ಗಡಿ ಉದ್ವಿಗ್ನತೆಯ ನಡುವೆಯೂ ಭಾರತೀಯ ವೈದ್ಯನನ್ನು ಸ್ಮರಿಸಿದ ಚೀನಾ!

ಕಳೆದ ಕೆಲವು ತಿಂಗಳುಗಳಿಂದ ಭಾರತ ಮತ್ತು ಚೀನಾ ನಡುವಿನ ಬಿರುಕು ಹೆಚ್ಚಾಗಿದೆ. ಚೀನಾದ ಸೇನೆ ಗಡಿಯಲ್ಲಿ ಉದ್ವಿಗ್ನತೆಯ ವಾತಾವರಣವನ್ನು ಪದೇ ಪದೇ ಸೃಷ್ಠಿಸುತ್ತಲೇ ಇದೆ. ಇದರ ನಡುವೆಯೂ ಇಂದು ಭಾರತ ಮತ್ತು ಚೀನಾದ ಸ್ನೇಹ ಸಂಬಂಧವನ್ನು ಇಂದು ಚೀನಾ ಸ್ಮರಿಸುತ್ತಿದೆ. ಚೀನಾದಲ್ಲಿ ಸೇವೆ ಸಲ್ಲಿಸಿದ್ದ ಭಾರತೀಯ ಮೂಲದ ಡಾ. ದ್ವಾರಕನಾಥ್ ಕೊಟ್ನಿಸ್‌ ಅವರನ್ನು ಚೀನಾ ಇಂದು ನೆನಪಿಸಿಕೊಂಡು ಗೌರವ ಸಲ್ಲಿಸಿದೆ.

ಅಕ್ಟೋಬರ್‌ 11 ರಂದು ಡಾ.ದ್ವಾರಕನಾಥ್ ಕೊಟ್ನಿಸ್ ಅವರ 110 ನೇ ಜನ್ಮದಿನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವರ್ಚುವಲ್‌ ಕಾರ್ಯಕ್ರಮದಲ್ಲಿ ಚೀನಾದ ರಾಯಭಾರಿ ಕಚೇರಿಯ ಅಧಿಕಾರಿ ಮಾ-ಜಿಯಾ, ಚೀನಾ ಹಾಗೂ ಭಾರತದ ವಿಶ್ವವಿದ್ಯಾನಿಲಯದ ಪ್ರತಿನಿಧಿಗಳು ಭಾಗಿಯಾಗಿ ಗೌರವ ಸಲ್ಲಿಸಿದ್ದಾರೆ.

ಎರಡನೇ ಮಹಾ ಯುದ್ದದ ನಡೆಯುತ್ತಿರುವಾಗಲೇ ನಡೆದ ಚೀನಾ ಕ್ರಾಂತಿಯ ಸಂದರ್ಭದಲ್ಲಿ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಚೀನಾದಲ್ಲಿ ಭಾರತದ ಮಹಾರಾಷ್ಟ್ರದ ಮೂಲದ ಡಾ. ದ್ವಾರಕನಾಥ್ ಕೊಟ್ನಿಸ್‌ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ: ಸಚಿವ ಶ್ರೀ ರಾಮುಲು ಇಂದ ಆರೋಗ್ಯ ಇಲಾಖೆ ಕಸಿದುಕೊಂಡ ಬಿಎಸ್‌ವೈ! ಸಂಪುಟದಲ್ಲಿ ನಡೀತ್ತಿದ್ಯಾ ಸರ್ಜರಿ

ಈ ವರ್ಷ ಭಾರತ-ಚೀನಾದ ರಾಜತಾಂತ್ರಿಕ ಸಂಬಂಧ ಸ್ಥಾಪನೆಯಾಗಿ 70 ನೇ ವಾರ್ಷಿಕೋತ್ಸವಕ್ಕೆ ಸಾಕ್ಷಿಯಾಗಿದೆ. ಜಗತ್ತು ಹಿಂದೆಂದೂ ಕಂಡಿರದ ಮಹತ್ವದ ಬದಲಾವಣೆಗಳನ್ನು ನೋಡಿದ್ದು, ಚೀನಾ-ಭಾರತದ ಸಂಬಂಧದಲ್ಲಿಯೂ ತಾತ್ಕಾಲಿಕವಾದಂತಹ ಸಂಕಷ್ಟ ತಲೆದೋರಿದೆ, ನಾವು ಅತ್ಯಂತ ಗೌರವ ಘನತೆಗಳಿಂದ, ಅತ್ಯಂತ ಮಹತ್ವಪೂರ್ಣವಾದ ಡಾ. ಕೊಟ್ನಿಸ್ ಅವರ ಜನ್ಮದಿನವನ್ನು ಆಚರಣೆ ಮಾಡುತ್ತಿದ್ದೇವೆ, ಡಾ. ಕೊಟ್ನಿಸ್ ಅವರ ಮಾನವೀಯ ಮೌಲ್ಯಗಳನ್ನು ಎರಡೂ ದೇಶಗಳ ಯುವಕರು ಮುನ್ನಡೆಸಬೇಕಿದೆ ಎಂದು CPAFFCನ ಅಧ್ಯಕ್ಷ ಲಿನ್ ಸಾಂಗ್ಟಿಯನ್ ಹೇಳಿದ್ದಾರೆ.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ 1938 ರಲ್ಲಿ ಚೀನಾಗೆ ಸಹಾಯ ಮಾಡಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಇಲ್ಲಿಂದ ಚೀನಾಗೆ ಕಳಿಸಿದ್ದ ಐದು ವೈದ್ಯರಿದ್ದ ತಂಡದಲ್ಲಿ ಡಾ. ಕೊಟ್ನಿಸ್ ಸಹ ಇದ್ದರು. ಚೀನಾ ಕ್ರಾಂತಿಯ ನಂತರ ಚೀನಾದಲ್ಲೇ ಉಳಿದ ಕೊಟ್ನಿಸ್ ಅವರು ಚೀನಾ ಪ್ರಜೆ ಗುವೊ ಕಿಂಗ್ಲಾನ್ ಅವರನ್ನು ವಿವಾಹವಾಗಿದ್ದರು. 1942 ರಲ್ಲಿ ಚೀನಾದ ಕಮ್ಯುನಿಸ್ಟ್ ಪಕ್ಷವನ್ನು ಸೇರಿದ್ದರು.

ಚೀನಾದಲ್ಲಿ ಕೊಟ್ನಿಸ್ ಅವರು ಸಲ್ಲಿಸಿದ ಸೇವೆಯನ್ನು ಚೀನಾದ ನಾಯಕ ಮಾವೋ ಝೆಡಾಂಗ್ ಸ್ಮರಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಚೀನಾದ ಹಲವು ನಗರಗಳಲ್ಲಿ ಕೊಟ್ನಿಸ್ ಅವರ ಸ್ಮಾರಕಗಳಿವೆ.

ಡಾ.ಕೊಟ್ನಿಸ್ ಕಾರ್ಯನಿರ್ವಹಿಸಿದ್ದ ಹೆಬೀ ಪ್ರಾಂತ್ಯದ ಶಿಜಿಯಾಜ್ಯೂಂಗ್ ನಲ್ಲಿರುವ ವೈದ್ಯಕೀಯ ಶಾಲೆಯಲ್ಲಿ ಕೊಟ್ನಿಸ್ ಅವರ ಪುತ್ಥಳಿ ಇದ್ದು ಅದಕ್ಕೆ ಕೆ ಡಿಹುವಾ ಎಂದೇ ನಾಮಕರಣ ಮಾಡಲಾಗಿದ್ದು. ಶಿಜಿಯಾಜ್ಯೂಂಗ್ನ ಕೆ ಡಿಹುವಾ ವೈದ್ಯಕೀಯ ವಿಜ್ಞಾನ ಮಾಧ್ಯಮಿಕ ವಿಶೇಷ ಶಾಲೆ ಎಂದೇ ಗುರುತಿಸಿಕೊಂಡಿದೆ.


ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಪ್ರಾಮಾಣಿಕವಾಗಿ ದುಡಿಯುವವರನ್ನು ತುಳಿಯಲಾಗುತ್ತಿದೆ: ನಟಿ ಖುಷ್ಬೂ ಸುಂದರ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights