ಫ್ಯಾಕ್ಟ್‌ಚೆಕ್: ಗಾಂಧೀಜಿ ಬ್ರಿಟೀಷ್ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು ನಿಜವೇ?
ಭಾರತದ ಸ್ವಾತಂತ್ರ ಹೋರಾಟದಲ್ಲಿ ಗಾಂಧೀಯವರ ಪಾತ್ರ ದೊಡ್ಡದು. ಅಹಿಂಸಾವಾದಿಯಾಗಿದ್ದ ಗಾಂಧೀಜಿ ಸೇನೆಯಲ್ಲಿ ಕೆಲಸ ಮಾಡಿದ್ದಾರೆ ಎಂದರೆ ನೀವು ನಂಬುತ್ತೀರಾ? ಆದರೆ ಅಂತಹದೊಂದು ಸುದ್ದಿ ಸಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಮಹಾತ್ಮ ಗಾಂಧಿ ಅವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಬರುವ ಮುನ್ನ ಬ್ರಿಟಿಷ್ ಸೇನೆಯ ಸೇವೆಯಲ್ಲಿದ್ದರು. ಬ್ರಿಟನ್ ಸೇನೆಯಲ್ಲಿ ಅವರು ಇದ್ದಾಗ ತೆಗೆಸಿಕೊಂಡ ಚಿತ್ರ ಇದು ಎಂಬ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಹರಿದಾಡುತ್ತಿದೆ. ಜತೆಗೆ ಕಪ್ಪು–ಬಿಳುಪಿನ ಚಿತ್ರವನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಗಾಂಧೀಜಿಯವರು ಬ್ರಿಟೀಷ್ ಸೇನಾ ಸಮವಸ್ತ್ರದಲ್ಲಿ ಇರುವುದನ್ನು ಕಾಣಬಹುದು. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
What Gandhi ji doing in British Army 😭😭😭 ???
Why british gave him medal of war ??? pic.twitter.com/kT2Ptv9cVE
— Factual Hindu (@gujjubhaiya111) May 24, 2022
ಫ್ಯಾಕ್ಟ್‌ಚೆಕ್:
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಅಕ್ಟೋಬರ್ 2, 2019 ರ ಟೈಮ್ಸ್ ಆಫ್ ಇಂಡಿಯಾ ಮತ್ತು ಜೂನ್ 27, 2010 ರ ಲೈವ್‌ಮಿಂಟ್ ಲೇಖನ ಲಭ್ಯವಾಯಿತು.
ಈ ವರದಿಗಳ ಪ್ರಕಾರ ಮಹಾತ್ಮ ಗಾಂಧಿ ಅವರು ಬ್ರಿಟಿಷ್ ಸೇನೆಯಲ್ಲಿ ಎಂದಿಗೂ ಸೇವೆಯಲ್ಲಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿರುವ ಚಿತ್ರಕ್ಕೂ, ಅವರು ಬ್ರಿಟಿಷ್ ಸೇವೆಯಲ್ಲಿದ್ದರು ಎಂಬುದಕ್ಕೂ ಸಂಬಂಧವಿಲ್ಲ ಎಂದು ದಿ ಲಾಜಿಕಲ್ ಇಂಡಿಯನ್ ವರದಿ ಮಾಡಿದೆ. ಗಾಂಧಿ ಅವರು ದಕ್ಷಿಣ ಆಫ್ರಿಕಾದಲ್ಲಿ ಇದ್ದಾಗ, ಎರಡು ಫುಟ್‌ಬಾಲ್ ತಂಡಗಳನ್ನು ಕಟ್ಟಿದ್ದರು. ಆ ಎರಡೂ ತಂಡಗಳ ಜತೆಗೆ 1913ರಲ್ಲಿ ಸಿರ್ಕಾದಲ್ಲಿ ಗಾಂಧಿ ಅವರು ತೆಗೆಸಿಕೊಂಡಿದ್ದ ಚಿತ್ರ ಇದು. ಈ ಚಿತ್ರವನ್ನು ತಪ್ಪು ಮಾಹಿತಿಗಳೊಂದಿಗೆ ಹಂಚಿ ಕೊಳ್ಳಲಾಗಿದೆ.
ಈ ಕುರಿತು ಮತ್ತಷ್ಟು ಮಾಹಿತಿ ಪಡೆಯಲು ಸರ್ಚ್ ಮಾಡಿದಾಗ, ಸೆಪ್ಟೆಂಬರ್ 27, 2014 ರ ಡೆಕ್ಕನ್ ಹೆರಾಲ್ಡ್‌ನ ಲೇಖನಕ್ಕೆ ಲಭ್ಯವಾಯಿತು. ಚಿತ್ರದಲ್ಲಿ ಗಾಂಧಿ ಮತ್ತು ಇಂಡಿಯನ್ ಸ್ಟ್ರೆಚರ್-ಬೇರರ್ ಕಾರ್ಪ್ಸ್‌ನ ಇತರ ಸದಸ್ಯರಿದ್ದರು, ಇದನ್ನು ಸಾಮಾನ್ಯವಾಗಿ ಇಂಡಿಯನ್ ಆಂಬ್ಯುಲೆನ್ಸ್ ಕಾರ್ಪ್ಸ್ ಎಂದು ಕರೆಯಲಾಗುತ್ತದೆ. 1899-1902 ರ ಎರಡನೇ ಬೋಯರ್ ಯುದ್ಧ ಮತ್ತು 1906 ರ ಜುಲು ಯುದ್ಧದ ಸಮಯದಲ್ಲಿ ಗಾಯಗೊಂಡವರಿಗೆ ಹಣವನ್ನು ಸಂಗ್ರಹಿಸಲು ಸಹಾಯ ಮಾಡಿದರು.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಟೋಗಳನ್ನು ಬಳಸಿ ಮಾಡಲಾದ ಪ್ರತಿಪಾದನೆಯು ತಪ್ಪಾಗಿದ್ದು, ವಾಸ್ತವವಾಗಿ ಈ ಚಿತ್ರಗಳಲ್ಲಿ ಒಂದು ಫೋಟೋ ಗಾಂಧಿ ಪ್ರಾರಂಭಿಸಿದ ಫುಟ್‌ಬಾಲ್ ಕ್ಲಬ್‌ನೊಂದಿಗೆ ಇದೆ, ಮತ್ತು ಇನ್ನೊಂದು ಯುದ್ಧ ಸಮಯದಲ್ಲಿ ಆಂಬ್ಯುಲೆನ್ಸ್ ಕಾರ್ಪ್ಸ್‌ನೊಂದಿಗೆ ಇದೆ, ಗಾಂಧಿ ಸ್ವಯಂ ಸ್ಪೂರ್ತಿಯಿಂದ ಸಲ್ಲಿಸಿದ ಸೇವೆಗಾಗಿ ಅವರಿಗೆ ಪದಕಗಳನ್ನು ನೀಡಲಾಯಿತು. ಆದರೆ ಗಾಂಧಿ ಅವರು ಬ್ರಿಟಿಷ್ ಸೇನೆಯ ಸೇವೆಯಲ್ಲಿ ಇದ್ದರು ಎಂಬುದು ಸುಳ್ಳು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಅಸಾದುದ್ದೀನ್ ಓವೈಸಿ ಶ್ರೀಕೃಷ್ಣ ಭಜನೆ ಹಾಡಿದ್ದು ನಿಜವೇ?