ಮಹಿಳೆಯ ಮೇಲೆ ಅತ್ಯಾಚಾರ; ಜೈನ ಸನ್ಯಾಸಿ ಬಂಧನ

ಜೈನ ಮುನಿಯೊಬ್ಬ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ನಡೆದಿದೆ.

ಕರೌಲಿ ಜಿಲ್ಲೆಯ ಹಿಂಡನ್‌ ಪಟ್ಟಣದಲ್ಲಿದ್ದ ಜೈನ ಆಶ್ರಯ ಮನೆಯಲ್ಲಿದ್ದ ಮುನಿಯ ಆಶೀವಾರ್ದ ಪಡೆಯಲು ಮಹಿಳೆ ಅಲ್ಲಿಗೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಆರೋಪಿ ಜೈನ ಮುನಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಜೈನಮುನಿ ಸುಕುಮಾಲ್ನಾಂಡಿಯ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಪ್ರಕಾರ, ಮಹಿಳೆಯೊಬ್ಬರು ಆತನ ಆಶೀವಾರ್ದ ಪಡೆಯಲು ಸಂಬಂಧಿಕರೊಂದಿಗೆ ಆಶ್ರಯ ಮನೆಗೆ ಹೋಗಿದ್ದರು. ಮೊದಲಿಗೆ, ಸಂತ್ರಸ್ಥೆಯ ಅತ್ತಿಗೆ ಆಶೀವಾರ್ದ ಪಡೆಯಲು ಹೋಗಿದ್ದು, ಆಕೆಯೊಂದಿಗೂ ಆತ ಅನುಚಿತವಾಗಿ ವರ್ತಿಸಿದ್ದಾನೆ. ನಂತರ ಹೋದ ಸಂತ್ರಸ್ಥ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿಸಲಾಗಿದೆ.

ಕೋಪಗೊಂಡ ಮಹಿಳೆಯ ಕುಟುಂಬ ಸದಸ್ಯರು ಆಶ್ರಯ ಮನೆಗೆ ತಲುಪಿ ಸನ್ಯಾಸಿಯನ್ನು ಎದುರಿಸಿದ್ದು, ಆತ ತನ್ನ ಕೋಣೆಯ ಬಾಗಿಲು ಲಾಕ್‌ ಮಾಡಿಕೊಂಡಿದ್ದಾನೆ. ನಂತರ ಪೊಲೀಸರು ಆತನನ್ನು ಬಂಧಿಸಿ ಪೊಲೀಸ್‌ ಠಾಣೆಗೆ ಕರೆದೊಯ್ದಿದ್ದಾರೆ.

ಆತನನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ಯಿದ ನಂತರ ಆ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು ಎಂದು ವರದಿಯಾಗಿದೆ.

“ಆ ಜೈನ ಮುನಿ ಅನೇಕ ಸ್ಥಳಗಳಿಗೆ ಭೇಟಿ ನೀಡಿದ ನಂತರ ಹಿಂಡನ್‌ ಪಟ್ಟಣಕ್ಕೆ ಬಂದಿದ್ದರು. ಅವರ ಮೇಲೆ ಅವ್ಯವಹಾರ ಮತ್ತು ಅತ್ಯಾಚಾರದ ಆರೋಪಗಳಿವೆ. ಐಪಿಸಿ 354 ಮತ್ತು 37 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದೇವೆ” ಎಂದು ಕರೌಲಿಯ ಎಸ್‌ಪಿ ಅನಿಲ್ ಶರ್ಮಾ ಹೇಳಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights