ಪಾಕ್ ಅಣ್ವಸ್ತ್ರ ಯೋಜನೆಯ ಪಿತಾಮಹ ಅಬ್ದುಲ್ ಖಾದಿರ್ ಖಾನ್ ಸಾವು!

ಪಾಕ್ ಅಣ್ವಸ್ತ್ರ ಯೋಜನೆಯ ಪಿತಾಮಹ ಎಂದೇ ಕರೆಯಲ್ಪಡುವ ಅಬ್ದುಲ್ ಖಾದಿರ್ ಖಾನ್ ನಿಧನರಾಗಿದ್ದಾರೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವರು ಮಾಹಿತಿ ನೀಡಿದ್ದಾರೆ.

ಅಬ್ದುಲ್ ಖಾದಿರ್ ಖಾನ್ (85) ಅವರಿಗೆ ಆರೋಗ್ಯ ಸಮಸ್ಯೆಯಿದ್ದು, ಬೆಳಗ್ಗೆ 7 ಗಂಟೆಗೆ ಇಸ್ಲಾಮಾಬಾದ್​​ನ ಖಾನ್ ರಿಸರ್ಚ್ ಲ್ಯಾಬೋರೇಟರೀಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಉಸಿರಾಟ ಸಂಬಂಧಿ ಸಮಸ್ಯೆಯಿಂದ ಅವರನ್ನು ಮುಂಜಾನೆ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನಹೊಂದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ಪಾಕ್ ರಕ್ಷಣಾ ಸಚಿವ ಪರ್ವೇಜ್ ಖತ್ತಕ್  ಅಬ್ದುಲ್ ಖಾದಿರ್ ಖಾನ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಇದು ದೇಶಕ್ಕೆ ಬಹುದೊಡ್ಡ ನಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರು ನೀಡಿರುವ ಕೊಡುಗೆಯನ್ನು ರಾಷ್ಟ್ರ ಸ್ಮರಿಸುತ್ತದೆ ಎಂದಿದ್ದಾರೆ.

ಅಬ್ದುಲ್ ಖಾದಿರ್ ಖಾನ್ ಏಪ್ರಿಲ್ 1, 1936ರಂದು ಮಧ್ಯಪ್ರದೇಶ ಭೋಪಾಲ್​ನಲ್ಲಿ ಜನಿಸಿದ್ದರು. ಪಶ್ತೂನ್ ಸಮುದಾಯಕ್ಕೆ ಸೇರಿದ ಅವರು, ಪ್ರಾಥಮಿಕ ಶಿಕ್ಷಣವನ್ನು ಇಲ್ಲಿಯೇ ಪಡೆದಿದ್ದರು. ಭಾರತ-ಪಾಕ್​ ವಿಭಜನೆಯಾದ ನಂತರ ಪಾಕಿಸ್ತಾನಕ್ಕೆ ತೆರಳಿ ಅಲ್ಲಿಯೇ ನೆಲೆಸಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights