ಸಚಿವ ಶ್ರೀ ರಾಮುಲು ಇಂದ ಆರೋಗ್ಯ ಇಲಾಖೆ ಕಸಿದುಕೊಂಡ ಬಿಎಸ್‌ವೈ! ಸಂಪುಟದಲ್ಲಿ ನಡೀತ್ತಿದ್ಯಾ ಸರ್ಜರಿ

ಸಚಿವ ಬಿ ಶ್ರೀರಾಮುಲು ಅವರಿಗೆ ನೀಡಲಾಗಿದ್ದ ಆರೋಗ್ಯ ಖಾತೆಯನ್ನು ಕಸಿದುಕೊಂಡು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಅವರಿಗೆ ನೀಡಲಾಗಿದೆ.

ನಿಯಂತ್ರಣಕ್ಕೆ ಬಾರದ ಕೊರೊನಾ ಹಿನ್ನಲೆಯಲ್ಲಿ ಸಿಎಂ ಬಿಎಸ್‌ ಯಡಿಯೂರಪ್ಪ, ವೈದ್ಯಕೀಯ ಕ್ಷೇತ್ರದ ಸಮನ್ವಯಕ್ಕಾಗಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯನ್ನುಒಬ್ಬರಿಗೇ ವಹಿಸಿದ್ದಾರೆ. ಶ್ರೀ ರಾಮುಲು ಅವರಿಗೆ ಸಮಾಜ ಕಲ್ಯಾಣ ಇಲಾಖೆ ಜವಾಬ್ದಾರಿ ವಹಿಸಲಾಗಿದೆ.

ಲಾಕ್‌ಡೌನ್‌ ನಂತರದಲ್ಲಿ ಕೊರೊನಾ ಪರಿಸ್ಥಿತಿ ಬಿಗಡಾಯಿಸಿದೆ. ಆರೋಗ್ಯ ಹಾಗೂ ವೈದ್ಯ ಶಿಕ್ಷಣ ಇಲಾಖೆ ನಡುವಿನ ಸಮನ್ವಯದ ಕೊರತೆಯೇ ಇದಕ್ಕೆ ಕಾರಣ ಎಂದು ಹೇಳಲಾಗಿದ್ದು, ಈ ಕಾರಣದಿಂದಾಗಿ ಎರಡೂ ಇಲಾಖೆಗಳ ಜವಾನ್ದಾರಿಯನ್ನು ಒಬ್ಬರೇ ಸಚಿವರ ಸುಪರ್ದಿಗೆ ವಹಿಸಬೇಕು. ಆರೋಗ್ಯ ಕ್ಷೇತ್ರದಲ್ಲಿ ತಜ್ಞತೆ ಹೊಂದಿದವರಿಗೇ ಈ ಹೊಣೆ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಹಾಗಾಗಿ ವೃತ್ತಿಯಿಂದ ವೈದ್ಯರೂ ಆಗಿರುವ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌ ಅವರಿಗೆ ಆರೋಗ್ಯ ಇಲಾಖೆಯ ಉಸ್ತುವಾರಿಯನ್ನೂ ನೀಡಲಾಗಿದೆ.

ಇದನ್ನೂ ಓದಿ: ಶಿರಾ ಮತ್ತು ಆರ್‌ಆರ್‍ ನಗರ ಉಪ ಚುನಾವಣೆಗೆ ಕಾಂಗ್ರೆಸ್ ಭರದ ಸಿದ್ಧತೆ : ಮಂಕಾದ ಬಿಜೆಪಿ!

ಈಗಾಗಲೇ ಶ್ರೀರಾಮುಲು ಬತ್ತಳಿಕೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಕೆ ಮತ್ತು ಆರೋಗ್ಯ ಇಲಾಖೆಗಳಿದ್ದವು. ಅವುಗಳನ್ನು ಆರೋಗ್ಯ ಇಲಾಖೆಯನ್ನು ಕಸಿದುಕೊಂಡು, ಆ ಜಾಗಕ್ಕೆ ಸಮಾಜ ಕಲ್ಯಾಣ ಇಲಾಖೆಯ ಉಸ್ತುವಾರಿಯನ್ನು ನೀಡಲಾಗಿದೆ.

ಆದರೆ, ಸಮಾಜಕಲ್ಯಾಣ ಇಲಾಖೆಯು ಡಿಸಿಎಂ ಗೋವಿಂದ ಕಾರಜೋಳ ಅವರ ಬತ್ತಳಿಕೆಯಲ್ಲಿತ್ತು. ಅದನ್ನು ಕಸಿಕೊಂಡಿರುವುದರಿಂದಾಗಿ ಕಾರಜೋಳ ಬಳಿ ಲೋಕೋಪಯೋಗಿ ಇಲಾಖೆ ಮಾತ್ರ ಉಳಿದಿದೆ.

ಖಾತೆ ಹಂಚಿಕೆಯಲ್ಲಿನ ಸಣ್ಣ ಪ್ರಮಾಣದ ಬದಲಾವಣೆ ಇದಾಗಿದ್ದರೂ ಮುಂದಿನ ದಿನಗಳಲ್ಲಿ ಸಂಪುಟದಲ್ಲಿ ಮೇಜರ್‌ ಸರ್ಜರಿ ಕೈಗೊಳ್ಳಲು ಇದು ಮುನ್ನುಡಿ ಎನ್ನಲಾಗಿದೆ. ಉಪ ಚುನಾವಣೆ ಬಳಿಕ ಸಂಪುಟ ಪುನರ್‌ರಚನೆ ನಿರೀಕ್ಷಿತ. ಬಹುತೇಕ ನವೆಂಬರ್‌ ಅಂತ್ಯ ಅಥವಾ ಡಿಸೆಂಬರ್‌ ಪ್ರಾರಂಭದಲ್ಲಿಈ ಪ್ರಕ್ರಿಯೆ ನಡೆಯಬಹುದು. ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ದೃಷ್ಟಿಯಿಂದ ಹಲವರ ಖಾತೆ ಬದಲಾವಣೆಯೂ ಆಗಬಹುದು. ಅದಕ್ಕೆ ಈಗಿನ ಖಾತೆ ಬದಲಾವಣೆ ಮುನ್ಸೂಚನೆಯಂತಿದೆ ಎಂದು ಕೇಳಿಬಂದಿದೆ.


ಇದನ್ನೂ ಓದಿ: ಬಿಜೆಪಿ ಸಂಧಾನಕ್ಕೆ ಬಗ್ಗದ ಬಂಡಾಯಗಾರರು: ಚುಣಾವಣೆಯಲ್ಲಿ ಸ್ವತಂತ್ರ್ಯ ಸ್ಪರ್ಧೆ ಖಚಿತ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights