Fact Check: ಮನಮೋಹನ್ ಸಿಂಗ್ ಬರ್ತಡೇ ಕೇಕ್ಅನ್ನು ರಾಹುಲ್‌ಗಾಂಧಿ ಕತ್ತರಿಸಿದ್ದರೇ??

ರಾಹುಲ್ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರು ಕೇಕ್ ಕತ್ತರಿಸುವ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಮನಮೋಹನ್ ಸಿಂಗ್ ಅವರು ತಮ್ಮ ಹುಟ್ಟುಹಬ್ಬದ ಕೇಕ್ ಕತ್ತರಿಸಲೂ ಸ್ವಾತಂತ್ರ್ಯರಾಗಿಲ್ಲ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಈ ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ಕಾಣಬಹುದು.

ಪ್ರತಿಪಾದನೆ: ರಾಹುಲ್ ಗಾಂಧಿ ಅವರು ಮನಮೋಹನ್ ಸಿಂಗ್ ಅವರ ಹುಟ್ಟುಹಬ್ಬದ ಕೇಕ್ ಕತ್ತರಿಸುವ ವಿಡಿಯೋ.

ಸತ್ಯ: ವೀಡಿಯೊದಲ್ಲಿ ರಾಹುಲ್ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರು ಕತ್ತರಿಸಿದ ಕೇಕ್ ಮನಮೋಹನ್ ಸಿಂಗ್ ಅವರ ಜನ್ಮದಿನದಲ್ಲ. ಅದು ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನಾಚರಣೆಯದ್ದು. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಸರ್ಚ್‌ ಮೂಲಕ ಗೂಗಲ್‌ನಲ್ಲಿ ಹುಡುಕಿದಾಗ, ರಾಹುಲ್ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರು ಕೇಕ್ ಕತ್ತರಿಸುವ ಫೋಟೋಗಳು ‘ಎಎನ್‌ಐ’ 2018ರ ಡಿಸೆಂಬರ್‌ನಲ್ಲಿ ಮಾಡಿದ ಟ್ವೀಟ್‌ನಲ್ಲಿ ಕಂಡುಬಂದಿವೆ. ಆ ಟ್ವೀಟ್‌ನಿಂದ ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನದಂದು (ಡಿಸೆಂಬರ್ 28) ರಾಹುಲ್ ಗಾಂಧಿ ಮತ್ತು ಮನಮೋಹನ್‌ಸಿಂಗ್‌ ಅವರು ಜೊತೆಯಾಗಿ ಕೇಕ್ ಕತ್ತರಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ‘ಎನ್‌ಡಿಟಿವಿ’ ಪ್ರಕಟಿಸಿದ ಲೇಖನವನ್ನು ಇಲ್ಲಿ ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಕಾಂಗ್ರೆಸ್ ಪಕ್ಷದ ಅಡಿಪಾಯ ದಿನಾಚರಣೆಯ ವೀಡಿಯೊವನ್ನು ಮನಮೋಹನ್ ಸಿಂಗ್ ಅವರ ಹುಟ್ಟುಹಬ್ಬದ ಕೇಕ್ಅನ್ನು ರಾಹುಲ್ ಗಾಂಧಿ ಕತ್ತರಿಸಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

– ಸೋಮಶೇಖರ್ ಚಲ್ಯ


Read Also: Fact Check: ಪ್ರಧಾನಿ ಮೋದಿಗಾಗಿ 8,600 ರೂ ವೆಚ್ಚದಲ್ಲಿ ತರಿಸಿದ ವಿಮಾನದ್ದೇ ಈ ಚಿತ್ರ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights