Fact Check: ಪ್ರಧಾನಿ ಮೋದಿಗಾಗಿ 8,600 ರೂ ವೆಚ್ಚದಲ್ಲಿ ತರಿಸಿದ ವಿಮಾನದ್ದೇ ಈ ಚಿತ್ರ?

ಇತ್ತೀಚೆಗೆ, ವಿವಿಐಪಿಗಳ ವಿಮಾನ ಪ್ರಯಾಣಕ್ಕಾಗಿ ಬಳಸಲಾಗುವ ಎರಡು ವಿಮಾನಗಳಲ್ಲಿ ಒಂದು ಯುಎಸ್ಎಯಲ್ಲಿ ಮರುಹೊಂದಿಸಿದ ನಂತರ ಭಾರತಕ್ಕೆ ಬಂದಿಳಿದಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿಗಾಗಿ 8,600 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಿಸಿದ ವಿಮಾನದ ಒಳಭಾಗ ಎಂಬ ಹೇಳಿಕೆಯೊಂದಿಗೆ ಒಂದು ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ಕಾಣಬಹುದು.

ಪ್ರತಿಪಾದನೆ: ಪ್ರಧಾನಿ ಮೋದಿಗಾಗಿ 8,600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ವಿಮಾನದ ಆಂತರಿಕ ಫೋಟೋ.

ಸತ್ಯ: ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ಫೋಟೋ ಹಳೆಯದು. ಅದು ‘ಬೋಯಿಂಗ್ 787-8 ಡ್ರೀಮ್‌ಲೈನರ್’ ಹೆಸರಿನಿಂದ ಕರೆಯಲ್ಪಡುತ್ತದೆ. ಭಾರತದಲ್ಲಿ ವಿವಿಐಪಿ ಕಾರ್ಯಾಚರಣೆಗಳಿಗೆ ಬಳಸಲಾಗುವ ರೆಟ್ರೊಫಿಟೆಡ್ ಬೋಯಿಂಗ್ 777-300 ಇಆರ್ (‘ಏರ್ ಇಂಡಿಯಾ ಒನ್ (ಎಐ -160))’ ಅಲ್ಲ. ಅಲ್ಲದೆ, ಹೊಸ ವಿಮಾನದ ಖರೀದಿಯ ನಿಖರವಾದ ವೆಚ್ಚವು ತಿಳಿದಿಲ್ಲವಾದರೂ, ಹಿಂದಿನ ಮೂರು ಬಜೆಟ್‌ಗಳಲ್ಲಿ ಸರ್ಕಾರ ಒಟ್ಟು 4,632 ಕೋಟಿ ರೂಪಾಯಿಗಳನ್ನು ನಿಗದಿಪಡಿಸಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಫೋಟೋದಲ್ಲಿನ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ, ಅದೇ ರೀತಿಯ ವಿಮಾನದ ಆಂತರಿಕ ಫೋಟೋವನ್ನು ಅನೇಕ ವೆಬ್‌ಸೈಟ್‌ಗಳು ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ. 2017 ರಲ್ಲಿ ಪ್ರಕಟವಾದ ‘ದಿ ಟೈಮ್ಸ್’ ಲೇಖನದಲ್ಲಿ, ಫೋಟೋವು ‘ಬೋಯಿಂಗ್ 787-8 ಡ್ರೀಮ್‌ಲೈನರ್’ ಅನ್ನು ತೋರಿಸುತ್ತದೆ. ಹಾಗಾಗಿ ಅದು ಭಾರತದಲ್ಲಿ ವಿವಿಐಪಿ ಕಾರ್ಯಾಚರಣೆಗಳಿಗೆ ಬಳಸಲಾಗುವ ರೆಟ್ರೊಫಿಟೆಡ್ ಬೋಯಿಂಗ್ 777-300 ಇಆರ್ (‘ಏರ್ ಇಂಡಿಯಾ ಒನ್ (ಎಐ -160)’) ಅಲ್ಲ. ಅದೇ ಫೋಟೋವನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ರೆಟ್ರೊಫಿಟೆಡ್ ಬೋಯಿಂಗ್ 777-300 ಇಆರ್‌ನ ಆಂತರಿಕ ಫೋಟೋಗಳನ್ನು ‘ನ್ಯೂಸ್ 18’ ಫೋಟೋ ಗ್ಯಾಲರಿಯಲ್ಲಿ ಕಾಣಬಹುದು.

ಎರಡು ವಿಮಾನಗಳ ನಿಖರವಾದ ವೆಚ್ಚವು ತಿಳಿದಿಲ್ಲವಾದರೂ (ಮಾಧ್ಯಮ ವರದಿಗಳು ಇದು ಸುಮಾರು 8,400 ಕೋಟಿ ರೂ ಎಂದು ಅಂದಾಜಿಸಲಾಗಿರುವುದಾಗಿ ಎಂದು ಉಲ್ಲೇಖಿಸಲಾಗಿದೆ), ಕೇಂದ್ರ ಸರ್ಕಾರವು ತನ್ನ ಬಜೆಟ್‌ಗಳಲ್ಲಿ (2018-19, 2019-20 ಮತ್ತು 2020-21) ‘ವಿಶೇಷ ಹೆಚ್ಚುವರಿ ವಿಮಾನ ಕಾರ್ಯಾಚರಣೆಗಾಗಿ ಎರಡು ಹೊಸ ವಿಮಾನಗಳ ಖರೀದಿ’ಗಾಗಿ ಒಟ್ಟು 4,632 ಕೋಟಿ ರೂ. ನೀಡಿದೆ ಎಂದು ತಿಳಿದುಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪೋಸ್ಟ್ ಮಾಡಿದ ಚಿತ್ರವು ಪಿಎಂ ಮೋದಿ ಮತ್ತು ಇತರ ವಿವಿಐಪಿಗಳ ವಿಮಾನ ಕಾರ್ಯಾಚರಣೆಗಾಗಿ ಬಳಸಲಾಗುವ ರೆಟ್ರೊಫಿಟೆಡ್ ಬೋಯಿಂಗ್ 777-300 ಇಆರ್ (‘ಏರ್ ಇಂಡಿಯಾ ಒನ್’) ವಿಮಾನದ ಆಂತರಿತ ಫೋಟೋಗಳಲ್ಲ. ಬದಲಾಗಿ ಅದು ‘ಬೋಯಿಂಗ್ 787-8 ಡ್ರೀಮ್‌ಲೈನರ್’ ವಿಮಾನದ್ದಾಗಿದೆ.


ಇದನ್ನೂ ಓದಿ: Fact Check: ಮೋದಿಯವರಿಗೆ ರೈತರ ಬೆಂಬಲ ಬಿಂಬಿಸಲು ಬಂಗಾಳ ಬಿಜೆಪಿ ಮುಖ್ಯಸ್ಥರಿಂದ ತಪ್ಪು ಸಂದೇಶ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights