಿಳೆ ಮೇಲೆ ದೌರ್ಜನ್ಯರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಇದನ್ನೂ ಓದಿ: ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಗೆ ಒತ್ತಾಯ; ರಾಜ್ಯಾದ್ಯಂತ ಸೈಕಲ್‌ ಜಾಥಾ ಮಾಡುತ್ತಿರುವ ಕಿರಣ್‌!

ತನ್ನ ಸಹೋದ್ಯೋಗಿ ಯುವತಿಯನ್ನು ಮನೆಗೆ ಡ್ರಾಪ್ ಮಾಡಲು ತೆರಳುತ್ತಿದ್ದ ವೇಳೆ, ಕೆಲವು ಮುಸ್ಲಿಂ ಸಮುದಾಯದ ವ್ಯಕ್ತಿಗಳು ಗಾಡಿಗೆ ಅಡ್ಡಗಟ್ಟಿ ನೈತಿಕ ಪೊಲೀಸ್‌ಗಿರಿ ನಡೆಸಿ, ಗಲಾಟೆ ನಡೆಸಿದ್ದರು. ಅನ್ಯಧರ್ಮದ ಯುವಕನ ಜೊತೆಗೆ ತೆರಳುತ್ತಿದ್ದಕ್ಕಾಗಿ ಯುವತಿಯನ್ನು ನಿಂದಿಸಿದ್ದರು. ಆ ಸಂದರ್ಭದಲ್ಲಿ ಯುವತಿ ತನ್ನ ಗಂಡನ ದೂರವಾಣಿ ಸಂಖ್ಯೆ ನೀಡಿದ್ದರು. ಬೇರೆ ಯುವಕನ ಜೊತೆಗೆ ಹೆಂಡತಿಯನ್ನು ಕಳುಹಿಸಿದಕ್ಕಾಗಿ ಯುವತಿಯ ಪತಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿದ್ದರು.

ಯುವತಿಯನ್ನು ನಿಂದಿಸಿ, ಬೈಕ್‌ನಿಂದ ಇಳಿಸಿ ಆಟೋಗೆ ಹತ್ತಿಸಿ ಕಳುಹಿಸಿದ್ದರು. ಯುವಕನ ಮೇಲೆ ಹಲ್ಲೆ ನಡೆಸಿದ್ದರು. ಮತ್ತೊಮ್ಮೆ ಮುಸ್ಲಿಂ ಯುವತಿಯರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗದಂತೆ ಎಚ್ಚರಿಕೆ ನೀಡಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವಿಡಿಯೋ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಅಧಿಕಾರಿಗಳು ನಮ್ಮ ಚಪ್ಪಲಿ ಎತ್ತಿಕೊಳ್ಳಲು ಮಾತ್ರ ಇರುವುದು: ಬಿಜೆಪಿ ನಾಯಕಿ ವಿವಾದಾತ್ಮಕ ಹೇಳಿಕೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights