ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ : ಹವಾಲಾ ಹಣ ಹರಿದಿರುವ ಶಂಕೆ : ಚುರುಕುಗೊಂಡ ತನಿಖೆ!

ರಾಜ್ಯವನ್ನು ಬೆಚ್ಚಿಬೀಳಿಸಿರುವ ಹಣವಂತರ ಮಾದಕ ನಂಟಿನ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಸ್ಯಾಂಡಲ್ವುಡ್ಡಿಗೆ ಮಸಿ ಬಳಿದಿರುವ ಈ ಪ್ರಕರಣದಲ್ಲಿ ಕೇವಲ ಧನಿಕರು ಪಾಲ್ಗೊಂಡಿರುವುದಷ್ಟೇ ಅಲ್ಲದೇ ಇಲ್ಲ ವ್ಯಾಪಕವಾಗಿ ಹವಾಲಾ ಹಣ ಹರಿದಿರುವ ಅನುಮಾನ ದಟ್ಟವಾಗಿದೆ.

ಡ್ರಗ್ಸ್ ದಂಧಗೆ ಹವಾಲಾ ಹಣ ಬಳಕೆಯಾಗಿರುವ ಬಗ್ಗೆ ಈವರೆಗಿನ ತನಿಖೆ ವೇಳೆ ಅಂದಾಜು ಬಂದಿದೆ ಎನ್ನಲಾಗಿದೆ. ಚಿತ್ರರಂಗದವರೂ ಸೇರಿದಂತೆ ಗಣ್ಯರನ್ನು ಕಲೆ ಹಾಕಿ ಆಯೋಜಿಸಲಾಗುತ್ತಿದ್ದ ಮೋಜುಕೂಟಗಳಿಗೆ ದೇಶ ವಿದೇಶಗಳಿಂದ ಹಣ ಬರುತ್ತಿತ್ತು. ಈ ಹಣ ಹವಾಲಾ ಮೂಲಕವೇ ಸರಬರಾಜಾಗುತ್ತಿತ್ತು ಎಂಬುದು ಪೊಲೀಸರ ಶಂಕೆಯಾಗಿದೆ.

ಮೋಜುಕೂಟದ ಹೆಸರಿನಲ್ಲಿ ಕೋಟ್ಯಂತರ ರೂಗಳ ಅಕ್ರಮ ಹಣದ ವಹಿವಾಟು ನಡೆದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ ಎಂದು ಹೇಳಲಾಗುತ್ತಿದೆ.ಈ ಜಾಡಿನಲ್ಲಿ ಪ್ರಕರಣದ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಲು ಅಪರಾಧ ವಿಭಾಗದ ಪೊಲೀಸರು ನಿರ್ಧರಿಸಿದ್ದಾರೆ.

ಈ ಮಧ್ಯೆ ಮಾದಕ ಜಾಲದಲ್ಲಿ ಸಕ್ರಿಯನಾಗಿರುವ ಆರೋಪದಡಿ ವೈಭವ್ ಜೈನ್ ಎಂಬಾತನನ್ನು ಸಿಸಿಬಿ ಪೊಲೀಸರು ಶನಿವಾರ ಬಂಧಿಸಿದ್ದಾರೆ., ಸಿನಿ ತಾರೆಯರು, ಉದ್ಯಮಿಗಳು, ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳಿಗಾಗಿ ಪಾರ್ಟಿ ಆಯೋಜಿಸುವ ಹೊಣೆಯನ್ನು ವೈಭವ್ ಜೈನ್ ವಹಿಸಿಕೊಳ್ಳುತ್ತಿದ್ದ ಎಂದೂ ಸಿಸಿಬಿ ಮೂಲಗಳಿಂದ ತಿಳಿದುಬಂದಿದೆ.

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಸಂಬಂಧ ತಮಗಿರುವ ಮಾಹಿತಿ ನೀಡಲು ಪ್ರಶಾಂತ್ ಸಂಬರಗಿ ಸಿಸಿಬಿಯ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಸಂಬಗರಗಿ ಅವರನ್ನು ಪ್ರಾಥಮಿಕ ವಿಚಾರಣೆಗೆ ಒಳಪಸಿಡಿಸಿರುವ ಪೊಲೀಸರು ತಮ್ಮ ಬಳಿ ಇರುವ ಸಾಕ್ಷಿಗಳ ಸಮೇತ ಮತ್ತೊಮ್ಮೆ ಶುಕ್ರವಾರ ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights