ಬಿಜೆಪಿ ಸಂಧಾನಕ್ಕೆ ಬಗ್ಗದ ಬಂಡಾಯಗಾರರು: ಚುಣಾವಣೆಯಲ್ಲಿ ಸ್ವತಂತ್ರ್ಯ ಸ್ಪರ್ಧೆ ಖಚಿತ!

ವಿಧಾನ ಪರಿಷತ್‌ಗೆ ಪದವೀದರರ ಕ್ಷೇತ್ರದಿಂದ ನಾಲ್ವರು ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಯೂ ಮುಗಿದೆ. ಆಗ್ನೇಯ ಪದವೀದರ ಕ್ಷೇತ್ರದಲ್ಲಿ ನಡೆಯುವ ಪರಿಷತ್ ಚುನಾವಣೆಗೆ 15 ನಾಮಪತ್ರಗಳು ಅಂಗೀಕಾರಗೊಂಡಿವೆ. ಅಕ್ಟೋಬರ್ 12 ರಂದು ನಾಮಪತ್ರ ಹಿಂಪಡೆಲು ಕಡೆ ದಿನಾಂಕವಾಗಿದ್ದು, ಬಿಜೆಪಿಯು ಪಕ್ಷೇತರ ಅಭ್ಯರ್ಥಿಗಳನ್ನು ನಾಮಪತ್ರ ಹಿಂಪಡೆಯುವಂತೆ ಮನವೊಲಿಸಲು ಮುಂದಾಗಿದೆ.

ಆಗ್ನೇಯ ಪದವೀದರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿರುವ ಬಿಜೆಪಿಯಿಂದ ಬಂಡಾಯ ಎದ್ದು ಸ್ವತಂತ್ರ್ಯ ಅಭ್ಯರ್ಥಿಗಳಾಗಿರುವ ಡಿ.ಟಿ ಶ್ರೀನಿವಾಸ್ ಮತ್ತು ಡಾ. ಹಾಲನೂರು ಎಸ್ ಲೇಪಾಕ್ಷಿ ನಾಮಪತ್ರ ವಾಪಸ್ ಪಡೆಯುವಂತೆ ಬಿಜೆಪಿ ಸಂಧಾನ ನಡೆಸಿದ್ದು, ಬಂಡಾಯಗಾಗರರು ಸಂಧಾನಕ್ಕೆ ಮಣಿಯದೇ ಸ್ಪರ್ಧೆ ಖಚಿತ ಎಂದಿದ್ದಾರೆ.

ನಾನು ನಾಮಪತ್ರ ಸಲ್ಲಿಕೆಗೂ ಮನ್ನ ಸಿಎಂ ಯಡಿಯೂರಪ್ಪ ಮತ್ತು ಹಲವು ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದೆ, ಟಿಕೆಟ್ ನೀಡುವಂತೆ ಮನವಿ ಮಾಡಿದ್ದೆ. ಆದರೆ ಆಗ ನನ್ನ ಮನವಿಯನ್ನು ಪರಿಗಣಿಸಲಿಲ್ಲ. ಈಗ ಸಮಯ ಮುಗಿದಿದೆ. ನಾನು ಕೋಲಾರ ಮತ್ತು ಚಿಕ್ಕಬಳ್ಳಾಪುರಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದೇನೆ. ಕ್ಷೇತ್ರದ ಮತದಾರರು ನನ್ನನ್ನು ಬೆಂಬಲಿಸುತ್ತಿದ್ದು, ಗೆಲ್ಲುವ ಭರವಸೆಯಿದೆ ಎಂದು ಬಂಡಾಯ ಅಭ್ಯರ್ಥಿ ಡಿ.ಟಿ ಶ್ರೀನಿವಾಸ್ ಹೇಳಿದ್ದಾರೆ.

ಡಿ.ಟಿ ಶ್ರೀನಿವಾಸ್ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವುದು ನನಗೆ ಮುಜುಗರ ಉಂಟು ಮಾಡುತ್ತಿದೆ. ಪಕ್ಷದ ಟಿಕೆಟ್ ಗಾಗಿ ನಾವು ಪ್ರಬಲ ಆಕಾಂಕ್ಷಿಗಳಾಗಿದ್ದೆವು. ಪಕ್ಷದ ಚಿಹ್ನೆಯ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಅವರು ಪರಿಷತ್ ನಲ್ಲಿ ಬಿಜೆಪಿಗೆ ಬೆಂಬಲ ನೀಡಲಿದ್ದಾರೆ ಎಂದು ಹಿರಿಯೂರು ಬಿಜೆಪಿ ಶಾಸಕಿ ಕೆ ಪೂರ್ಣಿಮಾ ಹೇಳಿದ್ದಾರೆ.

ಪಕ್ಷದ ವರಿಷ್ಠರು ಬಂಡಾಯಗಾರರೊಂದಿಗೆ ಚರ್ಚಿಸಲಿದ್ದಾರೆ. ಅವರು ತಮ್ಮ ನಾಮಪತ್ರ ವಾಪಸ್ ಪಡೆಯಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಚಿದಾನಂದಗೌಡ ಭರವಸೆ ವ್ಯಕ್ತ ಪಡಿಸಿದ್ದಾರೆ.


ಇದನ್ನೂ ಓದಿ: ಮೀಸಲು ಅನ್ಯಾಯ ಮಾಡಿದ್ದಾರೆಂದು ರಾಜ್ಯದ ಅಡ್ವೋಕೇಟ್ ಜನರಲ್ ರಾಜೀನಾಮೆಗೆ ಎಚ್.ಡಿ ರೇವಣ್ಣ ಪಟ್ಟು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights