ಕಾಂಗ್ರೆಸ್‌ನಲ್ಲಿ ಪ್ರಾಮಾಣಿಕವಾಗಿ ದುಡಿಯುವವರನ್ನು ತುಳಿಯಲಾಗುತ್ತಿದೆ: ನಟಿ ಖುಷ್ಬೂ ಸುಂದರ್

ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವ ನಟಿ ಖುಷ್ಬೂ ಸುಂದರ್, ಕಾಂಗ್ರೆಸ್‌ನಲ್ಲಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಕ್ಷದಲ್ಲಿ ಕೆಲವರು ಪ್ರಾಮಾಣಿಕವಾಗಿ ಕೆಲಸ ಮಾಡುವವರನ್ನು ನಿಗ್ರಹಿದುತ್ತಿದೆ. ಇಂತಹ ಧೋರಣೆಯನ್ನು ಪ್ರತಿಭಟಿಸಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

2014ರಲ್ಲಿ ಪಕ್ಷವು ಹೀನಾಯ ಸೋಲುಂಡ ಬಳಿಕವೂ ಪಕ್ಷಕ್ಕೆ ಸೇಪರ್ಡೆಯಾಗಿದ್ದೆ. ಪ್ರಾಮಾಣಿಕವಾಗಿ ದುಡಿಯುವ ಗುರಿಯನ್ನಷ್ಟೇ ಹೊಂದಿದ್ದು, ಯಾವುದೇ ಮಾನ್ಯತೆ, ಖ್ಯಾತಿ ಅಥವಾ ಇತರ ಲಾಭವಿಲ್ಲದೇ ಪಕ್ಷಕ್ಕಾಗಿ ದುಡಿದ್ದೇನೆ ಎಂದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಖುಷ್ಬೂ ಪತ್ರ ಬರೆದಿದ್ದಾರೆ.

ಪಕ್ಷದಲ್ಲಿ ವಾಸ್ತವ ಪರಿಸ್ಥಿತಿಯ ಸಂಪರ್ಕ ಇಲ್ಲದವರು ಅಥವಾ ಸಾರ್ವಜನಿಕವಾಗಿ ಗುರುತಿಸಿಕೊಳ್ಳದ ವ್ಯಕ್ತಿಗಳು ನಿಯಂತ್ರಣ ಹೇರುತ್ತಿದ್ದಾರೆ ಎಂದಿದ್ದಾರೆ. ಈ ಮೂಲಕ ಹಲವು ವರ್ಷಗಳ ಜೊತೆಗಿನ ಕಾಂಗ್ರೆಸ್ ಒಡನಾಟವನ್ನು ಕಳೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರೆಯಾಗಿದ್ದ ಖುಷ್ಪೂ ಅವರು ಕಾಂಗ್ರೆಸ್ನ ಸಾಮಾನ್ಯ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದು, ಕಾಂಗ್ರೆಸ್‌ನಿಂದ ಹೊರಬಂದಿದ್ದಾರೆ. ಈ ಬೆನ್ನಲ್ಲೆ ಅವರು ಬಿಜೆಪಿ ಸೇರಬಹುದು ಎಂದು ಹೇಳಲಾಗುತ್ತಿದೆ. ಆದರೆ, ಈ ಹಿಂದೆ ಅವರು ಬಿಜೆಪಿ ಸೇರುವುದಿಲ್ಲ ಎಂದೂ ಹೇಳಿದ್ದರು.


ಇದನ್ನೂ ಓದಿ: ಸಚಿವ ಶ್ರೀ ರಾಮುಲು ಇಂದ ಆರೋಗ್ಯ ಇಲಾಖೆ ಕಸಿದುಕೊಂಡ ಬಿಎಸ್‌ವೈ! ಸಂಪುಟದಲ್ಲಿ ನಡೀತ್ತಿದ್ಯಾ ಸರ್ಜರಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights